Site icon Vistara News

Weather Report : ಕರಾವಳಿಯಲ್ಲಿ ಮಳೆ ನಾನ್‌ ಸ್ಟಾಪ್;‌ ಬೆಂಗಳೂರಲ್ಲಿ ಸಾಫ್ಟ್!

women in rain with umbrella

ಬೆಂಗಳೂರು: ಕರಾವಳಿ (coastal karnataka), ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂಗಾರು ಮಳೆ (Monsoon Rain) ಅಬ್ಬರಿಸಲಿದೆ. ಅದರಲ್ಲೂ ಕರಾವಳಿ ತೀರದ ಜಿಲ್ಲೆಗಳಲ್ಲಿ ನಾನ್‌ ಸ್ಟಾಪ್‌ ರೀತಿಯಲ್ಲಿ ಮಳೆ ಸುರಿಯುತ್ತಲಿದ್ದು, ಇನ್ನೂ ಎರಡು ದಿನ ಇದು ಮುಂದುವರಿಯಲಿದೆ. ಅಲ್ಲದೆ, ದಕ್ಷಿಣ ಒಳನಾಡಿನ (South Inland) ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಭರ್ಜರಿ ಮಳೆಯಾಗಲಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ವರುಣ ಸಾಫ್ಟ್‌ ಕಾರ್ನರ್‌ ಹೊಂದಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Weather Report) ಉಲ್ಲೇಖಿಸಿದೆ.

ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಮಳೆ ಗುಡುಗು ಸಹಿತ ಭರ್ಜರಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಶುಕ್ರವಾರವೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆ ಹುಚ್ಚುಕೋಡಿಯಂತೆ ಸುರಿಯಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಮನೆಯಿಂದ ಹೊರಗೆ ಹೋಗುವವರು, ವಾಹನಗಳಲ್ಲಿ ಸಂಚಾರ ಮಾಡುವವರು, ತೋಟ, ಗದ್ದೆ ಕೆಲಸ ಮಾಡುವವರು ಎಚ್ಚರ ವಹಿಸಲು ಸೂಚಿಸಲಾಗಿದೆ.

ಉತ್ತರದ 7 ಕಡೆ ಮಳೆ, 3 ಕಡೆ ಒಣಹವೆ!

ಉತ್ತರ ಒಳನಾಡಿನ (North Inland) ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಧಾರವಾಡ, ಗದಗ ಹಾಗೂ ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿಯ ಕೆಲವು ಕಡೆ ಮಳೆಯಾಗಲಿದೆ. ಉಳಿದಂತೆ ಬಾಗಲಕೋಟೆ, ಕೊಪ್ಪಳ, ವಿಜಯಪುರದಲ್ಲಿ ಒಣಹವೆ (Dry weather) ಇರಲಿದೆ.

40 ಕಿಮೀ ವೇಗದಲ್ಲಿ ಬೀಸುವ ಗಾಳಿ!

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮುಂದಿನ ಎರಡು ದಿನಗಳ ಅವಧಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ರಾಜ್ಯದ ಹಲವು ಕಡೆ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ (Alert to fishermen)

ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿ.ಮೀ. ವೇಗವನ್ನು ಪಡೆದುಕೊಂಡಿದ್ದು, 55 ಕಿ.ಮೀ. ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರಲ್ಲಿ ಸಾಧಾರಣ ಪ್ರದರ್ಶನ (Bangalore Rain)

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಗುರುವಾರ ಮತ್ತು ಶುಕ್ರವಾರ ಬೆಳಗ್ಗೆ ಹೊತ್ತು ಆಗಾಗ ಬಿಸಿಲು ಕಾಣಿಸಿಕೊಂಡರೂ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಒಂದೆರಡು ಬಾರಿ ಸಾಧಾರಣ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಮಳೆ”ನಾಡಲ್ಲಿ ಮಳೆ ಕೊರತೆ!

ಜುಲೈ 1 ರಿಂದ ಜುಲೈ 11 ರವರೆಗೆ ನಡೆದ ಮಳೆ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (Karnataka State Natural Disaster Monitoring Centre) ವಿಶ್ಲೇಷಣಾ ವರದಿಯನ್ನು ನೀಡಿದೆ. ಇದರ ಪ್ರಕಾರ, ಕರ್ನಾಟಕದ 13 ಜಿಲ್ಲೆಗಳಲ್ಲಿ “ಹೆಚ್ಚುವರಿ” ಅಥವಾ “ಭಾರಿ” ಮಳೆಯಾಗಿದೆ. ಆದರೆ 12 ಜಿಲ್ಲೆಗಳಲ್ಲಿ “ಸಾಮಾನ್ಯ” ಮಳೆಯಾಗಿದೆ. ಇನ್ನು ಕೋಲಾರ, ಮಂಡ್ಯ ಸಹಿತ ಮಳೆಯೇ ಹೆಚ್ಚು ಬೀಳುವ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ “ಕೊರತೆ” (deficit of rain) ಸ್ಥಿತಿಯು ಕಂಡುಬಂದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Exit mobile version