ಆನೇಕಲ್: ಓಂ ಶಕ್ತಿ ಮಾಲಾಧಾರಿಯೊಬ್ಬರು ಬಸ್‌ನಲ್ಲಿಯೇ ಕುಣಿದು ಕುಪ್ಪಳಿಸುತ್ತಿರುವಾಗಲೇ ಹೃದಯಾಘಾತದಿಂದ (Heart attack) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಸತ್ಯವಾಣಿ (53) ಮೃತ ದುರ್ದೈವಿ.
ಬೆಂಗಳೂರಿನ ಲಾಲ್‌ಬಾಗ್ ಗೇಟ್ ಸಿಗ್ನಲ್‌ನಿಂದ ತಮಿಳುನಾಡಿನ ಓಂ ಶಕ್ತಿ ಕ್ಷೇತ್ರಕ್ಕೆ ಸುಮಾರು 50ಕ್ಕೂ ಹೆಚ್ಚು ಜನರ ತಂಡವು ಮಾಲೆ ಧರಿಸಿ ಹೊರಟಿದ್ದವು. ಆನೇಕಲ್ ಮಾರ್ಗವಾಗಿ ಓಂ ಶಕ್ತಿ ದೇವಾಲಯಕ್ಕೆ ಹೋಗುವಾಗ ಬಸ್‌ನಲ್ಲಿ ಬೇವಿನ ಎಲೆ ಹಿಡಿದು ಮಕ್ಕಳೊಂದಿಗೆ ನೃತ್ಯ ಮಾಡುತ್ತಿದ್ದರು. ಈ ವೇಳೆ ದಿಢೀರ್ ಹೃದಯಾಘಾತದಿಂದ ಕುಸಿದು ಬಿದ್ದರು.
ಕೂಡಲೇ ಅವರನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದರು. ಅಷ್ಟರಲ್ಲಾಗಲೇ ಉಸಿರು ಚೆಲ್ಲಿದ್ದರು. ಸತ್ಯವಾಣಿಯವರ ಸಾವಿನ ಕೊನೆಯ ಕ್ಷಣಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ | Woman suicide | ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ: ಕೈ ಕೊಯ್ದು ನೇಣಿಗೇರಿಸಿದನೇ ಗಂಡ?