Site icon Vistara News

Indira Canteen: ಇಂದಿರಾ ಕ್ಯಾಂಟೀನ್‌ಗೆ ಸುಸ್ವಾಗತ; ಸೋಮವಾರ ಟು ಶನಿವಾರ ತಿಂಡಿ-ತಿನಿಸಿನ ಜರ್ನಿ ಹೀಗಿದೆ!

Indira Canteen menu

ಬೆಂಗಳೂರು: ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್‌ (Indira canteen) ಯೋಜನೆಯು ನಂತರದ ಸರ್ಕಾರದಲ್ಲಿ ಹಳ್ಳ ಹಿಡಿದಿತ್ತು. ಈಗ ಪುನಃ ಅಧಿಕಾರಕ್ಕೆ ಬಂದಿರುವ ಅವರು ಕ್ಯಾಂಟೀನ್‌ ಬಲಪಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಕ್ರಮ ಕೈಗೊಂಡಿದ್ದು, ಮೊದಲ ಹಂತವಾಗಿ ಬೆಂಗಳೂರಿನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟದ ಮೆನು ಬದಲಾವಣೆ ಮಾಡಲಾಗಿದೆ. ಅಲ್ಲದೆ, ವಾರದ ಪ್ರತಿ ದಿನವೂ ತರಹೇವಾರು ಉಪಾಹಾರಗಳು ಬದಲಾಗಲಿವೆ.

ಇಂದಿರಾ ಕ್ಯಾಂಟೀನ್‌ನಲ್ಲಿ ದರ್ಶಿನಿ ಮಾದರಿಯಲ್ಲಿ ಮೆನುವನ್ನು ಸಿದ್ಧಪಡಿಸಲಾಗಿದೆ. ಹಿಂದಿನ ಮೆನುವಿಗಿಂತ ಹಲವು ಬದಲಾವಣೆಯನ್ನು ಬಿಬಿಎಂಪಿ ವತಿಯಿಂದ ಮಾಡಲಾಗಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳ್ಳಲಿದೆ.

ಒಂದೇ ರೀತಿಯ ಮೆನು ಜನರಿಗೂ ಇಷ್ಟವಾಗಲಾರದು. ವಾರದ ಒಂದೊಂದು ದಿನ ಒಂದೊಂದು ರೀತಿಯ ತಿಂಡಿ ಹಾಗೂ ಊಟವನ್ನು ಸಿದ್ಧಪಡಿಸಲು ಸರ್ಕಾರ ಚಿಂತಿಸಿದ್ದು, ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಹಾಗಾದರೆ ಯಾವ ಯಾವ ವಾರ, ಯಾವ ಯಾವ ತಿಂಡಿ, ಊಟ ಎಂಬುದನ್ನು ನೋಡೋಣ.

ಇದನ್ನೂ ಓದಿ: Govt School: ಕಾಸರಗೋಡು ಸರ್ಕಾರಿ ಶಾಲೆಯಲ್ಲಿ ಕನ್ನಡಕ್ಕೆ ಮಲಯಾಳಂ ಶಿಕ್ಷಕಿ ನೇಮಕ; ಕೇರಳ ಕ್ಯಾತೆಗೆ ಸಿಡಿದೆದ್ದ ಕನ್ನಡಿಗರು!

ಇಲ್ಲಿದೆ ಇಂದಿರಾ ಕ್ಯಾಂಟೀನ್ ನ್ಯೂ ಮೆನು!

ಸೋಮವಾರ ಬಂದರೆ ಇವು ನಿಮ್ಮ ಸವಿಗೆ ಲಭ್ಯ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್‌, ರಾಯ್ತ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ ಸೊಪ್ಪು ಸಾರು + ಕೀರ್
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಮಂಗಳವಾರಕ್ಕೆ ಬಂದರೆ ನಿಮಗೆ ಸಿಗಲಿವೆ

ಬೆಳಗ್ಗೆ: ಇಡ್ಲಿ ಚಟ್ನಿ / ಬಿಸಿ ಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ರಾಯ್ತ / ಚಪಾತಿ + ವೆಜ್ ಕರಿ

ಬುಧವಾರದ ಮೆನು ಹೀಗಿದೆ

ಬೆಳಗ್ಗೆ: ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು

ಗುರುವಾರ ಬನ್ನಿ ಪಲಾವ್‌, ಬ್ರೆಡ್‌-ಜಾಮ್‌ ತಿನ್ನಿ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ

ಶುಕ್ರವಾರ ಬಂದರೆ ನಿಮಗೆ ಸಿಗಲಿದೆ ಈ ತಿಂಡಿ-ತಿನಿಸು

ಬೆಳಗ್ಗೆ: ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

ಶನಿವಾರಕ್ಕೆ ಇದೆ ವೆಜ್‌ ಕರಿ

ಬೆಳಗ್ಗೆ: ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ: ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ

ಇದನ್ನೂ ಓದಿ: ಹಲೋ ಸಚಿವರೇ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆ ವಿಸ್ತಾರ ಫೋನ್‌ ಇನ್‌ ಇಂದು; ಕರೆ ಮಾಡಿ ಪ್ರಶ್ನೆ ಕೇಳಿ

ಭಾನುವಾರ ಬನ್ನಿ ಖಾರಾ ಬಾತ್‌ ತಿನ್ನಿ

ಬೆಳಗ್ಗೆ: ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು

Exit mobile version