ಹಾವೇರಿ: ಹಾವೇರಿಯಲ್ಲಿ ಇಂದಿನಿಂದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮೂರು ದಿನಗಳ ಕಾಲ ಅಕ್ಷರ ಉತ್ಸವ ನಡೆಯಲಿದೆ. ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದೆ. ಹಾವೇರಿ ನಗರದ ಅಜ್ಜಯ್ಯನ ದೇವಸ್ಥಾನದ ಎದುರು ಸಮ್ಮೇಳನ ನಡೆಯಲಿದೆ. (ಕನ್ನಡ ಸಾಹಿತ್ಯ ಸಮ್ಮೇಳನ) ಇಂದಿನ ಕಾರ್ಯಕ್ರಮದ ಪಟ್ಟಿ ಇಂತಿದೆ.
ಮುಂಜಾನೆ 7-30ಕ್ಕೆ ಧ್ವಜಾರೋಹಣ ಕಾರ್ಯಕ್ರಮ.
ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ ಹೆಬ್ಬಾರರಿಂದ ರಾಷ್ಟ್ರಧ್ವಜಾರೋಹಣ.
ನಾಡೋಜ ಡಾ.ಮಹೇಶ ಜೋಶಿಯವರಿಂದ ಪರಿಷತ್ತಿನ ಧ್ವಜಾರೋಹಣ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅವರಿಂದ ನಾಡಧ್ವಜಾರೋಹಣ.
ಬೆಳಿಗ್ಗೆ 7-30ರಿಂದ 10-30ರವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ.
ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ ಮಾರ್ಗವಾಗಿ ಸಮ್ಮೇಳ ವೇದಿಕೆವರೆಗೆ ಮೆರವಣಿಗೆ.
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿಯಿಂದ ಮೆರವಣಿಗೆಗೆ ಉದ್ಘಾಟನೆ.
101 ಕಲಾ ತಂಡಗಳಿಂದ 1200 ಕಲಾವಿದರು ಮೆರವಣಿಗೆಯಲ್ಲಿ ಭಾಗಿ.
ಬೆಳಿಗ್ಗೆ 10-30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಿಂದ ಸಮ್ಮೇಳನದ ಉದ್ಘಾಟನೆ.
ಸಮ್ಮೇಳನದ ಹಿನ್ನೆಲೆಯಲ್ಲಿ ಸಂಪೂರ್ಣ ನಗರ ವಿದ್ಯುತ್ ದೀಪಾಲಂಕಾರ, ಕೆಂಪು-ಹಳದಿ ಕನ್ನಡ ಧ್ವಜಗಳಿಂದ ತುಂಬಿಹೋಗಿದೆ. 2020ರಲ್ಲಿ ಸಮ್ಮೇಳನ ನಡೆಯಬೇಕಿದ್ದರೂ ಕೊರೊನಾ ಕಾರಣಕ್ಕೆ ಮುಂದೂಡುತ್ತಲೇ ಬಂದಿತು. ಕೊನೆಗೂ ಈಗ ಸಂಭ್ರಮದ ಕ್ಷಣ ಬಂದಿದೆ.