ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ವಿಸ್ತಾರ ನ್ಯೂಸ್ ಜೂ.20ರಂದು ಮಂಗಳವಾರ Exclusive Phone In ಕಾರ್ಯಕ್ರಮವನ್ನು ಆಯೋಜಿಸಿದೆ.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಜಾರಿಗೆ ತಂದಿದೆ. ರಾಜ್ಯದ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯ ಅನುಕೂಲ-ಅನಾನುಕೂಲಗಳೇನು? ಸಮಸ್ಯೆ ಏನು? ಸರ್ಕಾರಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ನಿಮ್ಮ ಸಲಹೆ ಸೂಚನೆಗಳೇನು? ಸಾರಿಗೆ ಸಿಬ್ಬಂದಿಯ ಬೇಡಿಕೆಗಳೇನು? ನಿಮ್ಮೂರಲ್ಲಿ ಸರ್ಕಾರಿ ಬಸ್ಗಳು ಇಲ್ಲವೇ? ಇಂಥ ಹತ್ತು ಹಲವು ಪ್ರಶ್ನೆಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಸ್ತಾರ ನ್ಯೂಸ್ ಮೂಲಕ ಉತ್ತರಿಸಲಿದ್ದಾರೆ.
ಸಾರಿಗೆ ಸಂಸ್ಥೆ, ಸರ್ಕಾರಿ ಬಸ್ಗಳ ಕುರಿತ ಪ್ರಶ್ನೆಗಳನ್ನು ನೀವೂ ನೇರವಾಗಿ ಕೇಳಿ. ಆದರೆ, ವೈಯಕ್ತಿತ ಸಂಗತಿಗಳನ್ನು ಪ್ರಸ್ತಾಪಿಸಲು ಇಲ್ಲಿ ಅವಕಾಶ ನೀಡಲಾಗುವುದಿಲ್ಲ. ಸಚಿವರ ಜತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳೂ ಹಾಜರಿರುತ್ತಾರೆ.
ಇದನ್ನೂ ಓದಿ: ದಿನೇಶ್ ಗುಂಡೂರಾವ್ ಫೋನ್ ಇನ್; 108 ಆಂಬ್ಯುಲೆನ್ಸ್ಗೆ ಕಾಯಕಲ್ಪ, ಸರ್ಕಾರಿ ಆಸ್ಪತ್ರೆಗಳಿಗೆ ಸರ್ಜರಿ
ಇಂದು ಕರೆ ಮಾಡಿ, ಸಮಸ್ಯೆ ಬಗ್ಗೆ ತಿಳಿಸಿ
ನೀವು ಕರೆ ಮಾಡಬೇಕಾದ ಮೊಬೈಲ್ ಸಂಖ್ಯೆ: 080 69554444
ಸಮಯ: ಜೂ.20ರಂದು ಸಂಜೆ 4.57ರಿಂದ.