Site icon Vistara News

Heart attack | ಕೈನಲ್ಲಿ ಟೀ ಹಿಡಿದು ನಡೆದು ಹೋಗುತ್ತಲೇ ಕುಸಿದು ಬಿದ್ದು ಸಾವು; ಬದುಕಿನ ಕ್ಷಣಿಕತೆ ಸಿಸಿಟಿವಿಯಲ್ಲಿ ಸೆರೆ!

ಆನೇಕಲ್: ಇಲ್ಲಿನ ಬೆಂಗಳೂರು ಹೊರವಲಯದ ಜಿಗಣಿ ಕೈಗಾರಿಕಾ ಪ್ರದೇಶದ ಎಪಿಸಿ ಸರ್ಕಲ್‌ನಲ್ಲಿರುವ ಸ್ಲೈಡರ್ ಕಾರ್ಖಾನೆ ಕ್ಯಾಂಟೀನ್‌ನಲ್ಲಿ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಹೃದಯಾಘಾತದಿಂದ (Heart attack) ಮೃತಪಟ್ಟಿರುವ ಘಟನೆ ನಡೆದಿದೆ. ಸ್ಲೈಡರ್ ಕಂಪನಿ ಕಾರ್ಮಿಕ ಮುನಿರಾಜು ಮೃತ ದುರ್ದೈವಿ.

ಡಿಸೆಂಬರ್ 31ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುನಿರಾಜು ಊಟ ಮುಗಿಸಿ, ಟೀ ಕುಡಿಯಲು ಕ್ಯಾಂಟೀನ್‌ಗೆ ಬಂದಿದ್ದರು. ಕೌಂಟರ್ ಬಳಿ ಎರಡು ಕಪ್‌ ಟೀ ಅನ್ನು ಕೈನಲ್ಲಿ ಹಿಡಿದು ಟೇಬಲ್‌ನತ್ತ ಹೆಜ್ಜೆ ಹಾಕಿದ್ದಾರೆ. ಟೇಬಲ್ ಬಳಿ ಕೂರುವಷ್ಟರಲ್ಲಿ ದಿಢೀರ್ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ.

ಸುತ್ತಲೂ ಇದ್ದ ಸಹದ್ಯೋಗಿಗಳೆಲ್ಲ ಆಘಾತಕ್ಕೆ ಒಳಗಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರೂ, ಆದರೆ ಅದಾಗಲೇ ವಿಧಿಯಾಟಕ್ಕೆ ಮುನಿರಾಜು ಬಲಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಹೊಸ ವರ್ಷ ಆಚರಣೆಗಾಗಿ ಮುಂಬಯಿ ಬಿಟ್ಟು ಹೋಗಿದ್ದ ಬಾಲಿವುಡ್​ ನಟ-ನಟಿಯರು ವಾಪಸ್​; ಇಲ್ಲಿವೆ ಏರ್​ಪೋರ್ಟ್​ ವಿಡಿಯೊಗಳು

Exit mobile version