Site icon Vistara News

Shivarajkumar | ನಿಮಿಷಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌

ಮಂಡ್ಯ ನಿಮಿಷಾಂಬ

ಮಂಡ್ಯ: ಡಾ. ಪುನೀತ್ ರಾಜಕುಮಾರ್‌ಗೆ ಮಂಗಳವಾರ ಕರ್ನಾಟಕ ರತ್ನ ಪ್ರಶಸ್ತಿ ವಿತರಣೆ ಹಿನ್ನೆಲೆಯಲ್ಲಿ ಸಹೋದರ, ನಟ ಡಾ. ಶಿವರಾಜಕುಮಾರ್ (Shivarajkumar) ಮತ್ತವರ ಕುಟುಂಬದವರು ನಿಮಿಷಾಂಬ ದೇಗುಲಕ್ಕೆ ಭೇಟಿ ನೀಡಿದರು. ನಿಮಿಷಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಡಾ. ರಾಜಕುಮಾರ್ ಅವರು ಕೂಡ ನಿಮಿಷಾಂಬ ದೇವಿಯ ಭಕ್ತರಾಗಿದ್ದರು. ಅವರಂತೆ ಅವರ ಮಕ್ಕಳು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ. ಕಳೆದ ಎರಡು ದಿನದ ಹಿಂದಷ್ಟೆ ಪುನೀತ್ ಪತ್ನಿ ಅಶ್ವಿನಿ ದೇಗುಲಕ್ಕೆ‌ ಆಗಮಿಸಿ ಪೂಜೆ ಸಲ್ಲಿಸಿದ್ದರು.

ಹೊಸ ಕಾರಿಗೆ ಪೂಜೆ ಸಲ್ಲಿಸಿದ ಶಿವರಾಜಕುಮಾರ್‌
ದೇವಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಹೊಸ ಕಾರಿಗೂ ನಟ ಶಿವರಾಜಕುಮಾರ್‌ ಪೂಜೆ ಸಲ್ಲಿಸಿದರು. ನಿಮಿಷಾಂಭ ದೇಗುಲದ ಮುಂದೆ ನೀಲಿ ಬಣ್ಣದ ಕಾರಿಗೆ ಪತ್ನಿಯೊಂದಿಗೆ ಸೇರಿ ಪೂಜೆ ಮಾಡಿದರು. ಈ ವೇಳೆ ಅಭಿಮಾನಿಗಳು ನೆಚ್ಚಿನ ನಟನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು.

ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್‌, ಜ್ಯೂ.ಎನ್‌ಟಿಆರ್‌ ಭಾಗಿ

Exit mobile version