Site icon Vistara News

Heart attack | 10ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು; ಶಾಲೆಗೆ ಹೊರಟಾಗ ಹಿಂಡಿತು ಹೃದಯ

ಶಿವಮೊಗ್ಗ: ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ಹೃದಯಾಘಾತದಿಂದ (Heart attack) ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೂರು ದಿನದ ಹಿಂದಷ್ಟೇ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿ ಕೂಡುಮಂಗಳೂರಿನ ನಿವಾಸಿಯಾಗಿರುವ ಕೀರ್ತನ್‌ (೧೨) ಎಂಬಾತ ಮಲಗಿದ್ದಲೇ ಹೃದಯಾಘಾತವಾಗಿ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಬಾಲಕನ ಹೃದಯದ ಬಡಿತ ಸ್ತಬ್ಧವಾಗಿದೆ.

ಆನವಟ್ಟಿಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜಯಂತ್ ರಜತಾದ್ರಯ್ಯ ಹೃದಯಾಘಾತದಿಂದ ಮೃತಪಟ್ಟವನು. ಜಯಂತ್‌ ಎಂದಿನಂತೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ. ಈ ವೇಳೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದರು. ಆದರೆ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬದುಕಿ ಬಾಳಬೇಕಾದ ಮಗನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು, ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ವಿಧಿಯಾಟಕ್ಕೆ ಹಿಡಿಶಾಪ ಹಾಕಿದರು.

ಇದನ್ನೂ ಓದಿ | Man Urinates At IGI Airport | ಕುಡಿದ ಮತ್ತಲ್ಲಿ ಏರ್‌ಪೋರ್ಟ್ ಗೇಟ್‌ ಬಳಿಯೇ ಮೂತ್ರ ಮಾಡಿದ ವ್ಯಕ್ತಿ, ಬಂಧಿಸಿದ ಪೊಲೀಸರು

Exit mobile version