ತುಮಕೂರು: ಮಗುವನ್ನು ನದಿಗೆ ಎಸೆದು ಕೊಂದಿದ್ದ ಪ್ರಕರಣದಲ್ಲಿ ತಾಯಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
2017ರಲ್ಲಿ ಜುಲೈ 22ರಂದು ತುಮಕೂರಿನ ಮಧುಗಿರಿ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪ ಸಾಬೀತುಪಡಿಸಲು ಸಾಕ್ಷ್ಯಧಾರಗಳು ಸಿಗದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ನ್ಯಾಯಮೂರ್ತಿಗಳಾದ ಬ ಸೋಮಶೇಖರ್, ಶಿವಶಂಕರ್ ಅವರಿದ್ದ ಹೈಕೋರ್ಟ್ ವಿ ಭಾಗಿಯ ಪೀಠ ಆದೇಶ ಹೊರಡಿಸಿದೆ.
ಇದನ್ನು ಓದಿ | ತುಮಕೂರು ಜೈಲಿನಲ್ಲಿ NSUI ಕಾರ್ಯಕರ್ತನ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್
ಹೀಗಾಗಿ ಆರು ವರ್ಷಗಳಿಂದ ಜೈಲು ವಾಸ ಮಾಡಿದ್ದ ಮಹಿಳೆಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಏನಿದು ಪ್ರಕರಣ
ಆಂಧ್ರಪ್ರದೇಶದ ಅನಂತಪುರದಿಂದ ತುಮಕೂರಿನ ಕೊರಟಗೆರೆ ತಮ್ಮ ಎರಡು ತಿಂಗಳ ಮಗುವಿನ ಜೊತೆಗೆ ಬಂದಿದ್ದರು. ಮಗುವಿಗೆ ಉಸಿರಾಟದ ತೊಂದರೆ ಹಾಗೂ ಮೂರ್ಛೆ ರೋಗವಿದ್ದ ಕಾರಣ ಇಲ್ಲಿಯೇ ಆಸ್ಪತ್ರೆಗೆ ತೋರಿಸಲು ದಂಪತಿ ಆಗಮಿಸಿದ್ದರು. ಆದರೆ, ಮಗುವಿಗೆ ಹಾಲುಣಿಸಲು ಆಗದೆ ಮನನೊಂದಿದ್ದ ಮಹಿಳೆ, ಗಂಡನ ಕಣ್ತಪ್ಪಿಸಿ ಮಗುವನ್ನು ಸ್ವರ್ಣಮುಖಿ ನದಿಗೆ ಎಸೆದಿದ್ದಳು.
ಬಳಿಕ ಪತಿ ಬಳಿ ದುಷ್ಕರ್ಮಿಗಳು ಚಿನ್ನಾಭರಣ ಕಿತ್ತುಕೊಂಡು ಮಗುವನ್ನು ಎತ್ತಿಕೊಂಡು ಹೋದರು ಎಂದು ಕಥೆ ಕಟ್ಟಿದ್ದಳು. ಇದಾದ ಬಳಿಕ ಪತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ದೂರಿನ್ವಯ ತನಿಖೆ ಆರಂಭಿಸಿದ್ದರು. ತನಿಖೆಯಲ್ಲಿ ಮಹಿಳೆಯದೇ ತಪ್ಪು ಎಂದು ಬಹಿರಂಗಗೊಂಡಿತ್ತು. ಮಹಿಳೆ ಕೂಡ ಸತ್ಯ ಒಪ್ಪಿಕೊಂಡಿದ್ದಳು. ಈ ಪ್ರಕರಣ ವಿಚಾರಣೆ ನಡೆಸಿದ್ದ ಮಧುಗಿರಿ ನ್ಯಾಯಲಯ ಮಹಿಳೆಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.