Site icon Vistara News

HD Deve Gowda: ಬಾಲಗಂಗಾಧರನಾಥ ಶ್ರೀಗಳನ್ನು ನೆನೆದು ಕಣ್ಣೀರಿಟ್ಟ ದೇವೇಗೌಡರು

Ex PM HD Deve Gowda

ಹಾಸನ: ಭಾರತ ಮತ್ತು ಬಾಂಗ್ಲಾ ದೇಶದ ಮೂವತ್ತು ವರ್ಷಗಳ ನೀರಿನ ಸಮಸ್ಯೆ ಬಗೆಹರಿಸಿದೆ. ಹಿಂದಿನವರು ಹತ್ತು ವರ್ಷ, ಈಗಿನವರು ಹತ್ತು ವರ್ಷ ಆಡಳಿತ ಮಾಡಿದ್ದಾರೆ. ನನಗೆ ಸಿಕ್ಕಿದ್ದು ಹತ್ತೇ ಹತ್ತು ತಿಂಗಳು ಅಧಿಕಾರ. ಆ ಹತ್ತು ತಿಂಗಳಲ್ಲಿ ನಾನು ಮೂವತ್ತು ವರ್ಷದ ನೀರಿನ ವಿವಾದ ಬಗೆಹರಿಸಿದೆ ಎಂದು ಪರೋಕ್ಷವಾಗಿ ಕಾವೇರಿ ವಿವಾದ (HD Deve Gowda) ಬಗೆಹರಿಸದ ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಅಸಮಾಧಾನ ಹೊರಹಾಕಿದರು.

ನಗರದಲ್ಲಿ ನಡೆದ ಶ್ರೀ ಬಾಲಗಂಗಾದರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಸಂಭ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ವಿವಾದ ಬಗೆಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂಬುವುದರ ಸೂಚ್ಯವಾಗಿ ಮಾಜಿ ಪ್ರಧಾನಿಗಳು ಭಾರತ ಮತ್ತು ಬಾಂಗ್ಲಾ ದೇಶದ ನಡುವಿನ ನೀರಿನ ವಿವಾದ ಬಗ್ಗೆ ಮಾತನಾಡಿದರು.

ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಬಾಲಗಂಗಾಧರನಾಥ ಶ್ರೀಗಳನ್ನು ನೆನೆದು ಕಣ್ಣೀರಿಟ್ಟ ಗೌಡರು, ಭೈರವೈಕ್ಯ ಶ್ರೀಗಳು ಈಗಲೂ ನಮ್ಮ ಮುಂದೆ ಇದ್ದಾರೆ. ಅವರ ಕಾರ್ಯ ಎಂದು ಮರೆಯಾಗುವುದಿಲ್ಲ ಎಂದು ಭಾವುಕರಾದರು.

ಇದನ್ನೂ ಓದಿ | CM Siddaramaiah : ರೈತರ ಹಿತ ಕಾಪಾಡುವಲ್ಲಿ ಹಿಂದೆ ಬೀಳಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಚ್ಚು; ಮೈತ್ರಿ ಬಳಿಕ ಮೊದಲ ಜಂಟಿ ಪ್ರತಿಭಟನೆ

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ನಿರ್ಧಾರವನ್ನು (Government of Karnataka) ಖಂಡಿಸಿ ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳವಾರ (ಸೆಪ್ಟೆಂಬರ್‌ 26) ಬೆಂಗಳೂರು ಬಂದ್‌ (Bangalore bandh) ಅನ್ನು ಸಹ ಮಾಡಲಾಗಿದೆ. ರೈತರು, ಕನ್ನಡ ಪರ ಸಂಘಟನೆಗಳು (Pro Kannada organisation) ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಈಗ ಪ್ರತಿಪಕ್ಷಗಳು ಸಹ ಸರ್ಕಾರದ ಮೇಲೆ ಮುಗಿಬೀಳಲು ಸಿದ್ಧವಾಗಿದೆ. ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮುನ್ನುಡಿ ಬರೆಯುತ್ತಿದೆ. ದೆಹಲಿಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ (BJP and JDS alliance) ಮಾತುಕತೆ ಬೆನ್ನಲ್ಲೇ ರಾಜ್ಯದಲ್ಲಿ ಉಭಯ ಪಕ್ಷಗಳ ಒಗ್ಗಟ್ಟಿನ ಮಂತ್ರ ಆರಂಭವಾಗಿದೆ.

ಕಮಲ-ದಳ ನಾಯಕರು ಈಗ ಕಾವೇರಿ ವಿಷಯವಾಗಿ ಜಂಟಿ ಹೋರಾಟಕ್ಕೆ ಮುಂದಾಗಿದ್ದಾರೆ. ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್‌. ಯಡಿಯೂರಪ್ಪ (Former Chief Minister and senior BJP leader BS Yediyurappa) ಹಾಗೂ ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former Chief Minister and JDS Legislature Party leader HD Kumaraswamy) ನೇತೃತ್ವದಲ್ಲಿ ಹೋರಾಟಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ.

ಇದನ್ನೂ ಓದಿ: Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್‌ಗೆ ಹೃದಯಾಘಾತ?

ಬುಧವಾರ (ಸೆಪ್ಟೆಂಬರ್‌ 27) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ – ಜೆಡಿಎಸ್‌ ಜಂಟಿಯಾಗಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿ ಬಿಜೆಪಿ-ಜೆಡಿಎಸ್ ಶಾಸಕರು ಭಾಗಿಯಾಗಲಿದ್ದಾರೆ. ಜಂಟಿ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೈತ್ರಿ ಬಳಿಕ ಮೊದಲ ಜಂಟಿ ಹೋರಾಟ

ಬಿ.ಎಸ್‌. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮೈತ್ರಿ ಮಾತುಕತೆ ಬಳಿಕ ಮೊದಲ ಬಾರಿಗೆ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಬಹಳ ದಿನಗಳ ಬಳಿಕ ಒಟ್ಟಾಗಿ ಹೋರಾಟಕ್ಕೆ ಮುಂದಾಗುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಉಭಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಲು ಉಭಯ ಪಕ್ಷಗಳ ಶಾಸಕರಿಗೆ ಸೂಚನೆ

ಬುಧವಾರ ಬೆಳಗ್ಗೆ 11 ಗಂಟೆಯಿಂದ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಚ್ಚು ಹೆಚ್ಚಾಗಿದೆ. ಮೈತ್ರಿ ಬಳಿಕ ಮೊದಲ ಜಂಟಿ ಪ್ರತಿಭಟನೆ ಇದಾಗಿದ್ದು, ಉಭಯ ಪಕ್ಷಗಳಿಂದ ಶಾಸಕರಿಗೆ ಸಂದೇಶ ರವಾನೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಬುಧವಾರ ಬೆಂಗಳೂರಿಗೆ ಬರುವಂತೆ ಸಂದೇಶ ರವಾನೆ ಮಾಡಲಾಗಿದ್ದು, ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಪ್ರತಿಭಟನೆಯನ್ನು ಯಶಸ್ವಿ ಮಾಡುವಂತೆ ಸಹ ಕರೆ ನೀಡಲಾಗಿದೆ.

ಇದನ್ನೂ ಓದಿ: Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್‌ ಸಲಹೆ

ತಮಿಳುನಾಡಿಗೆ ಹನಿ ನೀರನ್ನೂ ಬಿಡಬೇಡಿ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ (Cauvery water to Tamil Nadu) ಕ್ರಮ ಸರಿಯಲ್ಲ. ಸರ್ಕಾರ ಈ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಅಲ್ಲದೆ, ಇನ್ನು ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡಕೂಡದು ಎಂದು ರಾಜ್ಯ ಸರ್ಕಾರಕ್ಕೆ ಉಭಯ ಪಕ್ಷಗಳ ನಾಯಕರು ತಾಕೀತು ಮಾಡಿದ್ದಾರೆ. ಬುಧವಾರ ಸಹ ಪ್ರತಿಭಟನೆಯಲ್ಲಿ ಈ ವಿಚಾರವನ್ನೇ ಪ್ರಸ್ತಾಪ ಮಾಡಲಿದ್ದಾರೆ. ಇದಲ್ಲದೆ, ರಾಜ್ಯ ಸರ್ಕಾರ ಹಲವು ವಿಷಯಗಳಲ್ಲಿ ವೈಫಲ್ಯ ಕಂಡಿದೆ ಎಂದು ಆರೋಪಿಸಿ ಅದರ ವಿರುದ್ಧವೂ ಜನಾಂದೋಲನ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.

Exit mobile version