ಹಾವೇರಿ: ದೇಶದಲ್ಲಿ ರಾಜ್ಯವು ಭ್ರಷ್ಟಾಚಾರಕ್ಕೆ ನಂಬರ್ 1 ಆಗಿದೆ, ಇದೊಂದು ಲೂಟಿಕೋರರ ಸರಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೋಮವಾರ ಹೇಳಿದ್ದಾರೆ. ದೇಶದಲ್ಲಿ ತಲೆತಗ್ಗಿಸುವಂತ ಕೆಲಸ ಆಗಿದೆ. ಹಣ ಕೊಟ್ಟು ಅಧಿಕಾರಿಗಳು ಪೋಸ್ಟಿಂಗ್ ತೆಗೆದುಕೊಳ್ಳುವ ಸ್ಥಿತಿಯಿದೆ. ಆಪರೇಷನ್ ಕಮಲದ ಮೂಲಕ ಬಂದ ಸರಕಾರ ಭ್ರಷ್ಟಾಚಾರದಲ್ಲೆ ಮುಳುಗಿದೆ ಎಂದರು.
ಸರಕಾರದಿಂದ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದ ಸಲೀಂ ಅಹ್ಮದ್, ಯಾವ ಪುರುಷಾರ್ಥಕ್ಕಾಗಿ ಜನ ಬಿಜೆಪಿಗೆ ಆಶಿರ್ವಾದ ಮಾಡಬೇಕು?. ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಸಮಾಜ ಒಡೆಯುವ ಕೇಲಸ ಮಾಡುತ್ತಿದ್ದಾರೆ. ಸಮಾಜ ಒಡೆಯುವ ಕೇಲಸ ಮಾಡುವವರನ್ನ ಬಂಧಿಸಬೇಕು. ಸಮಾಜ ಒಡೆಯುವ ಸಂಘಟನೆಗಳನ್ನ ನಿಷೇಧ ಮಾಡಬೇಕು. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಾಳಿಯಲ್ಲಿ ಗುಂಡುಹೊಡೆಯುವುದನ್ನ ಬಿಡಲಿ. 40% ಸರಕಾರದ ವಿರುದ್ದ ಜನಜಾಗೃತಿ ಮಾಡುತ್ತೆವೆ. ಯಾವಾಗ ಚುನಾವಣೆ ಎದುರಾದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ –