1. ಪ್ರಧಾನಿ ಮೋದಿ ಸಂದರ್ಶನ: ಜಿ20 ಶೃಂಗದಿಂದ ಸಕಾರಾತ್ಮಕ ಪರಿಣಾಮ, 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ
ನವದೆಹಲಿ: ಮುಂದಿನ ವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಭಾರತವು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವಿಷಯಗಳ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ. ”ಭಾರತವು 20247ರ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ(India Developed Nation). ಭ್ರಷ್ಟಾಚಾರ (Corruption), ಜಾತೀಯತೆ (Casteism) ಮತ್ತು ಕೋಮುವಾದಕ್ಕೆ (Communalism) ದೇಶದಲ್ಲಿ ಜಾಗವಿಲ್ಲ,” ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದ್ದಾರೆ. ಜಿ20 ಶೃಂಗಸಭೆಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿ, ”ಜಾಗತಿಕ ಕಾರ್ಯಕ್ರಮದ ಭಾರತದ ಅಧ್ಯಕ್ಷತೆಯಿಂದ ಹಲವಾರು ಪರಿಣಾಮಗಳು “ಅವರ ಹೃದಯಕ್ಕೆ ಹತ್ತಿರವಾಗಿವೆ” ಎಂದು ಹೇಳಿದರು. ”ಭಾರತದ ಜಿ20 ಅಧ್ಯಕ್ಷತೆಯಿಂದ ಸಾಕಾಷ್ಟು ಸಕಾರಾತ್ಮಕ ಪರಿಣಾಮಗಳಾಗಿವೆ. ಈ ಪೈಕಿ ಕೆಲವು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಎಸ್‌ಟಿ ಸೋಮಶೇಖರ್, ಭೈರತಿ ಬಸವರಾಜ್‌ಗೆ ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್!
ಬೆಂಗಳೂರು: ಹಾಲಿ ಶಾಸಕರು, ಮಾಜಿ ಸಚಿವರಾದ ಎಸ್.ಟಿ. ಸೋಮಶೇಖರ್ (ST Somashekhar) ಅವರಾಗಲೀ, ಭೈರತಿ ಬಸವರಾಜ್ (Byrathi Basavaraj) ಅವರಾಗಲೀ ಕಾಂಗ್ರೆಸ್ ಕಡೆ ಹೋಗಲು ಉತ್ಸುಕರಾಗಿಲ್ಲ. ಕಾಂಗ್ರೆಸ್‌ನವರು ಬ್ಲ್ಯಾಕ್‌ಮೇಲ್ (Congress blackmail) ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ಮಲ್ಲೇಶ್ವರ ಶಾಸಕ, ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayan) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಕ್ಲಿಕ್ ಮಾಡಿ.
ಇದನ್ನೂ ಓದಿ: Power Point with HPK : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 1 ಸ್ಥಾನ ಗೆಲ್ಲಲಿ: ಅಶ್ವತ್ಥನಾರಾಯಣ ಸವಾಲು!
3. ಬಿಜೆಪಿಯಲ್ಲಿ ಮೊಳಗಿದ ಬಿಎಸ್‌ವೈ ನಾಯಕತ್ವ; ಲಿಂಗಾಯತ ಕಡೆಗಣನೆ ಕೂಗು!
ಕಳೆದ ವಿಧಾನಸಭಾ ಚುನಾವಣೆ (Assembly election) ಬಳಿಕ ಬಿಜೆಪಿಯಲ್ಲಿ ಅಂತಹ ಉತ್ಸಾಹ ಏನೂ ಕಾಣುತ್ತಿಲ್ಲ. ಜತೆಗೆ ಸೂಕ್ತ ನಾಯಕನೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ (Leader of the Opposition) ಸ್ಥಾನಕ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ (BJP state president) ಸ್ಥಾನಕ್ಕೆ ಇನ್ನೂ ನೂತನ ಸಾರಥಿಯನ್ನು ಆಯ್ಕೆ ಮಾಡಿಲ್ಲ. ಇದು ಪಕ್ಷದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜತೆಗೆ ಆಪರೇಷನ್ ಹಸ್ತ (Operation Hasta) ಭೀತಿಯೂ ಎದುರಾಗಿದೆ. ಈ ಎಲ್ಲ ರಾಜಕೀಯ ಬೆಳವಣಿಗೆ ಮಧ್ಯೆ ಮತ್ತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ನಾಯಕತ್ವದ ಕೂಗು ಕೇಳಿ ಬಂದಿದೆ. ಜತೆಗೆ ಲಿಂಗಾಯತರನ್ನು ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣವಾಗಿದೆ. ಮುಂದಿನ ಲೋಕಸಭೆ ಚುನಾವಣೆಯೊಳಗೆ (Lok Sabha Election 2024) ಇದನ್ನು ಸರಿಪಡಿಸಿಕೊಳ್ಳಬೇಕು ಎಂಬ ಎಚ್ಚರಿಕೆ ಸಂದೇಶವನ್ನು ಬಹಿರಂಗವಾಗಿ ಇಬ್ಬರು ನಾಯಕರು ನೀಡಿದ್ದಾರೆ. ಈಗ ಪಕ್ಷದ ನಿರ್ಧಾರದ ಬಗ್ಗೆ ಮಾಜಿ ಶಾಸಕ ರಾಜು ಗೌಡ (Former MLA Raju Gowda) ಹಾಗೂ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ (MLC Pradeep Shettar) ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಮೂಲಕ ಬಿಜೆಪಿ ರಾಜಕೀಯದ (BJP Politics) ಆಂತರಿಕ ಅಸಮಾಧಾನ ಹೊರ ಬರುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಮೊದಲ ಕಕ್ಷೆ ಬದಲಿಸಿ ಯಶಸ್ವಿಯಾಗಿ ಮುನ್ನುಗ್ಗಿದ ಆದಿತ್ಯ ಎಲ್ 1; ಇಸ್ರೋ ಸಂತಸ
ಬೆಂಗಳೂರು: ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಇಸ್ರೋ ಕೈಗೊಂಡಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಉಡಾವಣೆಯಾದ ಒಂದು ದಿನದಲ್ಲೇ ಮಹತ್ವದ ಮುನ್ನಡೆ ಸಾಧಿಸಿದೆ. ಭಾನುವಾರ ಆದಿತ್ಯ ಎಲ್ 1 ಮಿಷನ್ ಯಶಸ್ವಿಯಾಗಿ ಮೊದಲ ಕಕ್ಷೆಯನ್ನು ಬದಲಾಯಿಸಿದ್ದು (Burn Or Manoeuvre, ಸೂರ್ಯನತ್ತ ಮುನ್ನುಗ್ಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಭಾರತ- ನೇಪಾಳ ಪಂದ್ಯಕ್ಕೂ ಮಳೆ ಬರುವುದೇ? ಹಾಗಾದ್ರೆ ಭಾರತ ಪ್ಲೇಆಫ್ ಅವಕಾಶವೇನು?
ಕ್ಯಾಂಡಿ: ಭಾರತ ಹಾಗೂ ನೇಪಾಳ ನಡುವಿನ ಏಷ್ಯಾ ಕಪ್ ಲೀಗ್ ಹಂತದ ಪಂದ್ಯ ಸೋಮವಾರ (ಸೆಪ್ಟೆಂಬರ್4ರಂದು) ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೂ ಇದೇ ಸ್ಟೇಡಿಯಮ್ನಲ್ಲಿ ನಡೆದಿತ್ತು. ಆದರೆ ಆ ಪಂದ್ಯವು ಒಂದು ಇನಿಂಗ್ಸ್ ಮುಕ್ತಾಯಗೊಂಡ ತಕ್ಷಣ ಮಳೆಯಿಂದಾಗಿ ಟೈ ಆಗಿತ್ತು. ಇತ್ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳುವ ಅನಿವಾರ್ಯತೆ ಎದುರಿಸಿದವು. ಹೀಗಾಗಿ ಸೋಮವಾರ ಪಂದ್ಯಕ್ಕೂ ಮಳೆ ಅಡಚಣೆ ಮಾಡಬಹುದೇ ಎಂಬ ಅನುಮಾನ ಕ್ರಿಕೆಟ್ ಅಭಿಮಾನಿಗಳಿಗೆ ಉಂಟಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ ; ಕೆ. ಎಲ್ ರಾಹುಲ್ ಫಿಟ್ನೆಸ್ ಕುರಿತ ಲೇಟೆಸ್ಟ್ ಅಪ್ಡೇಟ್ ಬಹಿರಂಗ
6. ಬೆಸ್ಕಾಂನಿಂದ ಗ್ರಾಹಕರಿಗೆ ಬಿಗ್ ಶಾಕ್; ವಿದ್ಯುತ್ ದರ ದಿಢೀರ್ ಯುನಿಟ್‌ಗೆ 64 ಪೈಸೆ ಹೆಚ್ಚಳ
7. ಸೆ.4ರಂದು ಬೆಂಗಳೂರು ಸೇರಿ ಉತ್ತರ ಒಳನಾಡಲ್ಲಿ ಜೋರು ಮಳೆ
8. Sunday Read: ಹೊಸ ಪುಸ್ತಕ: ಎಡಬಲಗಳ ಸುತ್ತಮುತ್ತ: ಮಾತಿನ ಧೂಳು
9. ಸನಾತನ ಧರ್ಮ ಕೊರೊನಾ ಇದ್ದಂತೆ ಎಂದ ಉದಯನಿಧಿ ಸ್ಟಾಲಿನ್; ಭುಗಿಲೆದ್ದ ವಿವಾದ
10. ಬಸ್ ಸೀಟ್ ಹಿಡಿಯೋಕೆ ಬೆನ್ನ ಮೇಲೆ ಹತ್ತಿ ವಿಂಡೋ ಒಳಗೆ ಜಿಗಿದಳು!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.