Site icon Vistara News

Vistara Top 10 News : ಹಾಲಿನ ದರ ಏರಿಕೆ ಫಿಕ್ಸ್​, ‘ಇಂಡಿಯಾ’ದಲ್ಲಿ ಬಿಕ್ಕಟ್ಟು ಇತ್ಯಾದಿ ಪ್ರಮುಖ ಸುದ್ದಿಗಳು

Vistara top 10 news

1. ಹಾಲಿನ ದರ ಏರಿಕೆ ಫಿಕ್ಸ್‌, ಚರ್ಚೆಯಾಗದ ಕೆಜಿ ಹಳ್ಳಿ ಗಲಭೆಯ ತನ್ವೀರ್‌ ಸೇಠ್‌ ಪತ್ರ
ಕೆಎಂಎಫ್‌ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ (Nandini Milk Price hike) ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದ್ದು, ಆಗಸ್ಟ್ 1ರಿಂದ ನೂತನ ದರ ಜಾರಿಗೆ ಬರಲಿದೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ (Siddaramaiah Cabinet) ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದಲ್ಲದೆ, ಬಹು ಕುತೂಹಲಕ್ಕೆ ಕಾರಣವಾಗಿದ್ದ “ಶಾಸಕರ ಅಸಮಾಧಾನ”, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವ ಪ್ರಸ್ತಾಪ ಚರ್ಚೆಗೆ ಬಂದಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

2. ಗೃಹಲಕ್ಷ್ಮಿ ನೋಂದಣಿ ಮತ್ತಷ್ಟು ಸರಳ; ಮೆಸೇಜ್‌ ಮಾಡ್ಬೇಕಾಗಿಲ್ಲ, ಡೈರೆಕ್ಟ್‌ ಹೋಗಿ!
ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆ (Gruha lakshmi scheme)ಯ ನೋಂದಣಿ ಭರ್ಜರಿ ಯಶಸ್ಸು ಪಡೆಯುತ್ತಿದೆ. ಸರ್ಕಾರದ ಲೆಕ್ಕಾಚಾರದ ಪ್ರಕಾರ ನೋಂದಣಿಯಾಗಬೇಕಾದ ಒಟ್ಟು ಯಜಮಾನಿಯರ ಸಂಖ್ಯೆ 1.28 ಕೋಟಿ. ಕಳೆದ ಜುಲೈ 20ರಿಂದ ಆರಂಭಗೊಂಡ ನೋಂದಣಿಯಲ್ಲಿ (Gruha lakshmi Registration) ಕೇವಲ ಏಳು ದಿನದಲ್ಲಿ 62,01,530 ಮಂದಿಯ ನೋಂದಣಿ ಆಗಿದೆ. ಅಷ್ಟಾದರೂ ಕೆಲವೊಂದು ಸಣ್ಣಪುಟ್ಟ ಸಮಸ್ಯೆ ಇದೆ ಎಂಬ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಸೂಚಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

3.ಪ್ರತಿಪಕ್ಷಗಳ ಅಭಿಪ್ರಾಯ ಕೇಳದೆ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ? ‘ಇಂಡಿಯಾ’ದಲ್ಲಿ ಬಿಕ್ಕಟ್ಟು
2024ರ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಒಗ್ಗೂಡಿವೆ. ಅದರಲ್ಲೂ, ‘ಇಂಡಿಯಾ’ ಮೈತ್ರಿಕೂಟ ರಚಿಸಿ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನ ಮಾಡುತ್ತಿವೆ. ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಒಕ್ಕೂಟದಲ್ಲಿ ಬಿರುಕು ಮೂಡಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಅದರಲ್ಲೂ, ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳನ್ನು ಕೇಳದೆಯೇ ತರಾತುರಿಯಲ್ಲಿ ಕಾಂಗ್ರೆಸ್‌ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ (No Confidence Motion) ಮಂಡಿಸಲು ಮುಂದಾಯಿತೆ ಎಂಬ ಪ್ರಶ್ನೆ, ಗೊಂದಲಗಳು ಮೂಡಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : ಕರಪ್ಷನ್ ಕ್ವಿಟ್ ಇಂಡಿಯಾ; ಪಿಎಂ! ಮೋದಿ ಆರೆಸ್ಸೆಸ್ ಪ್ರಧಾನಿ ಎಂದ ರಾಹುಲ್ ಗಾಂಧಿ

5. ಶಾಸಕರ ಪತ್ರಕ್ಕೆ ಸಚಿವರು ಗರಂ; ಸಿಎಂ ಸಿದ್ದರಾಮಯ್ಯ ಕ್ಲಾಸ್!

6. Karnataka Politics : ಬಿಎಸ್‌ವೈ-ಎಚ್‌ಡಿಕೆ ಟೂರ್‌; ಯುರೋಪ್‌ನಲ್ಲಿ ಕರ್ನಾಟಕ ಪಾಲಿಟಿಕ್ಸ್!

7. ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ ಇರಲಿಲ್ಲ, ಹರಿದಾಡುತ್ತಿರುವ ವಿಡಿಯೊ ಫೇಕ್‌; ಖುಷ್ಬೂ ರಿಪೋರ್ಟ್‌

8. ಬಿಗ್‌ ಬಾಸ್‌ ಶೋಗೆ ಶೀಘ್ರವೇ ಸೆನ್ಸಾರ್‌ ಕಣ್ಗಾವಲು? ಕೇಂದ್ರ, ರಾಜ್ಯ, ಚಾನೆಲ್‌ಗಳಿಗೆ ಕೋರ್ಟ್‌ ನೋಟಿಸ್‌

9. ಮಾತುಕತೆಯ ಮೇಜಿಗೆ ಬಂದ ಮೈತಿ, ಕುಕಿ ಸಂಘಟನೆಗಳು

10. ಬ್ರಾ ಏಕೆ ಏಕವಚನ, ಪ್ಯಾಂಟೀಸ್‌ ಏಕೆ ಬಹುವಚನ ಎಂದು ಕೇಳಿದ ಬಚ್ಚನ್‌ಗೆ ನೆಟ್ಟಿಗರ ಕ್ಲಾಸ್‌
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version