Site icon Vistara News

Havyaka Awards : ಪೆರುವೋಡಿ, ಲಕ್ಷ್ಮೀಶ ಸೋಂದಾ, ಜಿ.ಎಸ್‌. ಹೆಗಡೆ ಸಹಿತ 7 ಮಂದಿ ಸಾಧಕರಿಗೆ ಹವ್ಯಕ ವಾರ್ಷಿಕ ವಿಶೇಷ ಪ್ರಶಸ್ತಿ

Havyaka Awards

#image_title

ಬೆಂಗಳೂರು: ತೆಂಕುತಿಟ್ಟು ಯಕ್ಷಗಾನದ ಖ್ಯಾತ ಹಾಸ್ಯ ಪಾತ್ರಧಾರಿ ಪೆರುವೋಡಿ ನಾರಾಯಣ ಭಟ್‌, ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರಾದ ಡಾ. ಲಕ್ಷ್ಮೀಶ್ ಸೋಂದಾ, ಸಂಗೀತ ಸಂಘಟಕ ಜಿ.ಎಸ್. ಹೆಗಡೆ ಸಪ್ತಕ ಸೇರಿದಂತೆ ಏಳು ಮಂದಿ ಸಾಧಕರಿಗೆ ಈ ವರ್ಷದ ಹವ್ಯಕ ವಿಶೇಷ ಪ್ರಶಸ್ತಿಯನ್ನು (Havyaka Awards) ಪ್ರಕಟಿಸಲಾಗಿದೆ.

ಅಖಿಲ ಹವ್ಯಕ ಮಹಾಸಭೆಯು ವಾರ್ಷಿಕವಾಗಿ ನೀಡುವ ಹವ್ಯಕ ವಿಶೇಷ ಪ್ರಶಸ್ತಿ 2022-23 ಪ್ರಶಸ್ತಿ ಇದಾಗಿದ್ದು, ಏಪ್ರಿಲ್ 2 (ಭಾನುವಾರ) ನಡೆಯುವ 80ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಏ.2ರ ಸಂಜೆ 4 ಗಂಟೆಗೆ ಸಂಸ್ಥಾಪನೋತ್ಸವ ನಡೆಯಲಿದೆ.

ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಅತ್ಯಂತ ಸಮಗ್ರವಾದ ವಿಚಕ್ಷಣೆಯಿಂದ ಪ್ರಶಸ್ತಿ ಆಯ್ಕೆ ಮಾಡಲಾಗಿದ್ದು, ಸಾಧಕರಿಗೆ ಗೌರವ ನೀಡಲಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಪ್ರಶಸ್ತಿಗೆ ಆಯ್ಕೆಯಾದ ಸಾಧಕರು ಇವರು

ಹವ್ಯಕ ವಿಭೂಷಣ: ಪೆರುವೋಡಿ ನಾರಾಯಣ ಭಟ್, ತೆಂಕುತಿಟ್ಟು ಯಕ್ಷಗಾನ

ಹವ್ಯಕ ಭೂಷಣ: ಡಾ. ಲಕ್ಷ್ಮೀಶ್ ಸೋಂದಾ, ಇತಿಹಾಸಕಾರರು ಮತ್ತು ಶಿಕ್ಷಣ ತಜ್ಞರು
ಜಿ. ಎಸ್. ಹೆಗಡೆ ಸಪ್ತಕ – ಸಂಗೀತ ಕ್ಷೇತ್ರ

ಹವ್ಯಕಶ್ರೀ: ಡಾ. ಕಿಶನ್ ಭಾಗವತ್- ವೈದ್ಯಕೀಯ ಮತ್ತು ಸಾಮಾಜಿಕ ಸೇವೆ,
ಲೆ|ಕ| ವಿವೇಕ್ ಸಾಯ- ಭಾರತೀಯ ಭೂ ಸೇನೆ
ಕು. ಅರ್ಪಿತಾ. ವಿ. ಎಂ- ಕ್ರೀಡೆ

ಹವ್ಯಕ ಸೇವಾಶ್ರೀ: ಶ್ರೀ ನಾರಾಯಣ ಶಾನುಭೋಗ್, ವಿಶ್ರಾಂತ ನಿರ್ದೇಶಕರು ಹವ್ಯಕ ಅಧ್ಯಯನ ಕೇಂದ್ರ

ಹವ್ಯಕ ಪ್ರಶಸ್ತಿ ಪುರಸ್ಕೃತರು

ಇದನ್ನೂ ಓದಿ : Nam Nani Maduve: ಯುರೋಪ್ ಸೇರಿ ರಾಜ್ಯದ 100 ಚಿತ್ರಮಂದಿರದಲ್ಲಿ ಏ.7ಕ್ಕೆ ನಮ್ ನಾಣಿ ಮದುವೆ ಪ್ರಸಂಗ ಬಿಡುಗಡೆ

Exit mobile version