ಚಿಕ್ಕಬಳ್ಳಾಪುರ: ಇಲ್ಲಿನ ಕಡುಬೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿರುವ ಪ್ರಭು ಪಾತಿಯಪ್ಪನವರ್ ವಿರುದ್ಧ ಲೈಂಗಿಕ ಕಿರುಕುಳದ (Sexual harrassment) ಆರೋಪ ಕೇಳಿಬಂದಿದೆ. ಆದರೆ, ಇದು ನಿಜಕ್ಕೂ ಸತ್ಯವಾದ ಆರೋಪವೇ ಅಥವಾ ಸಹಶಿಕ್ಷಕರೇ ಸ್ಕೆಚ್ ಹಾಕಿ ಈ ಆರೋಪ ಮಾಡಿದರೇ ಎಂಬ ಎರಡು ವಾದಗಳು ನಡೆಯುತ್ತಿವೆ.
ಪ್ರಭು ಪಾತಿಯಪ್ಪನವರ್ ವಿದ್ಯಾರ್ಥನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕೆಲವರು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮಗೇ ಅನ್ಯಾಯವಾಗಿದೆ ಎಂದು ಕೆಲವರು ದೂರಿದ್ದಾರೆ. ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ದೂರಿನ ಸಾರಾಂಶ. ದೂರು ನೀಡಿದವರು ಎಂಟನೇ ತರಗತಿ ವಿದ್ಯಾರ್ಥಿನಿಯರು.
ಆದರೆ, ಗ್ರಾಮಸ್ಥರಲ್ಲಿ ಹೆಚ್ಚಿನವರು ಈ ಆರೋಪ ಸುಳ್ಳೆಂದು ಹೇಳುತ್ತಿದ್ದಾರೆ ಮತ್ತು ಮುಖ್ಯ ಶಿಕ್ಷಕ ಪ್ರಭು ಪಾತಿಯಪ್ಪನವರ್ ಪರವಾಗಿ ನಿಂತಿದ್ದಾರೆ. ಇದೆಲ್ಲವೂ ಸಹಶಿಕ್ಷಕರು ನಡೆಸುತ್ತಿರುವ ಕುತಂತ್ರ ಎನ್ನುವುದು ಅವರ ಆರೋಪ. ಪ್ರಭು ಪಾತಿಯಪ್ಪನವರ್‌ನನ್ನು ಮುಖ್ಯಶಿಕ್ಷಕ ಹುದ್ದೆಯಿಂದ ಹುದ್ದೆಯಿಂದ ಕೆಳಗಿಳಿಸಲು ಸಹಶಿಕ್ಷಕರು ಸಂಚು ನಡೆಸಿದ್ದು, ಅದರ ಭಾಗವಾಗಿ ದೂರು ಕೊಡಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಸಹ ಶಿಕ್ಷಕ ಗಂಗರಾಜು ಮತ್ತು ನಾಗಲಕ್ಷ್ಮಿ ಎಂಬುವರು ಮಕ್ಕಳನ್ನು ಹುರುದುಂಬಿಸಿ ದೂರು ಕೊಡಿಸಿದ್ದಾರೆ ಎಂದು ಆರೋಪಿಸಿ ಈ ಇಬ್ಬರ ಮೇಲೆ ರೊಚ್ಚಿಗೆದ್ದಿದ್ದಾರೆ. ಮಾತ್ರವಲ್ಲ ಶಿಕ್ಷಕ ಗಂಗರಾಜು ಗಂಗರಾಜುಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಎದುರೇ ಹಲ್ಲೆ ಮಾಡಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ಕಡುಬೂರು ಗ್ರಾಮದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Sexual Assault | ಬಾಗಿಲಿನಲ್ಲಿ ಲೆಟರ್ ಇಟ್ಟು, ಕಾಲಿಂಗ್ ಬೆಲ್ ಒತ್ತಿ ಎಸ್ಕೇಪ್ ಆಗುವ ಅಪರಿಚಿತ; ಯುವತಿಗೆ ಕಿರುಕುಳ