ಚಿಕ್ಕಬಳ್ಳಾಪುರ: ಸತತ ಎರಡು ದಿನದ ಮಳೆಗೆ (Heavy Rain) ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆ ನೀರಿಗೆ ಟ್ರ್ಯಾಕ್ಟರ್ ಹಾಗೂ ಬೈಕ್‌ಗಳು ಕೊಚ್ಚಿ ಹೋಗಿ ಜನ ಹೈರಾಣಾಗಿದ್ದಾರೆ. ಗೌರಿಬಿದನೂರು ತಾಲ್ಲೂಕಿನ ಮೇಳ್ಯ ಹಾಗೂ ಜಗರೆಡ್ಡಿಹಳ್ಳಿ ಮಾರ್ಗದಲ್ಲಿ ಮೇಳ್ಯಾ ಕೆರೆ ಕೋಡಿ ಹರಿದು ರಸ್ತೆ ಮೇಲೆ ನೀರು ಹರಿಯುತ್ತಿದೆ.
ಮಳೆ ಹೆಚ್ಚಿದ್ದರಿಂದ ಕೆರೆ ಕೋಡಿ ಹರಿದು ರಭಸವಾಗಿ ಮುನ್ನುಗ್ಗುತ್ತಿದ್ದರೂ ಟ್ರ್ಯಾಕ್ಟರ್ ಚಾಲಕನೊಬ್ಬ ಹುಂಬುತನದಿಂದ ಆ ಮಾರ್ಗದಲ್ಲೇ ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ, ನೀರಿನ ಸೆಳೆತ ವಿಪರೀತವಾಗಿ ಇದ್ದಿದ್ದರಿಂದ ನಿಯಂತ್ರಣಕ್ಕೆ ಬಾರದೇ ಟ್ರ್ಯಾಕ್ಟರ್ ಕೊಚ್ಚಿಹೋಗಿದೆ. ಇದೇ ವೇಳೆ ಚಾಲಕ ಸಹ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದು, ಸ್ಥಳೀಯರು ರಕ್ಷಿಸಿದ್ದಾರೆ.
ಸೋಮವಾರ ಬೆಳಗ್ಗೆ ಸಂದರ್ಭದಲ್ಲಿ ಎರಡು ದ್ವಿಚಕ್ರ ವಾಹನಗಳು ಸಹ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ನಿಯಂತ್ರಣಕ್ಕೆ ಸಿಗದೆ ಕೊಚ್ಚಿ ಹೋಗಿದ್ದು, ಬೈಕ್ ಸವಾರರು ಈಜಿಕೊಂಡು ದಡ ಸೇರಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.
ರಸ್ತೆಯಲ್ಲಿ ಕುಳಿತು ಬಟ್ಟೆ ಒಗೆದ ಮಹಿಳೆಯರು
ಮೇಳ್ಯಾ ಜಗರೆಡ್ಡಿಹಳ್ಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕೆಲ ಮಹಿಳೆಯರು ಬಟ್ಟೆ ಒಗೆದುಕೊಂಡು ಹೋಗುತ್ತಿದ್ದ ಘಟನೆ ನಡೆಯಿತು. ಮಕ್ಕಳು ಮರಿಗಳು ಮಳೆ ನೀರಿನಲ್ಲಿ ಆಟವಾಡುತ್ತಿದ್ದ ಚಿತ್ರಣ ಕಂಡುಬಂತು.
ಇದನ್ನೂ ಓದಿ | RAIN NEWS: ಬೆಂಗಳೂರು-ಮೈಸೂರು ರೋಡ್‌ಗೆ ನುಗ್ಗಿದ ನೀರು, ಸಂಚರಿಸಬೇಡಿ ಎಂದು ಮನವಿ ಮಾಡಿದ ಎಚ್‌ಡಿಕೆ