ಬೆಂಗಳೂರು: ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ಒಂಬತ್ತು ದಿನಗಳ ಕಾಲ ನಡೆಸಲಿರುವ ವಿಜಯ ಸಂಕಲ್ಪ ಅಭಿಯಾನವನ್ನು ಆರಂಭಿಸಿದರೆ ಕಾಂಗ್ರೆಸ್‌ನ ಬಸ್ ಯಾತ್ರೆ ಮುಂದುವರಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಚಪ್ಪಲಿ ಜಗಳ ಮುಂದುವರಿದಿದೆ. ಅದರ ನಡುವೆ ೫೦೦ ಕೋಟಿ ರೂ. ಆಫರ್ ಬಂದಿದ್ದು ನನಗಲ್ಲ ಎಂದಿದ್ದಾರೆ ಜಮೀರ್ ಅಹಮದ್ ಖಾನ್. ಮೋದಿ ವಿರುದ್ಧದ ಆಕ್ಷೇಪಾರ್ಹ ಡಾಕ್ಯುಮೆಂಟರಿಯನ್ನು ಎಲ್ಲ ಪ್ಲಾಟ್ ಫಾರಂಗಳಿಂದ ತೆಗೆಯಲು ಆದೇಶಿಸಲಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಭರ್ಜರಿಗೆ ಗೆಲುವಿನಿಂದ ಬರಲಿರುವ ಕಾಂತಾರ-೨ ನಿರೀಕ್ಷೆಯ ತನಕ ದಿನದ ಪ್ರಮುಖ ಸುದ್ದಿಗಳ ಮಾಲಿಕೆಯೇ ವಿಸ್ತಾರ TOP 10 NEWS.
೧. ವಿಜಯ ಸಂಕಲ್ಪ ಅಭಿಯಾನ : ಕಾಂಗ್ರೆಸ್ ನಾಯಕನಿಲ್ಲದ ಪಕ್ಷ, ಸಮಾಜ ಒಡೆಯುವ ಪಕ್ಷ ಎಂದ ಜೆ.ಪಿ. ನಡ್ಡಾ
ಕಾಂಗ್ರೆಸ್ ನಾಯಕನಿಲ್ಲದ ಪಕ್ಷ. ಅದು ಸಮಾಜ ಒಡೆಯುವ ಪಕ್ಷ ಕಾಂಗ್ರೆಸ್. ಬಿಜೆಪಿ ಎಲ್ಲರನ್ನೂ ತೆಗೆದುಕೊಂಡು ಹೋಗುವ ಪಕ್ಷ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.… ವಿಜಯಪುರದ ಸಿಂದಗಿ ಚೌಧರಿ ಲೇ ಔಟ್‌ನಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸದಸ್ಯತ್ವ ಅಭಿಯಾನಕ್ಕೂ ಅವರು ಚಾಲನೆ ನೀಡಿದರು. ಒಂಬತ್ತು ದಿನಗಳ ಕಾಲ ನಡೆಯಲಿರುವ ಅಭಿಯಾನವನ್ನು ರಾಜ್ಯದ ಐದು ಕಡೆಗಳಲ್ಲಿ ಏಕಕಾಲದಲ್ಲಿ ಆರಂಭಿಸಲಾಯಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೨. ಬಿಜೆಪಿಯವರೇ ನಳಿನ್ ಅವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್
ನಳಿನ್ ಕುಮಾರ್ ಕಟೀಲ್ ಅವರು ನಮ್ಮ ಬಗ್ಗೆ ಏನು ಹೇಳೋದು.. ಅವರನ್ನೇ ಅವರ ಪಕ್ಷದವರು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ: ಹೀಗೆಂದು ಗೇಲಿ ಮಾಡಿದ್ದಾರೆ ಕಾಂಗ್ರೆಸ್ ನಾಯಕ, ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್. ಕಾಂಗ್ರೆಸ್‌ನವರು ಸಭೆ ಮಾಡಿದ್ರೆ ಜನರ ಕಾಲಲ್ಲಿರುವ ಚಪ್ಪಲಿ ಕೈಗೆ ಬರುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೩. 500 ಕೋಟಿ ರೂ. ಆಫರ್ ಗೊತ್ತಿಲ್ಲ; ನಾನವನಲ್ಲ, ನಾನವನಲ್ಲ, ನಾನವನಲ್ಲ ಎಂದ ಜಮೀರ್ ರಾಜ್ಯ
ವಿಧಾನಸಭಾ ಚುನಾವಣೆಯಲ್ಲಿ (Karnataka Election) ಕಾಂಗ್ರೆಸ್‌ನ್ನು ಸೋಲಿಸಲು ಕರ್ನಾಟಕದ ಒಬ್ಬ ನಾಯಕರಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ೫೦೦ ಕೋಟಿ ರೂ. ಆಫರ್ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಸಂಶಯದ ಮೊನೆಯಲ್ಲಿ ಕುಳಿತಿರುವ ಮಾಜಿ ಸಚಿವ, ಕಾಂಗ್ರೆಸ್ ಧುರೀಣ ಜಮೀರ್ ಅಹಮದ್ ಖಾನ್ ಅವರದ್ದು ಒಂದೇ ಮಾತು: ನಾನವನಲ್ಲ, ನಾನವನಲ್ಲ, ನಾನವನಲ್ಲ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೪. ಮೋದಿ ಸಾಕ್ಷ್ಯಚಿತ್ರ: ಲಿಂಕ್, ಪೋಸ್ಟ್, ವಿಡಿಯೊ ಡಿಲೀಟ್ ಮಾಡಲು ಜಾಲತಾಣಗಳಿಗೆ ಕೇಂದ್ರ ಆದೇಶ
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಆಕ್ಷೇಪಾರ್ಹವಾಗಿ ಚಿತ್ರಿಸಿದ ಇಂಡಿಯಾ: ದಿ ಮೋದಿ ಕ್ವಶ್ಚನ್ (India: The Modi Question) ಬಗ್ಗೆ ಬ್ರಿಟನ್‌ನಲ್ಲಿಯೇ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಡಾಕ್ಯುಮೆಂಟರಿ ಕುರಿತ ಎಲ್ಲ ಲಿಂಕ್, ಪೋಸ್ಟ್ ಹಾಗೂ ವಿಡಿಯೊಗಳನ್ನು ಡಿಲೀಟ್ ಮಾಡಬೇಕು ಎಂದು ಟ್ವಿಟರ್ ಹಾಗೂ ಯುಟ್ಯೂಬ್‌ಗೆ ಆದೇಶಿಸಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ಸುದ್ದಿ | BBC Documentary On Modi | ಭಾರತೀಯ ಮುಸ್ಲಿಮರು ಭೂತಕಾಲದಿಂದ ಮುಂದೆ ಸಾಗಿದ್ದಾರೆ, ಬಿಬಿಸಿ ಅಲ್ಲೇ ಇದೆ: ಅಲಿಗಢ ಮುಸ್ಲಿಂ ವಿವಿ ಉಪಕುಲಪತಿ
೫. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 20 ಆರೋಪಿಗಳ ವಿರುದ್ಧ ಎನ್ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಏನಿದೆ?
ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಐಎ ಅಧಿಕಾರಿಗಳು 20 ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರವೀಣ್ ನೆಟ್ಟಾರು ಅವರನ್ನು ಕೊಂದಿದ್ದು ಪಿಎಫ್ಐ ಸದಸ್ಯರೇ ಎಂಬುದು ಸಾಬೀತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೬. ವಿಸ್ತಾರ ಅಂಕಣ| ರಾಜಕಾರಣಿಗಳು ನಮಗೆ ಹೇಳುತ್ತಿರುವ ʻಅಭಿವೃದ್ಧಿʼ, ನಿಜವಾಗಿಯೂ ಸಮಾಜದ ʻಅಧೋಗತಿʼ
ಅಭಿವೃದ್ಧಿ ಎಂದರೆ ಕಟ್ಟಡ ನಿರ್ಮಾಣ, ರಸ್ತೆ ಅಗಲ ಮಾಡುವುದು, ಮರಗಳನ್ನು ಕಡಿದು ಬಣ್ಣ ಬಣ್ಣದ ಲೈಟ್ ಹಾಕುವುದು…ಇಂತಹದ್ದೇ? ಅಥವಾ ನಾವೂ ಬದುಕಿ ಮುಂದಿನ ಪೀಳಿಗೆಯೂ ಬದುಕುವಂತೆ ಮಾಡುವುದು ಅಭಿವೃದ್ಧಿಯೇ? ನಿಜವಾದ ಅಭಿವೃದ್ಧಿಯ ನಾನಾ ಮುಖಗಳನ್ನು ತೆರೆದಿಟ್ಟಿದ್ದಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.
೭. ವಾರದ ವ್ಯಕ್ತಿಚಿತ್ರ | ಅಧಿಕಾರ ಸಾಕೆಂದ ಜೆಸಿಂಡಾ ಆಡರ್ನ್, ಮಾಡರ್ನ್ ಜಗತ್ತಿನ ಅಪರೂಪದ ಲೀಡರ್!
ಎರಡು ಅವಧಿಗೆ ನ್ಯೂಜಿಲ್ಯಾಂಡ್ ಮುನ್ನಡೆಸಿದ, ಜಾಗತಿಕ ಮನ್ನಣೆ ಗಳಿಸಿದ ನಾಯಕಿ ಜೆಸಿಂಡಾ ಆರ್ಡೆರ್ನ್ ಅವರು, ಅಧಿಕಾರ ಸಾಕೆಂದ ಪ್ರಧಾನಿ ಹುದ್ದೆಯನ್ನು ತೊರೆದಿದ್ದಾರೆ. ಆ ಮೂಲಕ ರಾಜಕಾರಣದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಈ ಮಹಾ ನಾಯಕಿಯ ಬದುಕಿನ ಚಿತ್ರಣ ಇಲ್ಲಿದೆ ವಾರದ ವ್ಯಕ್ತಿಚಿತ್ರದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
೮. ರಾಯ್‌ಪುರದಲ್ಲಿ ಟೀಮ್ ಇಂಡಿಯಾದ ರಾಜ್ಯಭಾರ; ಕಿವೀಸ್ ವಿರುದ್ಧ 8 ವಿಕೆಟ್ ಗೆಲುವು
ಟೀಮ್ ಇಂಡಿಯಾ(IND VS NZ) ವೇಗಿಗಳ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲ್ಯಾಂಡ್ 8 ವಿಕೆಟ್ಗಳ ಸೋಲು ಕಂಡಿದೆ. ಭಾರತ ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ: ಫೆಬ್ರವರಿ 21ರಂದು ರಾಜ್ಯಾದ್ಯಂತ ಸರ್ಕಾರದಿಂದ ದಾಸೋಹ ದಿನ: ಸಿಎಂ
ಫೆಬ್ರವರಿ ೨೧ರಂದು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಅಧಿಕೃತವಾಗಿ ದಾಸೋಹ ದಿನವನ್ನು ಆಚರಣೆ ಮಾಡುತ್ತೇವೆ. ಇದನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಿಸುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ 4ನೇ ವರ್ಷದ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಇನ್ನಷ್ಟು ಆಸ್ಪತ್ರೆಗೆ ಹಬ್ಬಿದ ಡ್ರಗ್ಸ್ ಜಾಲ: ಇಬ್ಬರು ವೈದ್ಯರು, 7 ವೈದ್ಯ ವಿದ್ಯಾರ್ಥಿಗಳ ಬಂಧನ
ಕರಾವಳಿಯ ವೈದ್ಯಕೀಯ ಲೋಕವನ್ನು ಆಕ್ರಮಿಸಿಕೊಂಡಿರುವ ಡ್ರಗ್ಸ್ ಜಾಲದ ಇನ್ನಷ್ಟು ಭಯಾನಕ ಚಿತ್ರಗಳು ಹೊರಬರುತ್ತಿವೆ. ಮಂಗಳೂರು ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳನ್ನು ಗಾಂಜಾ ಸೇವನೆ ಮತ್ತು ಮಾರಾಟದ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿತ್ತು. ಇದೀಗ ಇನ್ನೂ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ವೈದ್ಯರು ಮತ್ತು ಏಳು ಮಂದಿ ವೈದ್ಯ ವಿದ್ಯಾರ್ಥಿಗಳು ಸೇರಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
1. Exam Warriors Book: ಮೋದಿ ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕ ಕನ್ನಡ ಸೇರಿ 13 ಭಾಷೆಯಲ್ಲಿ ಲಭ್ಯ
2. Kantara Movie | ಜೂನ್‌ನಲ್ಲಿ ಕಾಂತಾರ-2 ಪ್ರಿಕ್ವೆಲ್ ಚಿತ್ರೀಕರಣ: ವಿಜಯ್ ಕಿರಗಂದೂರು
3. ಛತ್ತೀಸ್ಗಢದಲ್ಲಿ ಅರಣ್ಯದಲ್ಲಿ ಗುಂಡಿ ತೋಡುತ್ತಿದ್ದಾಗಲೇ ಸಿಕ್ಕಿಬಿದ್ದ ನಕ್ಸಲರು, 6 ಮಂದಿ ಅರೆಸ್ಟ್
೪. ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದ ಬ್ರಿಟನ್ ಪ್ರಧಾನಿ ರಿಷಿಗೆ ದಂಡ!
೫. Motivational story | ಮನುಷ್ಯನ ತಲೆಯನ್ನು ಮಾರಾಟಕ್ಕಿಟ್ಟರೂ ಯಾರೂ ಕೊಳ್ಳುವುದಿಲ್ಲ, ಅದಕ್ಕೆ ಬೆಲೆಯೇ ಇಲ್ಲ.. ಹಾಗಿರುವಾಗ!