Site icon Vistara News

Vistara News Launch | ವಿಸ್ತಾರ ನ್ಯೂಸ್ ಕಚೇರಿಗೆ ಎಚ್ ಡಿ ಕುಮಾರಸ್ವಾಮಿ ಭೇಟಿ, ಸುದ್ದಿಯ ಗುಣಮಟ್ಟಕ್ಕೆ ಮೆಚ್ಚುಗೆ

HDK At Vistara News

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಬುಧವಾರ ಭೇಟಿ ನೀಡಿ ಸುದ್ದಿ ಮತ್ತು ಇತರ ಉಪಯುಕ್ತ ಮಾಹಿತಿಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್‌ ಎಂ ಎಸ್‌ ಅವರನ್ನು ಅಭಿನಂದಿಸುತ್ತಿರುವ ಎಚ್‌ ಡಿ ಕುಮಾರಸ್ವಾಮಿ.

ಈ ಸಂದರ್ಭದಲ್ಲಿ ವಿಸ್ತಾರ ಮೀಡಿಯಾದ ಧ್ಯೇಯೋದ್ದೇಶಗಳ ಕುರಿತು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತು ವಿಸ್ತಾರ ಮೀಡಿಯಾದ ಚೇರ್ಮನ್, ಎಂಡಿ ಎಚ್.ವಿ. ಧರ್ಮೇಶ್ ಅವರು ವಿವರಿಸಿದರು.

ವಿಸ್ತಾರ ನ್ಯೂಸ್‌ ತಂಡದಿಂದ ಕುಮಾರಸ್ವಾಮಿ ಅವರಿಗೆ ಸನ್ಮಾನ.

ವಿಸ್ತಾರ ನ್ಯೂಸ್ ಸಿಬ್ಬಂದಿ ಜತೆ ಮಾತನಾಡಿದ ಕುಮಾರಸ್ವಾಮಿ ಅವರು, ಈ ಚಾನೆಲ್ ಜನಪ್ರಿಯವಾಗಲಿ ಎಂದು ಆಶಿಸಿದರು. ವಿಸ್ತಾರ ಮೀಡಿಯಾ ಸಂಸ್ಥೆ ಅಳವಡಿಸಿಕೊಂಡಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತೂ ಕುಮಾರಸ್ವಾಮಿ ಅವರು ಶ್ಲಾಘಿಸಿದರು.

ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಮತ್ತು ಚೇರ್ಮನ್‌, ಎಂಡಿ ಎಚ್‌ ವಿ ಧರ್ಮೇಶ್‌ ಜತೆ ಕುಮಾರಸ್ವಾಮಿ ಮಾತುಕತೆ.

ವಿಸ್ತಾರ ನ್ಯೂಸ್ ಕಾರ್ಯ ನಿರ್ವಾಹಕ ಸಂಪಾದಕ ಶರತ್ ಎಂ.ಎಸ್., ಸಿಒಒ, ಸಿಟಿಒ ಪರಶುರಾಮ್, ಇನ್‌ಪುಟ್‌-ಔಟ್‌ಪುಟ್‌ ಮುಖ್ಯಸ್ಥ ಮಂಜುನಾಥ್ ಪಿ., ವಿಸ್ತಾರ ಡಿಜಿಟಲ್‌ ಸಂಪಾದಕ ರಮೇಶ್‌ ಕುಮಾರ್‌ ನಾಯಕ್‌, ಸ್ಪೆಷಲ್ ಆಪರೇಷನಲ್ ಎಡಿಟರ್ ಕಿರಣ್ ಕುಮಾರ್ ಡಿ.ಕೆ. ಮತ್ತು ಪಾಲಿಟಿಕಲ್‌ ಬ್ಯೂರೊ ಮುಖ್ಯಸ್ಥ ಮಾರುತಿ ಪಾವಗಡ ಜತೆಗಿದ್ದರು.

ಇದನ್ನೂ ಓದಿ | Vistara News Launch | ವಿಸ್ತಾರ ಚಾನೆಲ್‌ ರಾಜ್ಯಾದ್ಯಂತ ಪಸರಿಸಲಿ: ಸಚಿವ ಆನಂದ್‌ ಸಿಂಗ್‌ ಶುಭ ಹಾರೈಕೆ

Exit mobile version