ಹಾಸನ: ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದ ಪಂಪ್ ಹೌಸ್‌ನಲ್ಲಿ ಚಾವಣಿ ಶೀಟ್ ಸರಿಪಡಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿಬಿದ್ದು ಕೆಲಸಗಾರ ಸುರೇಶ್ ಎಂಬುವರು ಮೃತಪಟ್ಟಿದ್ದಾರೆ.
ಗುರುವಾರ ಬೆಳಗ್ಗೆ ಕೆಲಸ ಮಾಡುತ್ತಿದ್ದಾಗ 50 ಅಡಿ ಎತ್ತರದಿಂದ ಸುರೇಶ್ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲಸ ಮಾಡುವಾಗ ಸೇಫ್ ಬೆಲ್ಟ್ ಧರಿಸದೇ ಇರುವುದೇ ಈ ದುರ್ಘಟನೆ ಸಂಭವಿಸಲು ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | ಬಾಂಗ್ಲಾದಲ್ಲಿ ಅಪಘಾತಕ್ಕೀಡಾದ ಕಾಶ್ಮೀರದ ವಿದ್ಯಾರ್ಥಿಯ ಏರ್‌ಲಿಫ್ಟ್, ಕೇಂದ್ರ ಸರ್ಕಾರದ ತುರ್ತು ಕ್ರಮ