Site icon Vistara News

Rain News | ವಿಜಯಪುರ ಜಿಲ್ಲೆಯಲ್ಲಿ ತುಂಬಿ ಹರಿದ ಹಳ್ಳ; ನೂರಾರು ಎಕರೆ ಬೆಳೆ ಜಲಾವೃತ

Rain News

ವಿಜಯಪುರ: ತಾಳಿಕೋಟೆ ಬಳಿಯ ಭಂಟನೂರ ಗ್ರಾಮದಲ್ಲಿ ಧಾರಾಕಾರ ಮಳೆಯಿಂದ (Rain News) ಹಳ್ಳ ತುಂಬಿಹರಿದ ಪರಿಣಾಮ ನೂರಾರು ಎಕರೆ ಬೆಳೆ ಹಾನಿಯಾಗಿದೆ.

ಭಂಟನೂರ ಗ್ರಾಮದಿಂದ ಗಡಿಸೋಮನಾಳ, ಬಮ್ಮನಹಳ್ಳಿ, ಖ್ಯಾತನಾಳ ಮೂಲಕ ಹಳ್ಳ ಸಾಗುತ್ತದೆ. ಹೀಗಾಗಿ ಹಳ್ಳದ ಇಕ್ಕೆಲಗಳ ಜಮೀನುಗಳಿಗೆ ನೀರು ನುಗ್ಗಿ ತೊಗರಿ, ಹತ್ತಿ ಬೆಳೆ ಸೇರಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಅಧಿಕಾರಿಗಳು ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Rain News | ಹಿರಣ್ಯಕೇಶಿ, ಘಟಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳ, ತೀರ ಪ್ರದೇಶದಲ್ಲಿ ಪ್ರವಾಹ ಭೀತಿ!

ಅದೇ ರೀತಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ ಚಡಚಣ ತಾಲೂಕಿನ ಉಮರಾಣಿ ಸೇತುವೆ ಮುಳುಗಡೆಯಾಗಿದ್ದು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಬಂದ್‌ ಆಗಿದೆ. ಕ್ಷಣಕ್ಷಣಕ್ಕೂ ನದಿಯಲ್ಲಿ ಒಳಹರಿವು ಹೆಚ್ಚಾಗುತ್ತಿರುವುದರಿಂದ ನದಿ ತೀರದ ಏಳೆಂಟು ಗ್ರಾಮಗಳಿಗೆ ಪ್ರವಾಹ ಭೀತಿ ಉಂಟಾಗಿದೆ.

ನೆರೆಯ ಮಹಾರಾಷ್ಟ್ರ ಹಾಗೂ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದ್ದರಿಂದ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಆಲಮಟ್ಟಿ ಡ್ಯಾಂನಿಂದ ಕೃಷ್ಣಾನದಿಗೆ 1.2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ರೈತರ ಆತಂಕಗೊಂಡಿದ್ದು, ನದಿಗೆ ಜನ ಜಾನುವಾರು ಇಳಿಯಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

ಇದನ್ನೂ ಓದಿ Rain News | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ; 69 ಗ್ರಾಮಗಳಿಗೆ ಜಲದಿಗ್ಬಂಧನ ಆತಂಕ!

Exit mobile version