Site icon Vistara News

Heart Attack : ಜೀವ ಕ್ಷಣಿಕ ಕಣೋ! ಮೊಬೈಲ್‌ನಲ್ಲಿ ಮಾತನಾಡುತ್ತಲೇ ಹಾರಿ ಹೋಯ್ತು ಯುವಕನ ಪ್ರಾಣ ಪಕ್ಷಿ

Heart attack

#image_title

ಹಾಸನ: ಈಗೀಗ ಹೃದಯಾಘಾತ (Heart attack) ಯಾವುದೇ ಕ್ಷಣದಲ್ಲಿ ಆಗಿಬಿಡಬಹುದು ಎನ್ನುವಷ್ಟು ಭಯಾನಕವಾಗಿದೆ. ಕುಳಿತಲ್ಲೇ, ಕುಸಿದುಬಿದ್ದು ಪ್ರಾಣ ಕಳೆದುಕೊಳ್ಳುವ, ನಿಂತಲ್ಲೇ ಉಸಿರು ನಿಲ್ಲುವ, ಮಲಗಿದ್ದಲ್ಲೇ ಉಸಿರು ಚೆಲ್ಲುವ ವಿದ್ಯಮಾನಗಳು ಏಕಾಏಕಿ ಹೆಚ್ಚಾಗಿದೆ. ಇಂಥಹುದೇ ಒಂದು ಆತಂಕ ಮೂಡಿಸುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಯುವಕನೊಬ್ಬ ಅಂಗಡಿ ಮುಂಭಾಗದಲ್ಲಿ ಕುಳಿತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗಲೇ ಕುಸಿದು ಬಿದ್ದು ಕ್ಷಣಾರ್ಧದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಹಠಾತ್ ಹೃದಯಾಘಾತದಿಂದ ಯುವಕ ಪ್ರಾಣ ಕಳೆದುಕೊಳ್ಳುವ ಮತ್ತು ಅದಕ್ಕಿಂತ ಮೊದಲು ಆತ ಒದ್ದಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅರಣ್ಯ ಕಚೇರಿ ಬಳಿ ಈ ಘಟನೆ ನಡೆದಿದೆ.

ಹೊಳೆನರಸೀಪುರ ಕಾರ್ಯಾಲಯ ಬಡಾವಣೆಯ ನಿವಾಸಿ ವಿರೂಪಾಕ್ಷ (40) ಅವರು ಮೆಡಿಕಲ್‌ ಶಾಪ್‌ ಒಂದನ್ನು ನಡೆಸುತ್ತಿದ್ದರು. ಮಾರ್ಚ್‌ 13ರಂದು ಸಂಜೆ 5 ಗಂಟೆ ಹೊತ್ತಿಗೆ ಅವರು ಅರಣ್ಯ ಕಚೇರಿ ಬಳಿಯ ಒಂದು ಅಂಗಡಿ ಮುಂಭಾಗದಲ್ಲಿ ಕುಳಿತಿದದರು. ಅಲ್ಲಿ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಿದ್ದರು.

ಆಗ ಒಮ್ಮಿಂದೊಮ್ಮೆಗೇ ಅವರಿಗೆ ಹೃದಯ ಹಿಂಡಿದಂತಾಗಿ ಕುಸಿದುಬಿದ್ದರು. ಅಲ್ಲೇ ಒಂದಿಷ್ಟು ಹೊತ್ತು ಹೊರಳಾಡಿ ಮೃತಪಟ್ಟರು. ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ವಿರೂಪಾಕ್ಷ ಜೀವನದ ಅಂತಿಮ ಕ್ಷಣ ಸೆರೆಯಾಗಿದೆ. ನೋಡ ನೋಡುತಿದ್ದಂತೆ ಕುಸಿದು ಬೀಳುವ ಯುವಕನನ್ನು ಸ್ಥಳದಲ್ಲಿದ್ದವರು ಕೂಡಲೇ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರಾದರೂ ಅಷ್ಟು ಹೊತ್ತಿಗಾಗಲೇ ಅವರು ಮೃತಪಟ್ಟಿದ್ದನ್ನು ಘೋಷಿಸಲಾಯಿತು.

ಸಾಕಷ್ಟು ಸ್ನೇಹ ಬಳಗವನ್ನು ಹೊಂದಿದ್ದ ವಿರೂಪಾಕ್ಷ ಅವರ ಸಾವು ಬಳಗದಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ.

ಇದನ್ನೂ ಓದಿ : Heart Attack: ಮೈದಾನದಲ್ಲೇ ಹೃದಯಾಘಾತ; ಕ್ರಿಕೆಟರ್​ ಮೃತ್ಯು

Exit mobile version