ಬೆಂಗಳೂರು: ಎ ಬಿಹೇವಿಯರ್ ಚೇಂಜ್ ಡೆಮಾನ್ಟ್ರೇಷನ್ (ABCD) ಮತ್ತು ಸಮುದಾಯ ಆರೋಗ್ಯ ಕೇಂದ್ರ (CHS)ನಂತಹ ಹಿಂದಿನ ಆರೋಗ್ಯ ಕಾರ್ಯಕ್ರಮಗಳ ಯಶಸ್ಸನ್ನು ಆಧರಿಸಿ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ರಾಮನಗರ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ (Children Health) ಮತ್ತು ಸಮುದಾಯ ಯೋಗಕ್ಷೇಮದ (Community Wellness) ಮೇಲೆ ವಿಶೇಷ ಗಮನ ಹರಿಸಿ ಟೊಯೊಟಾ ಶಾಲೆ ಆರೋಗ್ಯ ಕಾರ್ಯಕ್ರಮದ (ಟಿಎಸ್ಎಪಿ) ನಿರಂತರ ಯಶಸ್ಸನ್ನು ಘೋಷಿಸಿತು. ಆರಂಭದಲ್ಲಿ 2019ರಲ್ಲಿ ಪ್ರಾರಂಭವಾದ ಟಿಎಸ್ಎಪಿ, ಮಕ್ಕಳನ್ನು ದೇಶದ ಭವಿಷ್ಯವೆಂದು ಪರಿಗಣಿಸಿ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿಗೆ ಟಿಕೆಎಂನ ಸಮಗ್ರ ವಿಧಾನದಲ್ಲಿ ಪ್ರಮುಖ ಕಾರ್ಯಕ್ರಮವಾಗಿ ಇದು ವಿಕನಸಗೊಂಡಿದೆ(Toyota Kirloskar).
ಟಿಎಸ್ಎಪಿ ಅಡಿಯಲ್ಲಿ ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಮತ್ತು ಪರಿಹರಿಸಲು ಗಮನ ಹರಿಸಿ ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ. ಈ ಕಾರ್ಯಕ್ರಮ ಶಾಲಾ ವಿದ್ಯಾರ್ಥಿಗಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ದೃಷ್ಟಿ ಮತ್ತು ಶ್ರವಣ ದೋಷಗಳಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ. ರೋಗನಿರ್ಣಯವನ್ನು ಅವಲಂಬಿಸಿ ಅವರಿಗೆ ಕನ್ನಡಕ, ಶ್ರವಣ ಸಾಧನಗಳು, ಆರೋಗ್ಯ ಪೂರಕಗಳು ಅಥವಾ ತೃತೀಯ ಆರೋಗ್ಯ ಕೇಂದ್ರಕ್ಕೆ ಶಿಫಾರಸು ಮಾಡುವಂತಹ ಹಲವು ಕ್ರಮಗಳನ್ನು ಒಳಗೊಂಡಿದೆ. ಇದಲ್ಲದೆ ಕಾರ್ಯಕ್ರಮವು ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಸೆಷನ್ ಗಳನ್ನು ಹೊಂದಿದೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಜ್ಞಾನದೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಇಲ್ಲಿಯವರೆಗೆ ಈ ಕಾರ್ಯಕ್ರಮವು ರಾಮನಗರ ಜಿಲ್ಲೆಯ 180 ಕ್ಕೂ ಹೆಚ್ಚು ಶಾಲೆಗಳಲ್ಲಿ 10,000 ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದೆ.
ಇದಲ್ಲದೆ ಟಿಎಸ್ಎಪಿ ಕಾರ್ಯಕ್ರಮವನ್ನು ಆರೋಗ್ಯ ಶಿಬಿರಗಳ ಮೂಲಕ ಸಮುದಾಯಕ್ಕೆ ವಿಸ್ತರಿಸಲಾಗಿದೆ. ಈ ಶಿಬಿರಗಳು ಅಗತ್ಯ ಔಷಧಿಗಳ ವಿತರಣೆಯ ಜೊತೆಗೆ ರ್ಯಾಂಡಂ ಬ್ಲಡ್ ಶುಗರ್ ಟೆಸ್ಟ್ , ದೃಷ್ಟಿ ಮತ್ತು ದಂತ ಪರೀಕ್ಷೆಗಳು, ಇಸಿಜಿಗಳಂತಹ ವೈದ್ಯಕೀಯ ತಪಾಸಣೆಗಳನ್ನು ಒದಗಿಸುತ್ತವೆ. ಈ ಕಾರ್ಯಕ್ರಮವು ಹಳ್ಳಿಗಳಿಗೆ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಒದಗಿಸುತ್ತದೆ, ಇದು ಎಲ್ಲಾ ಸಮುದಾಯದ ಸದಸ್ಯರಿಗೆ ಲಭ್ಯವಾಗಿದೆ. ಪ್ರಸಕ್ತ ವರ್ಷದಲ್ಲಿ ಟಿಕೆಎಂ 18 ಹಳ್ಳಿಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ದು, 1100 ಕ್ಕೂ ಹೆಚ್ಚು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ನ ಕಂಟ್ರಿ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು, “ಸಮುದಾಯ ಯೋಗಕ್ಷೇಮಕ್ಕಾಗಿ ನಾವು ಬದ್ಧರಾಗಿ ಟೊಯೊಟಾ ಶಾಲೆ ಆರೋಗ್ಯ ಕಾರ್ಯಕ್ರಮ, ಸಮುದಾಯ ಆರೋಗ್ಯ ಕೇಂದ್ರ ಮತ್ತು ನೀರು ಶುದ್ಧೀಕರಣ ಘಟಕಗಳಂತಹ ನಮ್ಮ ಇತರ ಆರೋಗ್ಯ ಪ್ರಯತ್ನಗಳ ಜೊತೆಗೆ ಸಮುದಾಯದ ಸದಸ್ಯರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ನಮ್ಮ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ. ವಿಶೇಷವಾಗಿ ಮಕ್ಕಳ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸುವುದು, ಉಜ್ವಲ ಭವಿಷ್ಯವನ್ನು ಬೆಳೆಸುವುದು. ನಾವು ಮುಂದಿನ ಹಾದಿಯಲ್ಲಿ ಸಾಗುತ್ತಿರುವಾಗ, ಆರೋಗ್ಯಕರ ಸಮಾಜ ಮತ್ತು ರಾಷ್ಟ್ರವನ್ನು ರಚಿಸುವ ನಮ್ಮ ಪ್ರತಿಜ್ಞೆ, ಸುಸ್ಥಿರ ಪ್ರಗತಿಯು ನಮ್ಮ ಮಕ್ಕಳು ಮತ್ತು ಸಮುದಾಯಗಳ ಯೋಗಕ್ಷೇಮದಿಂದ ಪ್ರಾರಂಭವಾಗುತ್ತದೆ ಎಂಬ ನಂಬಿಕೆಯಿಂದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತೇವೆ.
ಆರೋಗ್ಯ ರಕ್ಷಣೆಗೆ ವಿಶಾಲ ಸಮರ್ಪಣೆಯನ್ನು ಪ್ರದರ್ಶಿಸುವ ಟಿಕೆಎಂ ಟಿಎಸ್ಎಪಿ ಕ್ಷೇತ್ರಗಳನ್ನು ಮೀರಿ ಬೆಳೆದಿದೆ. ಇತ್ತೀಚಿನ ಕೆಲವು ಕಾರ್ಯಕ್ರಮಗಳಲ್ಲಿ ಕರ್ನಾಟಕದ ಬಿಡದಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರವು ವಿಶೇಷ ಆಮ್ಲಜನಕ ಉತ್ಪಾದನಾ ಘಟಕವನ್ನು ಹೊಂದಿದೆ. ಹೆಚ್ಚುವರಿಯಾಗಿ ಎಬಿಸಿಡಿಯಂತಹ ಶಾಲಾ ಆಧಾರಿತ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮಗಳು ಮತ್ತು ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಯು ಸಮುದಾಯದೊಳಗಿನ ಆರೋಗ್ಯ ಫಲಿತಾಂಶಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಟಿಕೆಎಂ 65,000 ಕ್ಕೂ ಹೆಚ್ಚು ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. 11,16,365 ಕ್ಕೂ ಹೆಚ್ಚು ಮಂದಿಗೆ ನೆರವು ದೊರೆತಿದೆ.
ಈ ಸುದ್ದಿಯನ್ನೂ ಓದಿ: Toyota Kaushalya 2023: ಟೊಯೊಟಾ ಕೌಶಲ್ಯ ಕಾರ್ಯಕ್ರಮದಲ್ಲಿ ಯುವತಿಯರಿಗೆ ಅವಕಾಶ