ಹಾವೇರಿ: ಆ ದಂಪತಿ ಮಧ್ಯೆ ಸಣ್ಣ ವಿಷಯಕ್ಕೂ ಜಗಳವಾಗಿರಲಿಲ್ಲ. ಖುಷಿ ಖುಷಿಯಾಗಿದ್ದ ಪತಿ-ಪತ್ನಿ ಇದೀಗ ದೂರವಾಗಿದ್ದಾರೆ. ಅವರಿಬ್ಬರ ಅನ್ಯೋನ್ಯ ಸಂಸಾರಕ್ಕೆ ಅಡ್ಡಗಾಲು ಹಾಕಿ, ದೂರ ಮಾಡಿದ್ದು ಆ ಏರಿಯಾದ (Boar Attack) ಹಂದಿಗಳು.. ಇದು ಅಚ್ಚರಿ ಆದರೂ ನಿಜ.
ಹಾವೇರಿಯ ಹಿರೆಕೇರೂರು ತಾಲೂಕಿನ ರಟ್ಟಿಹಳ್ಳಿಯಲ್ಲಿ ಹಂದಿಗಳ ಕಾಟಕ್ಕೆ ಹೆಂಡತಿ- ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಗ್ರಾಮದಲ್ಲಿ ಹಂದಿಗಳ ಕಾಟ ವಿಪರೀತವಾಗಿದೆ. ಮಕ್ಕಳು ಹೊರ ಹೋದರೂ ಅಂದರೆ ಪೋಷಕರು ಮನೆಯಲ್ಲಿ ಭಯದಲ್ಲೇ ಕಾಲಕಳೆಯುವಂತಾಗಿದೆ. ಈ ಹಂದಿಗಳ ಕಾಟಕ್ಕೆ ಬೇಸತ್ತು ಮಹಿಳೆಯೊಬ್ಬರು ಮಕ್ಕಳ ಸಮೇತ ತವರು ಮನೆ ಸೇರಿದ್ದಾರೆ.
ಹೀಗಾಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ವಿರೇಶ್ ಎಂಬುವವರು ಅರೆ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ವಿರೇಶ್ ಅವರು ಮನೆಯ ಅಕ್ಕಪಕ್ಕ ಹಂದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಇವರ ಮನವಿಗೆ ಅಧಿಕಾರಿಗಳು ಸ್ಪಂದಿಸಿಲ್ಲ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಬೋಗಿಗೆ ಎಂಟ್ರಿ ಕೊಟ್ಟ ಕರಿಮಣಿ ಮಾಲೀಕ!
ಮನೆ ಹತ್ತಿರ ಹಂದಿಗಳು ಹೆಚ್ಚಾಗಿದ್ದು, ಇಬ್ಬರು ಮಕ್ಕಳು ಆಚೆ ಬರಲು ಹೆದರುತ್ತಿದ್ದಾರೆ ಎಂದು ವಿರೇಶ್ ಪತ್ನಿ ಮಕ್ಕಳನ್ನು ಕರೆದುಕೊಂಡು ತವರು ಮನೆ ಸೇರಿಕೊಂಡಿದ್ದಾರೆ. ಇತ್ತ ಪತ್ನಿಗೆ ಮರಳಿ ಬರಲು ವಿರೇಶ್ ಅವರು ಕರೆದರೆ, ಮೊದಲು ಹಂದಿಗಳನ್ನು ಹಿಡಿಸಿ ನಂತರ ಬರುತ್ತೆ ಎನ್ನುತ್ತಿದ್ದರಂತೆ.
ಹೀಗಾಗಿ ಹಂದಿಗಳು ನನ್ನಿಂದ ಹೆಂಡತಿ ಮಕ್ಕಳನ್ನು ದೂರ ಮಾಡಿದೆ. ಜತೆಗೆ ಶಾಲೆಗೆ ಹೋಗದೇ ತಿಂಗಳು ಕಳೆದಿದೆ. ಕೂಡಲೇ ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿ ಎಂದು ವಿರೇಶ್ ಅವರು ಪಟ್ಟಣ ಪಂಚಾಯ್ತಿ ಮುಂದೆ ಅರೆ ಬೆತ್ತಲಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಂಜಾನೆಯಿಂದ ನೀರನ್ನು ಕುಡಿಯದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಂದಿ ಹಿಡಿಸದ ಅಧಿಕಾರಿಗಳಿಗೆ ಧಿಕ್ಕಾರವನ್ನು ಎಂದು ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಒಂದು ವೇಳೆ ಹಂದಿಯನ್ನು ಹಿಡಿಯದೇ ಇದ್ದರೆ ವಿಷ ಕುಡಿದು ಇಲ್ಲೇ ಸಾಯಿಸುತ್ತೇನೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ