Site icon Vistara News

ನಿಮ್ಮ ಸ್ವಾರ್ಥಕ್ಕೆ ಜನರ ಚಡ್ಡಿ ಬಿಚ್ಚಬೇಡಿ: ಕಾಂಗ್ರೆಸ್‌ ವಿರುದ್ಧ HDK ಆಕ್ರೋಶ

HDK BAGALKOTE

ಬಾಗಲಕೋಟೆ: ಪಠ್ಯಪುಸ್ತಕದಲ್ಲಿ ಬಸವಣ್ಣ ಸೇರಿ ‌ಮಹಾನ್ ನಾಯಕರಿಗೆ ಅವಮಾನ ಮಾಡುವಂತಹ ಕೆಲಸ ಮಾಡಿದ್ದಾರೆ. ಈಗ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕ ಪಡುವ ಸ್ಥಿತಿ ತಂದಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʼʼಶಿಕ್ಷಕರಿಗೆ ನೀವು ಕೊಟ್ಟಿರುವುದಾದರೂ ಏನು?. ಕೇಂದ್ರ ಸರ್ಕಾರದ ಗೈಡ್ ಲೈನ್ಸ್ ಮೂಲಕ ಇಂತಹ ಹೊಸ ಪಾಲಿಸಿ ತಂದಿದ್ದಾರಾ? ಅನುದಾನರಹಿತ ಶಾಲೆಗಳಿಗೆ ದೊಡ್ಡಮಟ್ಟದ ಕೊಡುಗೆ ಕೊಟ್ಡಿದ್ದು ಜೆಡಿಎಸ್. ಈ ಬಾರಿ ಸ್ವತಂತ್ರ ಸರ್ಕಾರ ತರಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ಈ ನಾಡಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿದ್ದೇವೆʼʼ ಎಂದರು.

ʼʼಈಗ ಹೊಸದಾಗಿ ಚಡ್ಡಿ ಸುಡೋದು, ಬಿಚ್ಚೋದು ನಡೆಯುತ್ತಿದೆ. ಇದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಸಂಘರ್ಷ ಉಂಟುಮಾಡುವ ವಿಚಾರಕ್ಕೆ ಬೆಂಕಿ ಇಡಿ. ಚಡ್ಡಿಗೆ ಬೆಂಕಿ ಇಡೋದು, ಪ್ಯಾಂಟ್‌ಗೆ ಬೆಂಕಿ ಇಡೊದು ಮುಂದೆ ಇಟ್ಕೊಳ್ಳಿ, ನಿಮ್ಮ ಸ್ವಾರ್ಥಕ್ಕಾಗಿ ನಾಡಿನ ಜನತೆಯ ಚಡ್ಡಿ ಬಿಚ್ಚುವ ಕೆಲಸ ಮಾಡಬೇಡಿʼʼ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಜೆಡಿಎಸ್‌ನ ಕೆಲವರು ಸಂಪರ್ಕದಲ್ಲಿದ್ದಾರೆ ಎಂಬ ಜಮೀರ್‌ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ʼʼಜೆಡಿಎಸ್ ನ ಮತ ಒಡೆಯುವ ಕೆಲಸ ನಡೆದಿದೆ. ಅದರಲ್ಲಿ ಅವರು ಪರಿಣತರಿದ್ದಾರೆ. ಎರಡು ಪಕ್ಷದಲ್ಲೂ ಜೆಡಿಎಸ್ ಮತ ಒಡೆಯುವ ಯತ್ನ ನಡೆದಿದೆ. ನಾನು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆರಾಮವಾಗಿ ಇದ್ದೇನೆ. ನಮ್ಮ ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯ ಇರೋದು ನಿಜ. ಆದರೆ ಅದೆಲ್ಲ ಹೊರತುಪಡಿಸಿ ಪಕ್ಷದ ಅಧಿಕೃತ ಅಭ್ಯರ್ಥಿಗೆ ಎಲ್ಲರೂ ಮತ ಹಾಕಲಿದ್ದಾರೆ ಎಂಬ ವಿಶ್ವಾಸವಿದೆ. ನಮಗೆ ಬಿಜೆಪಿ, ಕಾಂಗ್ರೆಸ್ ರೀತಿಯಲ್ಲಿ ಆತಂಕವಿಲ್ಲ. ಅವರು ಎಷ್ಟು ಆಸೆ, ಆಮಿಷ ಒಡ್ಡಿದರೂ ನಮ್ಮ ಪಕ್ಷದ ಮತಗಳು ನಮಗೇ ಬರುತ್ತವೆʼʼ ಎಂದರು.

ಇದನ್ನೂ ಓದಿ | ಮನವಿ ಕೊಡಲು ಬಂದವರು ಮುತ್ತಿಗೆ ಹಾಕಲ್ಲ: HD ಕುಮಾರಸ್ವಾಮಿ ಆಕ್ರೋಶ

Exit mobile version