ಹುಬ್ಬಳ್ಳಿ : ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸ ತಾಂಡಾದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು, (Knife stab) ಎಂಟು ಜನರಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯಲ್ಲಿ ರವಿ ಲಮಾಣಿ, ಶಂಕರ್ ಲಮಾಣಿ, ರಾಜು ಲಮಾಣಿ, ಮಹೇಶ ಲಮಾಣಿ, ಲಾಲಪ್ಪ ಲಮಾಣಿ, ಹನುಮಂತ ಪೂಜಾರಿ, ಅಕ್ಷಯ ಲಮಾಣಿಗೆ ಚಾಕು ಇರಿಯಲಾಗಿದೆ. ಒಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.
ಸುರೇಶ ಲಮಾಣಿ ಎಂಬಾತ, ಇತರರಿಗೆ ಚೂರಿಯಲ್ಲಿ ಮನಬಂದಂತೆ ಇರಿದಿದ್ದಾನೆ. ಇದರ ಪರಿಣಾಮ ದಾಳಿಗೀಡಾದವರಿಗೆ ತಲೆ, ಕೈ, ಬೆನ್ನು, ಎದೆ, ಹೊಟ್ಟೆ ಭಾಗದಲ್ಲಿ ಗಾಯಗಳಾಗಿದೆ. ತಡಸ ತಾಂಡಾ ಬಸ್ ನಿಲ್ದಾಣ ಜಾಗದ ಸಂಬಂಧ ಮಾರಾಮಾರಿ ನಡೆದಿತ್ತು. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.