ಹಾಸನ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 75ರ ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ಕ್ಯಾಂಟರ್ ಹಾಗೂ ಮಾರುತಿ-800 ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಳ್ಳೇ ಮೃತಪಟ್ಟು. ಮೂವರು ಗಾಯಗೊಂಡಿದ್ದಾರೆ.
ತಮಿಳುನಾಡು ಹೊಸೂರು ಮೂಲದ ಅಂಜನಪ್ಪ (40), ಅವರ ಪುತ್ರ ಕಾರ್ತಿಕ್ (17) ಮೃತರು. ಪುನೀತ್(15), ಕಾರ್ತಿಕ್ (19), ರಾಮಚಂದ್ರ (40) ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡು ಕಾರಿನಲ್ಲಿ ಧರ್ಮಸ್ಥಳಕ್ಕೆ ಹತ್ತು ಜನರು ತೆರಳುತ್ತಿದ್ದರು. ಮುಂಜಾನೆ 4-30 ರ ಸುಮಾರಿನಲ್ಲಿ ಭೀಕರ ಅಪಘಾತ ನಡೆದಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Flood effects | ಭೀಕರ ಮಳೆಗೆ ನಲುಗಿದ ಅಸ್ಸಾಂ, ಮೇಘಾಲಯ: ಪ್ರವಾಹಕ್ಕೆ ಸಿಲುಕಿ 31 ಮಂದಿ ಸಾವು