1. ಸನಾತನ ಧರ್ಮ ವಿವಾದಕ್ಕೆ ಮೋದಿ ಎಂಟ್ರಿ, ‘ಸೂಕ್ತ ಉತ್ತರ ನೀಡಿ’ ಎಂದ ಪ್ರಧಾನಿ
ನವದೆಹಲಿ: ಸನಾತನ ಧರ್ಮ (Santana Dharma Remark Row)ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇದೇ ಮೊದಲ ಬಾರಿಗೆ ಮಾತನಾಡಿದ್ದು, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Tamil Nadu Minister Udhayanidhi Stalin) ಅವರ ಹೇಳಿಕೆಗೆ ಸೂಕ್ತ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಹೊಸ ಸಂಸತ್ತಿನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Rashtrapati Draupadi Murmu) ಅವರಿಗೆ ಆಹ್ವಾನವನ್ನು ಕೇಂದ್ರ ಸರ್ಕಾರ (Central Government) ಕೈಬಿಟ್ಟಿರುವುದು ಸನಾತನ ಧರ್ಮದ ಸಾಧಕರ ತಾರತಮ್ಯಕ್ಕೆ ಉದಾಹರಣೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ ಒಂದು ದಿನದ ಬಳಿಕ, ಮೋದಿಯಿಂದ ಪ್ರತಿಕ್ರಿಯೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಯೋಗಿ ರಾಜ್ಯ ಉತ್ತರ ಪ್ರದೇಶದಲ್ಲಿ ಉದಯನಿಧಿ, ಪ್ರಿಯಾಂಕ್ ಖರ್ಗೆ ವಿರುದ್ಧ ಬಿತ್ತು ಕೇಸ್!
‘ಭಾರತ’ ಹೆಸರಿನ ಬಗ್ಗೆ 1949ರಲ್ಲೇ ಭಾರಿ ಚರ್ಚೆ; ಅಂಬೇಡ್ಕರ್ ಅಭಿಪ್ರಾಯ ಏನಿತ್ತು?
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
2. ಕಾವೇರಿ ಜಲ ವಿವಾದ; ಸುಪ್ರೀಂಕೋರ್ಟ್ ವಿಚಾರಣೆ ಸೆ. 21ಕ್ಕೆ ಮುಂದೂಡಿಕೆ
ನವ ದೆಹಲಿ: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಬುಧವಾರಕ್ಕೆ (ಸೆಪ್ಟೆಂಬರ್ 6) ನಿಗದಿಯಾಗಿದ್ದ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಲಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
3. ಸ್ವಂತಕ್ಕೆ ಸತ್ರೆ ರೈತರ ಆತ್ಮಹತ್ಯೆ ಹೇಗಾಗ್ತದೆ?; ಶಿವಾನಂದ ಪಾಟೀಲ್‌ಗೆ ದನಿಗೂಡಿಸಿದ ಡಿ.ಕೆ. ಶಿವಕುಮಾರ್
ಬೆಂಗಳೂರು: ಪ್ರೀತಿಯಲ್ಲಿ ಸಿಲುಕಿ ಆತ್ಮಹತ್ಯೆ (suicide due to love Failure) ಮಾಡಿಕೊಂಡವರು, ಮದ್ಯಪಾನ ಮಾಡಿ ಮೃತಪಟ್ಟವರನ್ನೂ ರೈತರ ಆತ್ಮಹತ್ಯೆ ಪಟ್ಟಿಗೆ ಸೇರಿಸಲಾಗುತ್ತದೆ ಎಂಬ ಕೃಷಿ ಮಾರುಕಟ್ಟೆ ಸಚಿವ (Agriculture Marketing Minister) ಶಿವಾನಂದ ಪಾಟೀಲ್ (Shivananda Pateel) ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದ ಬೆನ್ನಿಗೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಕೂಡಾ ಇದೇ ರೀತಿಯ ಹೇಳಿಕೆಯನ್ನು ನೀಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
4. ರಾಜ್ಯ ಶಾಲಾ ಶಿಕ್ಷಕರ ವೇತನ ಡಬಲ್; 7ನೇ ವೇತನ ಆಯೋಗಕ್ಕೆ 29 ಅಂಶದ ಶಿಫಾರಸು!
ಬೆಂಗಳೂರು: ರಾಜ್ಯ ಶಾಲಾ ಶಿಕ್ಷಕರ ವೇತನವನ್ನು (Teachers Pay Hike) ದುಪ್ಪಟ್ಟು ಮಾಡುವ ಬಗ್ಗೆ 7ನೇ ರಾಜ್ಯ ವೇತನ ಆಯೋಗಕ್ಕೆ (State Pay Commission) ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು (Karnataka State Primary School Teachers Association) ಮನವಿ ಮಾಡಿದೆ. ಈ ಮನವಿಯನ್ನು ವೇತನ ಆಯೋಗವು ಪುರಸ್ಕರಿಸಿದ್ದೇ ಆದರೆ, ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಹಾಲಿ ಪಡೆಯುತ್ತಿರುವ ಆರಂಭಿಕ ವೇತನ ಶ್ರೇಣಿಯಾದ 25800-51400 ರಿಂದ 51600-102800 ರೂಪಾಯಿಗೆ ದ್ವಿಗುಣಗೊಳ್ಳುತ್ತದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
5. ನೂತನ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ; ಈ ಶುಭ ದಿನದಂದು ಶಿಫ್ಟ್
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಿರುವ ನೂತನ ಸಂಸತ್ ಭವನಕ್ಕೆ (New Parliament Building) ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಆದರೆ, ಇದುವರೆಗೆ ಸಂಸತ್ ಕಲಾಪಗಳು ನೂತನ ಸಂಸತ್ ಭವನದಲ್ಲಿ ನಡೆದಿರಲಿಲ್ಲ. ಆದರೀಗ ನೂತನ ಸಂಸತ್ ಭವನದಲ್ಲಿ ಕಲಾಪ (Special Parliament Session) ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗಣೇಶ ಚತುರ್ಥಿಯ (ಸೆಪ್ಟೆಂಬರ್ 19) ಶುಭದಿನದಂದೇ ಹೊಸ ಸಂಸತ್‌ನಲ್ಲಿ ಕಲಾಪ ನಡೆಯಲಿವೆ ಎಂದು ವರದಿಯೊಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಜೋ ಬೈಡೆನ್ ಕೋವಿಡ್ ಮುಕ್ತ, ಗುರುವಾರ ಭಾರತಕ್ಕೆ ಬಂದಿಳಿಯಲಿರುವ ಅಮೆರಿಕ ಅಧ್ಯಕ್ಷ
6. ಕಾಕಂಬಿ ರಫ್ತು; ಬಿಜೆಪಿ ವಿರುದ್ಧ ಹಗರಣದ ಆರೋಪ ಮಾಡಿ ಈಗ ತಾನೇ ಕಳಂಕಕ್ಕೆ ಕೈ ಇಟ್ಟ ಕಾಂಗ್ರೆಸ್!
7. ವಿಸ್ತಾರ ನ್ಯೂಸ್‌ನಲ್ಲಿ ನಿಮ್ಮ ಮನೆಯ ಶ್ರೀಕೃಷ್ಣನ ದರ್ಶನ; ಇಲ್ಲಿದೆ Photo Gallery!
8.ಸೆ.11ಕ್ಕೆ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್ ಪಕ್ಕಾ; ಡೋಂಟ್ ವರಿ ಎಂದ ರಾಮಲಿಂಗಾರೆಡ್ಡಿ
9. ದೇಶದ ಮೊದಲ ಯುಪಿಐ-ಎಟಿಎಂ ಆರಂಭಿಸಿದ ಹಿಟಾಚಿ ಪೇಮೆಂಟ್ ಸರ್ವೀಸ್
10. ಭಾರತ-ಪಾಕ್ ನಡುವಣ ಸೂಪರ್-4 ಪಂದ್ಯಕ್ಕೆ ಮಳೆ ಬಂದರೆ ಮೀಸಲು ದಿನ ಇದೆಯೇ?