Site icon Vistara News

Rain News: ಬಾದಾಮಿ ಬಳಿ ಸಿಡಿಲಿಗೆ 9 ಕುರಿಗಳು ಬಲಿ

lightning strike Badami

lightning strike Badami

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ (Rain News) ಹೊರವಲಯದಲ್ಲಿ ಸಿಡಿಲು ಬಡಿದು 9 ಕುರಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಹನಮಂತ ನಾಯ್ಕರ್ ಮತ್ತು ಹನಮಂತ ಚೂರಿ ಎಂಬುವವರ ಕುರಿಗಳು ಮೃತಪಟ್ಟಿವೆ.

ಜಮೀನಿನಲ್ಲಿ ಕುರಿಗಳನ್ನು ಮೇಯಲು ಬಿಡಲಾಗಿತ್ತು. ಈ ವೇಳೆ ಮರಕ್ಕೆ ಸಿಡಿಲು ಬಡಿದಿದೆ, ಸಿಡಿಲಿನ ತೀವ್ರತೆಗೆ ಮರದ ಬಳಿ ಇದ್ದ 9 ಕುರಿಗಳು ಮೃತಪಟ್ಟಿವೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Bangalore Rain: ಕುಟುಂಬಸ್ಥರಿಗೆ ಭಾನುರೇಖಾ ಮೃತದೇಹ ಹಸ್ತಾಂತರ; ವಿಜಯವಾಡಕ್ಕೆ ರವಾನೆ

ಉತ್ತರ ಕನ್ನಡದ ಜಿಲ್ಲೆಯಲ್ಲಿ ವರುಣನ ಅಬ್ಬರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಕಾರವಾರ, ಅಂಕೋಲಾ, ಕುಮಟಾ, ಶಿರಸಿ, ಸಿದ್ದಾಪುರದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.

Exit mobile version