Site icon Vistara News

Vistara Top 10 News : ಲಂಚ ಆರೋಪ ಸಿಐಡಿ ತನಿಖೆಗೆ, ಡಿಕೆಶಿ ವಿರುದ್ಧ ಕಮಿಷನ್ ದೂರು ಇತ್ಯಾದಿ ಪ್ರಮುಖ ಸುದ್ದಿಗಳಿವು

top 10 news

1. Minister Chaluvarayaswamy : ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚ ಆರೋಪ; ಸಿಐಡಿ ತನಿಖೆಗೆ ನಿರ್ಧಾರ
ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು (Agriculture department officers) ನೇರವಾಗಿ ರಾಜ್ಯಪಾಲರಿಗೇ ದೂರು (Complaint to Governor) ನೀಡಿದ್ದಾರೆನ್ನಲಾದ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

2. BBMP Bill Payment : ರಾಜ್ಯಪಾಲರ ಅಂಗಳಕ್ಕೆ ಬಿಬಿಎಂಪಿ ಬಿಲ್‌ ಗಲಾಟೆ; ಡಿಕೆಶಿ ವಿರುದ್ಧ ಕಮಿಷನ್ ದೂರು!
ಬೆಂಗಳೂರು: ಬಿಬಿಎಂಪಿ ಕಾಮಗಾರಿಗಳ ಬಿಲ್‌ (BBMP Bill Payment) ಬಾಕಿ ಸಮಸ್ಯೆ ಈಗ ರಾಜ್ಯಪಾಲರ (Karnataka Governor) ಅಂಗಳ ತಲುಪಿದೆ. ಸೋಮವಾರವಷ್ಟೇ ಬಿಬಿಎಂಪಿ ಗುತ್ತಿಗೆದಾರರ ಸಂಘದವರು (BBMP Contractors Association) ಸುದ್ದಿಗೋಷ್ಠಿ ನಡೆಸಿ ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ (BBMP Commissioner Tushar Girinath) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಬೇಕೆಂದೇ ತಡೆಹಿಡಿದಿದ್ದು, ಕಮಿಷನ್‌ ಕೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್‌, ಡೋಂಟ್‌ ಕೇರ್‌ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. Basavaraja Bommai : ಅಮಿತ್‌ ಶಾ ಭೇಟಿಯಾದ ಬಸವರಾಜ ಬೊಮ್ಮಾಯಿ; ವಿರೋಧ ಪಕ್ಷ ನಾಯಕ ಸ್ಥಾನ ಫಿಕ್ಸಾ?
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ಮಂಗಳವಾರ ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ (Home Minister Amit shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸೋಮವಾರವೇ ದಿಲ್ಲಿಗೆ ಆಗಮಿಸಿದ್ದ ಅವರು ಪೂರ್ವ ನಿಯೋಜಿತವಾದಂತೆ ಅಮಿತ್‌ ಶಾ ಅವರನ್ನು (Bommai Meets Amit Shah) ಭೇಟಿಯಾದರು. ಸುಮಾರು ಹೊತ್ತು ಅವರಿಬ್ಬರೂ ಖಾಸಗಿಯಾಗಿ ಮಾತುಕತೆ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

4. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಅಧಿಕಾರಿಗಳಿಗೆ ಟಾಸ್ಕ್‌; ತಲಾ 2000 ಮಹಿಳೆಯರನ್ನು ಕರೆತರಲು ಆದೇಶ
ಬೆಂಗಳೂರು: ಕಾಂಗ್ರೆಸ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಮಿತ್ರ ಪಕ್ಷಗಳ ಒಕ್ಕೂಟದ (Opposition Parties meet) ಸಭೆಗೆ ರಾಜಕಾರಣಿಗಳನ್ನು ಸ್ವಾಗತಿಸಿ ಆತಿಥ್ಯ (Hospitality) ನೀಡುವ ಕೆಲಸಕ್ಕೆ ಐಎಎಸ್‌ ಅಧಿಕಾರಿಗಳನ್ನು (IAS officer) ಬಳಸಿಕೊಂಡಿದ್ದ ಸರ್ಕಾರ, ಇದೀಗ ಮತ್ತೊಂದು ಎಡವಟ್ಟು ಮಾಡಲು ಹೊರಟಿದೆ. ಸರ್ಕಾರದ ಆ ಒಂದು ಆದೇಶವನ್ನು ಗಮನಿಸಿದರೆ ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ (Goverments work is Gods work) ಅನ್ನೋ ಮಾತಿನ ಬದಲು ಸರ್ಕಾರಿ ಕೆಲಸ ಅಂದರೆ ಸರ್ಕಾರ ಹೇಳಿದ ಕೆಲಸ ಮಾಡಬೇಕು ಅನ್ನುವ ಹಾಗಾಗಿದೆ. ಇದೀಗ ಬೆಳಗಾವಿಯಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಉದ್ಘಾಟನಾ ಕಾರ್ಯಕ್ರಮದ ದಿನ ವಾರ್ಡ್‌ವಾರು ಮಹಿಳಾ ಸಮಾವೇಶ (womens meet ನಡೆಸುವ ಟಾಸ್ಕ್‌ನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

5. Shakti Scheme : ಮಹಿಳಾ ಪ್ರಯಾಣಿಕರ ನಿಂದಿಸಿದರೆ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್!
ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ನೀಡುವ ರಾಜ್ಯಗಳಲ್ಲಿ ಮೊದಲಿಗೆ ನಿಲ್ಲುವುದು ಕರ್ನಾಟಕ. ಅದರಲ್ಲೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಲ್ಲೊಂದಾದ (Congress Guarantee Scheme) ಶಕ್ತಿ ಯೋಜನೆ (Shakti Scheme) ಬಂದಾಗಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಪ್ರಯಾಣಕ್ಕೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ನಿತ್ಯವೂ ಲಕ್ಷಾಂತರ ಮಹಿಳೆಯರು ಉಚಿತ ಸೇವೆ ಪಡೆಯುತ್ತಿದ್ದು, ಸೀಟ್‌ಗಾಗಿ ಜಗಳವು ಸಾಮಾನ್ಯವಾಗಿದೆ.‌‌ ಈ ನಡುವೆ ಸಾರಿಗೆ ಸಚಿವರು ಹೊಸದೊಂದು ಆದೇಶ ಹೊರಡಿಸಿದ್ದು, ಮಹಿಳಾ ಪ್ರಯಾಣಿಕರನ್ನು ನಿಂದನೆ ಮಾಡಿದರೆ ಅಂತಹ ಚಾಲಕ, ನಿರ್ವಾಹಕರನ್ನು ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

6. no confidence motion: ‘ಅವಿಶ್ವಾಸ’ಕ್ಕೆ ನಿಮಗೆ ಪಶ್ಚಾತ್ತಾಪವಾಗಲಿದೆ ಎಂದ ರಿಜಿಜು! ಕೇಂದ್ರ ಸರ್ಕಾರಕ್ಕೆ ‘ಇಂಡಿಯಾ’ ತಿರುಗೇಟು

7. Chandrayaan 3: ಚಂದ್ರಯಾನಕ್ಕೆ ಪ್ರತಿಸ್ಪರ್ಧಿ ರಷ್ಯಾದ ಲೂನಾ 25! ಚಂದ್ರನನ್ನುಮೊದಲು ಚುಂಬಿಸುವವರಾರು?

8. Weather Report : ನಾಳೆಯಿಂದ ಈ 16 ಜಿಲ್ಲೆಗಳಲ್ಲಿ ಧಾರಾಕಾರ ಮಳೆ

9.Spandana Vijay Raghavendra: ಬೆಂಗಳೂರು ತಲುಪಿದ ಸ್ಪಂದನಾ ಪಾರ್ಥಿವ ಶರೀರ

10. Viral Video : ಆಗಸದಲ್ಲಿ ಹಾರುವ ಮಹಿಳೆ! ಭಯವೇ ಇಲ್ಲದ ಇವರ ನೆಗೆತ ನೋಡಿ…

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ


Exit mobile version