ಬೆಂಗಳೂರು: ನಗರದ ಖಾಸಗಿ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವುದು ಅದೇ ಕಂಪನಿಯ ಮಾಜಿ ಉದ್ಯೋಗಿ ಎಂಬುವುದು ತಿಳಿದುಬಂದಿದ್ದು, ಟೀಂ ಲೀಡರ್ ಮೇಲಿನ ಕೋಪಕ್ಕೆ ಆತ ಬೆದರಿಕೆ ಕರೆ ಮಾಡಿದ್ದ ಎನ್ನುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಹೊರವರ್ತುಲ ರಸ್ತೆಯಲ್ಲಿರುವ ಖಾಸಗಿ ಕಂಪನಿಗೆ ಜೂನ್ 13ರಂದು ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು. ಹೀಗಾಗಿ ಆ ಸುದ್ದಿ ಕೇಳಿ ಸ್ಥಳಕ್ಕೆ ತೆರಳಿದ್ದ ಬೆಳ್ಳಂದೂರು ಪೊಲೀಸರು ತನಿಖೆ ಕೈಗೊಂಡಿದ್ದರು. ತನಿಖೆ ವೇಳೆ ಹುಸಿ ಬಾಂಬ್ ಕಾಲ್ ಮಾಡಿದರು ಅದೇ ಕಂಪನಿಯ ಮಾಜಿ ಉದ್ಯೋಗಿ ನವನೀತ್ ಪ್ರಸಾದ್ ಎಂಬುವುದು ತಿಳಿದುಬಂದಿತ್ತು. ಆತನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದರು. ಇದೀಗ ವಿಚಾರಣೇ ವೇಳೆ ಟೀಂ ಲೀಡರ್ ಮೇಲಿನ ಕೋಪಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ | Assault Case: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್ ಮೇಲೆ ಮಚ್ಚು ಬೀಸಿದ ಪುಂಡರು
ಮಾರತ್ ಹಳ್ಳಿ ರಿಂಗ್ ರೋಡ್‌ನಲ್ಲಿನ ಐಟಿ ಕಂಪನಿಗಳ ಇಕೋ ಸ್ಪೇಸ್ ಕ್ಯಾಂಪಸ್‌ನಲ್ಲಿರುವ ಐಬಿಡಿಒ ಕಂಪನಿಯಲ್ಲಿ ನವನೀತ್ ಪ್ರಸಾದ್ ಕೆಲಸ ಮಾಡುತ್ತಿದ್ದ. ಆದರೆ ಟೀಂ ಲೀಡರ್ ಹಾಗೂ ನವನೀತ್ ಪ್ರಸಾದ್ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಕಂಪನಿಯ ಎಂಡಿಯನ್ನು ಭೇಟಿ ಮಾಡಲು ನವನೀತ್ ಪ್ರಯತ್ನಿಸಿದ್ದ. ಆದರೆ ಅದಕ್ಕೂ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಕೆಲಸ ಬಿಟ್ಟಿದ್ದ ನವನೀತ್, ಕೊನೆಗೆ ಟೀಂ ಲೀಡರ್‌ಗೆ ಕಾಟ ಕೊಡಬೇಕು ಎಂದು ದುರಾಲೋಚನೆ ಮಾಡಿದ್ದ.
ಇದನ್ನೂ ಓದಿ | Attempt to murder: ಪತ್ನಿಯ ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿದ ಭೂಪ; ಸಂಶಯ ಪಿಶಾಚಿ ಅರೆಸ್ಟ್
ಮಾಜಿ ಉದ್ಯೋಗಿ ಆಗಾಗ್ಗೆ ಟೀಂ ಲೀಡರ್‌ಗೆ ಬೆದರಿಕೆ ಕರೆ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಂಪನಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಂದೂರು ಪೊಲೀಸರು, ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದರು. ಸಹೋದ್ಯೋಗಿ ಮೇಲಿನ ಕೋಪಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸರಿಗೆ ಟೆನ್ಷನ್ ಕೊಟ್ಟಿದ್ದ ಮಾಜಿ ಉದ್ಯೋಗಿ ಈಗ ಜೈಲುಪಾಲಾಗಿದ್ದಾನೆ.