Site icon Vistara News

Heart Attack: ತೆಂಗಿನ ಮರ ಏರಿದವನಿಗೆ ನಿಂತು ಹೋಯ್ತು ಹೃದಯದ ಬಡಿತ; ಮರದಲ್ಲೇ ಹೃದಯಾಘಾತವಾಗಿ ಸಾವು

#image_title

ಬೆಂಗಳೂರು: ತೆಂಗಿನ ಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಮರದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ಕೆಂಗೇರಿಯಲ್ಲಿ ನಡೆದಿದೆ. ವಿಜಯಶ್ರೀ ಲೇಔಟ್‌ನ ಮೈಲಸಂದ್ರದ ನಿವಾಸಿ ನಾರಾಯಣಪ್ಪ(60) ಮೃತ ದುರ್ದೈವಿ.

ನಾರಾಯಣಪ್ಪನವರು ಮರ ಏರಿ ತೆಂಗಿನ ಕಾಯಿಯನ್ನು ಕೀಳುವ ಕೆಲಸ ಮಾಡುತ್ತಿದ್ದರು. ಅದರಂತೆ ಸೋಮವಾರ (ಫೆ.೬) ಬೆಳಗಿನ ಜಾವ ವೆಂಕರಮಣಸ್ವಾಮಿ ದೇವಸ್ಥಾನ ಸಮೀಪವಿರುವ ತೆಂಗಿನ ಮರವನ್ನು ಹತ್ತಿದ್ದು, ಈ ವೇಳೆ ಎಷ್ಟೊತ್ತಾದರೂ ಕೆಳಗೆ ಬಾರದೆ ಇದ್ದಾಗ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ತೆಂಗಿನ ಮರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಾರಾಯಣಪ್ಪನವರನ್ನು 30 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಕೆಳಗಿಳಿಸಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: Suicide Case: ಪೊಲೀಸ್ ಸಿಬ್ಬಂದಿ ನೇಣಿಗೆ ಶರಣು; ಆನ್‌ಲೈನ್‌ ಆಟದ ಸೋಲು, ಸಾಲ ಬಾಧೆ ಶಂಕೆ

ಮೊದಮೊದಲು ಮಾನಸಿಕ ಅಸ್ವಸ್ಥರೊಬ್ಬರು ಮರ ಏರಿ ಪ್ರಜ್ಞೆ ತಪ್ಪಿರಬಹುದೆಂದು ಪೊಲೀಸರು ಅಂದಾಜಿಸಿದ್ದರು. ಆದರೆ, ಮರದ ಬುಡದಲ್ಲಿ ಗೋಣಿ ಚೀಲ, ಹಗ್ಗದ ಬಂಡಲ್‌, ಕುಡುಗೋಲು ಪತ್ತೆ ಆಗಿತ್ತು.

Exit mobile version