ನವ ದೆಹಲಿ: ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಹಿಜಾಬ್ (Hijab Row) ಧರಿಸುವುದನ್ನು ನಿಷೇಧಿಸಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ”ಈ ಪ್ರಕರಣವನ್ನು ನೀವು ಅತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಿಲ್ಲ. ಉಡುಗೆ ತೊಡುಗೆಯ ಹಕ್ಕು ಉಡುಗೆಯನ್ನು ನಿರಾಕರಿಸುವ ಹಕ್ಕನ್ನೂ ಒಳಗೊಂಡಿರುತ್ತದೆ?” ಅಲ್ಲವೇ ಎಂದು ಅರ್ಜಿದಾರರಿಗೆ ಪ್ರಶ್ನಿಸಿದೆ. ಇದೇ ವೇಳೆ, ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದ ಜತೆಗೆ ರುದ್ರಾಕ್ಷಿ, ಶಿಲುಬೆ ಮೊದಲಾದ ಧಾರ್ಮಿಕ ಸಂಕೇತಗಳನ್ನು ಧರಿಸುವುದು ಪ್ರಸ್ತಾಪವಾಯಿತು. ಏತನ್ಮಧ್ಯೆ, ವಿಚಾರಣೆಯನ್ನು ನಾಳೆಗೆ(ಸೆ.8) ಮುಂದೂಡಿದೆ.
ಜಸ್ಟೀಸ್ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದ ಈ ಪ್ರಶ್ನೆಗೆ ಅರ್ಜಿದಾರ ಪರ ವಕೀಲ ದೇವದತ್ತ ಕಾಮತ್ ಅವರು, ಶಾಲೆಗಳಲ್ಲಿ ಯಾರೂ ಉಡುಗೆಯನ್ನು ನಿರಾಕರಿಸುವುದಿಲ್ಲ. ಪ್ರಶ್ನೆ ಇರುವುದು, ಆರ್ಟಿಕಲ್ 19ರ ಪ್ರಕಾರ ಹೆಚ್ಚುವರಿಯಾಗಿ ಡ್ರೆಸ್ ಧರಿಸುವುದರ ಬಗ್ಗೆ. ಅದನ್ನು ನಿರ್ಬಂಧಿಸಬಹುದೇ? ” ಎಂದು ಪ್ರಶ್ನಿಸಿದರು.
ಒಂದು ನಿರ್ದಿಷ್ಟ ಸಮುದಾಯದವರು ಹಿಜಾಬ್ ಧರಿಸಿಲು ಒತ್ತಾಯಿಸುತ್ತಿದ್ದಾರೆ. ಅದೇ ವೇಳೆ, ಇತರ ಸಮುದಾಯದವರು ವಸ್ತ್ರ ಸಂಹಿತೆಯನ್ನು ಅನುಸರಿಸುತ್ತಿದ್ದಾರೆ. ಉಳಿದ ಸಮುದಾಯದವರು ನಾನು ಅದನ್ನು ಧರಿಸುವುದಿಲ್ಲ, ಇದನ್ನು ಧರಿಸುವುದಿಲ್ಲ ಎಂದು ಹೇಳುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
ಇದಕ್ಕೆ ಉತ್ತರಿಸಿದ ಅರ್ಜಿದಾರ ಪರ ವಕೀಲ ದೇವದತ್ತ ಕಾಮತ್ ಅವರು, ಅನೇಕ ವಿದ್ಯಾರ್ಥಿಗಳು ರುದ್ರಾಕ್ಷಿ ಅಥವಾ ಕ್ರಾಸ್‌ಗಳನ್ನು ಧಾರ್ಮಿಕ ಸಂಕೇತಗಳಾಗಿ ಧರಿಸುತ್ತಾರೆ ಎನ್ನುತ್ತಿದ್ದಂತೆ ನ್ಯಾಯಮೂರ್ತಿಗಳು, ಅವುಗಳನ್ನು ಅಂಗಿಯೊಳಗೇ ಧರಿಸುತ್ತಾರೆ. ಯಾರೂ ಅಂಗಿಯನ್ನು ಮೇಲಕ್ಕೆ ಎತ್ತಿ, ರುದ್ರಾಕ್ಷಿ ಧರಿಸಿದ್ದಾರೆಯೇ ಎಂದು ನೋಡಲು ಹೋಗುವುದಿಲ್ಲ ಎಂದರು.
ಇದನ್ನೂ ಓದಿ | Mangaluru : ಹಿಜಾಬ್ಗಾಗಿ ಕಾಲೇಜಿಗೆ ಬೈ ಬೈ