Site icon Vistara News

Vistara News Launch | ವಿಸ್ತಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ: ವಿರೂಪಾಕ್ಷಪ್ಪ ಬಳ್ಳಾರಿ

Vistara News Launch

ಹಾವೇರಿ: ಜಿಲ್ಲೆಯ ಬ್ಯಾಡಗಿ ಪಟ್ಟಣದ ವಾಲ್ಮೀಕಿ ಭವನದಲ್ಲಿ ವಿಸ್ತಾರ ಕನ್ನಡ ಸಂಭ್ರಮ(Vistara News Launch) ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಗಿಡಕ್ಕೆ ನಿರೇರೆಯುವ ಮೂಲಕ ಕಾರ್ಯಕ್ರಮವನ್ನು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಉದ್ಘಾಟಿಸಿದರು.

ನಂತರ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ರಾಜ್ಯದಲ್ಲಿ ಹಲವು ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಅನೇಕ ಸಂಗತಿಗಳು ಮರೆಮಾಚುತ್ತಿರುವ ವೇಳೆಯಲ್ಲಿ ವಿಸ್ತಾರ ಸುದ್ದಿ ವಾಹಿನಿ ಆರಂಭವಾಗಿದೆ. ವಿಸ್ತಾರ ಸುದ್ದಿವಾಹಿನಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಶುಭ ಕೋರಿದರು.

ಇದನ್ನೂ ಓದಿ | Vistara News Launch | ವಿಸ್ತಾರ ನ್ಯೂಸ್‌ ಜನರ ಧ್ವನಿಯಾಗಿ ಕೆಲಸ ಮಾಡಲಿ: ಅಭಿನವ ಚನ್ನಬಸವ ಸ್ವಾಮೀಜಿ

ಮಾಜಿ ಸಚಿವ ಬಸವರಾಜ್ ಶಿವಣ್ಣನವರ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ವಸ್ತುನಿಷ್ಠ ವರದಿ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಹೊಸದಾಗಿ ಆರಂಭವಾಗಿರುವ ವಿಸ್ತಾರ ನ್ಯೂಸ್‌ ಕೂಡ ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿ ಎಂದು ಶುಭಕೋರಿದರು.

ಮಾಜಿ ಶಾಸಕ ಸುರೇಶ ಗೌಡ ಪಾಟೀಲ್ ಮಾತನಾಡಿ, ವಿಸ್ತಾರ ಒಂದು ಒಳ್ಳೆಯ ಹೆಸರು, ರಾಜ್ಯದಲ್ಲಿ ಈ ಮೂಲಕ ಮತ್ತೊಂದು ವಾಹಿನಿ ಆರಂಭವಾಗಿರುವುದು ಶ್ಲಾಘನೀಯ ಎಂದು ಶುಭಕೋರಿದರು.

ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಆರ್.ಪಾಟೀಲ್ ಮಾತನಾಡಿ, ಒಂದು ಕಾಲದಲ್ಲಿ ದೂರವಾಣಿಯಲ್ಲಿ ಮಾತನಾಡಲು ತುಂಬಾ ದಿನಗಳು ಬೇಕಾಗುತ್ತಿತ್ತು. ಇವತ್ತು ಘಟನೆ ನಡೆದ ತಕ್ಷಣವೇ ವರದಿಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ವಿಸ್ತಾರ ವಾಹಿನಿ ಶ್ರಮಿಸಲಿ, ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಸಮಾಜ ಸೇವಕ ಬಿಜೆಪಿ ಯುವ ಮುಖಂಡ ಎಂ.ಎಸ್.ಪಾಟೀಲ್ ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿನಿಂದ ವಿಸ್ತಾರ ನ್ಯೂಸ್ ಡಿಜಿಟಲ್ ಮಾಧ್ಯಮವಾಗಿ ಆರಂಭವಾಗಿ ಸುದ್ದಿ ನೀಡುತ್ತಿತ್ತು. ಇದೀಗ ನ್ಯೂಸ್‌ ಚಾನೆಲ್‌ ಆರಂಭವಾಗಿದ್ದು, ನಿಖರ ಜನಪರ ಸುದ್ದಿಗಳನ್ನು ನೀಡಲಿ ಎಂದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಬ್ಯಾಡಗಿ ಪುರಸಭೆ ಅಧ್ಯಕ್ಷೆ ಪಕ್ಕೀರಮ್ಮ ಚಲವಾದಿ, ಹೊನ್ನುರಪ್ಪ ಕಾಡಸಾಲಿ, ಸಂಜೀವ ಮಡಿವಾಳರ ಉಪಸ್ಥಿತರಿದ್ದರು.

ಇದನ್ನೂ ಓದಿ | Vistara News Launch | ಜನರ ಅಗತ್ಯಕ್ಕೆ ತಕ್ಕಂತೆ ವಿಸ್ತಾರ ಕೆಲಸ: ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ

Exit mobile version