Site icon Vistara News

Gruha Jyoti Scheme: ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದ್ದೀರಾ? ಸ್ವೀಕೃತವಾಗಿದೆಯೋ, ಇಲ್ಲವೋ ಪರಿಶೀಲಿಸಿಕೊಳ್ಳಿ!

Gruha Jyoti Scheme application

ಬೆಂಗಳೂರು: 200 ಯೂನಿಟ್‌ವರೆಗೆ ಗೃಹ ಬಳಕೆಯ ವಿದ್ಯುತ್‌ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ (Gruha Jyoti Scheme) ರಾಜ್ಯದಲ್ಲಿ ನಿತ್ಯ ಸಾವಿರಾರು ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ, ಈಗಾಗಲೇ ಅರ್ಜಿ ಸಲ್ಲಿಸಿರುವುವವರು ತಮ್ಮ ಅರ್ಜಿ ಸ್ವೀಕೃತವಾಗಿದೆಯೋ, ಇಲ್ಲವೋ ಎಂಬುವುದನ್ನು ಒಮ್ಮೆ ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಏಕೆಂದರೆ ತಾಂತ್ರಿಕ ಅಥವಾ ತಪ್ಪು ಮಾಹಿತಿ ಕಾರಣದಿಂದ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆ ಇರುವುದರಿಂದ ಅರ್ಜಿ ಸ್ಥಿತಿಗತಿ ಬಗ್ಗೆ ಅರ್ಜಿದಾರರು ಪರಿಶೀಲಿಸುವ ಅಗತ್ಯತೆ ಇದೆ.

ಜೂನ್‌ 18ರಂದು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿತು. ಆದರೆ, ಮೊದಲೆರಡು ದಿನ ತಾಂತ್ರಿಕ ಕಾರಣಗಳಿಂದ ಹಲವು ಅರ್ಜಿಗಳು ತಿರಸ್ಕೃತಗೊಂಡಿವೆ ಎನ್ನಲಾಗಿದೆ. ಹೀಗಾಗಿ ಅರ್ಜಿಯ ಸ್ಥಿತಿಗತಿಯನ್ನು (status) ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಳ್ಳಬೇಕು ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ನೋಂದಣಿ ಆಗಿದೆಯೇ ಎಂದು ಚೆಕ್‌ ಮಾಡಿ

ಒಂದೊಮ್ಮೆ ನೀವು ನೋಂದಣಿ ಮಾಡಿಕೊಂಡಿದ್ದರೂ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಕೆಲವೊಮ್ಮೆ ಸ್ವೀಕೃತವಾಗದೆ ಇರುವ ಸಾಧ್ಯತೆಯೂ ಇದೆ. ಹೀಗಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಎಂದು ಚೆಕ್‌ ಮಾಡಲು ಈ ಲಿಂಕ್‌ ಕ್ಲಿಕ್‌ ಮಾಡಿ

ಅರ್ಜಿಯನ್ನು ಸರ್ಕಾರದಿಂದ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿದಲ್ಲಿ ‘Gruhajyothi scheme your application successful’ ಎಂದು ತೋರಿಸಲುತ್ತದೆ. ಇಲ್ಲವಾದಲ್ಲಿ ‘your application for Gruhajyothi scheme is received and sent to ESCOM for processing’ ಎಂದು ತೋರಿಸುತ್ತದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದಲ್ಲಿ ‘your application rejected’ ಎಂದು ತೋರಿಸುತ್ತದೆ. ಇದನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಿ.

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?

ಗೃಹಜ್ಯೋತಿ ಯೋಜನೆಗೆ ನೀವು ಹತ್ತಿರದ ವಿದ್ಯುತ್‌ ಕಚೇರಿ, ನಾಡಕಚೇರಿ, ಕಂಪ್ಯೂಟರ್‌, ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಅಧಿಕೃತ ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಿರುವ ದಾಖಲೆಗಳು: ವಿದ್ಯುತ್ ಬಿಲ್‌’ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನಷ್ಟೇ ನಮೂದಿಸಿದರೆ ಸಾಕು.

Exit mobile version