Site icon Vistara News

Heavy rain | ಚಾಮರಾಜನಗರದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು; ಹೊಳೆ ಮಧ್ಯೆಯೇ ಊಟ!

rain

ಚಾಮರಾಜನಗರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯು (Heavy rain) ಜಿಲ್ಲೆಯಲ್ಲಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ಇಲ್ಲಿನ ನಂದಿಭವನ ಎಂಬ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದು, ಊಟದ ಹಾಲ್‌ನಲ್ಲಿ ಮಳೆ ನೀರು ನಿಂತಿದೆ.

ಇತ್ತ ಸಂಭ್ರಮದಲ್ಲಿ ವಿವಾಹ ಕಾರ್ಯಕ್ರಮಗಳು ನಡೆಯುತ್ತಿತ್ತು. ಅತ್ತ ನಿರಂತರ ಮಳೆಯಿಂದಾಗಿ ಚರಂಡಿಗಳೆಲ್ಲವೂ ತುಂಬಿ ಹರಿದು ರಸ್ತೆ ಮೇಲೆ ನೀರು ನುಗ್ಗಿದೆ. ಅಲ್ಲದೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಕಲ್ಯಾಣ ಮಂಟಪದ ಅಡುಗೆ ಮನೆ ಹಾಗೂ ಊಟದ ಹಾಲ್ ಜಲಾವೃತಗೊಂಡಿವೆ. ನೀರಿನಲ್ಲಿ ಪಾತ್ರಪಗಡೆಗಳು ತೇಲುತ್ತಿದ್ದ ಚಿತ್ರಣ ಕಂಡು ಬಂತು. ಮದುವೆ ಸಂಭ್ರಮಕ್ಕೆ ವರುಣನ ಅಡ್ಡಿಯಾಗಿದ್ದು, ಬೇರೆ ದಾರಿಯಿಲ್ಲದೆ ನೀರಿನ ನಡುವೆಯೇ ಮದುವೆ ಭೋಜನ ಸವಿಯಬೇಕಾಯಿತು.

ವಾಹನ ಸವಾರರ ಪರದಾಟ

ಮನೆಗಳಿಗೆ ನುಗ್ಗಿದ ಮಳೆನೀರು

ಜಿಲ್ಲೆಯ ಯಳಂದೂರು ತಾಲೂಕಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಕೆಸ್ತೂರು ಗ್ರಾಮದ‌ ಅಂಬೇಡ್ಕರ್ ಕಾಲೋನಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಪರದಾಡಬೇಕಾಯಿತು. ಜತೆಗೆ ಮಳೆ ನೀರಿನಿಂದ ಪೆಟ್ರೋಲ್‌ ಬಂಕ್‌ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆ ಮೇಲೆ 3-4ಅಡಿ ನೀರು ನಿಂತಿದ್ದ ಪರಿಣಾಮ ಬೈಕ್‌ ಸವಾರರು ಹರಸಾಹಸ ಪಡಬೇಕಾಯಿತು.

ಶಾಲೆಗಳಿಗೆ ರಜೆ ಘೋಷಣೆ

ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ | Heavy Rain | ಚಿಕ್ಕಬಳ್ಳಾಪುರದಲ್ಲಿ ಮಳೆ‌ ನೀರಿಗೆ ಕೊಚ್ಚಿ ಹೋದ ಟ್ರ್ಯಾಕ್ಟರ್- ಬೈಕ್‌ಗಳು

Exit mobile version