ಹಾಸನ: ಶಾಲೆಯಲ್ಲಿ ಮಕ್ಕಳಿಗೆ ಬುದ್ಧೀ ಹೇಳಬೇಕಾದವರು ಇವರು. ಒಬ್ಬರಿಗೊಬ್ಬರು ಜಗಳ ಮಾಡಬಾರದು, ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ಪಾಠ ಮಾಡಬೇಕಾದ ಇಬ್ಬರು ಶಿಕ್ಷಕರಿಯರು ಮಕ್ಕಳ ಎದುರೇ ಕಿತ್ತಾಡಿಕೊಳ್ಳುತ್ತಾರೆ. ಯಾಕ್ರೀ ಹೀಗೆಲ್ಲ ಮಾಡ್ತೀರ ಎಂದು ಕೇಳಲು ಬಂದ ಪೋಷಕರನ್ನೇ ಏಕವಚನದಲ್ಲಿ ಬೈಯುತ್ತಾರೆ. ಸರ್ಕಾರಿ ಶಾಲೆಯ ಶಿಕ್ಷಕಿಯರಿಬ್ಬರ ನಡುವೆ ನಿರಂತರ ಜಗಳದ ಕಾರಣಾಂತರದಿಂದ ಬೇರೆ ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಪೋಷಕರು ಪಟ್ಟು ಹಿಡಿದಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಕೆರೋಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗಿತಾಂಜಲಿ ಮತ್ತು ಸಂಧ್ಯಾ ಎಂಬ ಶಿಕ್ಷಕಿಯರಿಬ್ಬರ ನಡುವೆ ಜಗಳ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ | ಗಂಡನ ಜತೆ ಜಗಳ: ಆರು ಮಕ್ಕಳನ್ನು ಬಾವಿಗೆ ಎಸೆದ ಮಹಿಳೆ, ಮುಂದೇನಾಯ್ತು?
ಇಬ್ಬರೂ ಅನೇಕ ವರ್ಷಗಳಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳ ಮುಂದೆಯೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಶಾಲೆಗೆ ಆಗಮಿಸಿದ್ದಾರೆ. ಇದರ ಬಗ್ಗೆ ಪೋಷಕರು ವಿಚಾರಿಸಿದಾಗ ಪೊಷಕರೊಂದಿಗೂ ಶಿಕ್ಷಕಿಯರು ಜಗಳವಾಡಿದ್ದಾರೆ.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಲ್ಲರಿಗೂ ಏಕ ವಚನದಲ್ಲಿ ಶಿಕ್ಷಕಿಯರು ನಿಂದಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂದಪಟ್ಟಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಬೇಸತ್ತು, ಇಬ್ಬರು ಶಿಕ್ಷಕಿಯರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ತಮ್ಮ ಮಕ್ಕಳಿಗೆ ಟಿಸಿ ಕೊಟ್ಟುಬಿಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ | ಜಗಳ ಬಿಡಿಸಲು ಹೋದವನ ಕೊಲೆ