Site icon Vistara News

Hindi Diwas | ಹಿಂದಿಯಿಂದಾಗಿಯೇ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಗೌರವ: ಪ್ರಧಾನಿ ನರೇಂದ್ರ ಮೋದಿ

BBC Documentary On PM Modi

ನವ ದೆಹಲಿ: ಜಾಗತಿಕವಾಗಿ ಭಾರತಕ್ಕೆ ಹಿಂದಿ ವಿಶೇಷ ಗೌರವವನ್ನು ತಂದುಕೊಟ್ಟಿದೆ. ಹಿಂದಿ ತನ್ನ ಸಿಂಪ್ಲಿಸಿಟಿ ಮತ್ತು ಸೂಕ್ಷ್ಮತೆಯಿಂದಾಗಿ ಜನರನ್ನು ಯಾವಾಗಲೂ ಆಕರ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆದರೆ, ಮತ್ತೊಂದೆಡೆ, ಹಿಂದಿ ದಿವಸ್ (Hindi Diwas) ಆಚರಣೆಗೆ ಪ್ರತಿರೋಧ ಕೂಡ ವ್ಯಕ್ತವಾಗಿದೆ. ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಸರ್ಕಾರಿ ದುಡ್ಡಿನಲ್ಲಿ ಹಿಂದಿ ದಿವಸ್ ಆಚರಣೆ ಬೇಡ ಎಂದಿದ್ದಾರೆ.

1949ರಲ್ಲಿ ಸಂವಿಧಾನ ಸಭೆಯು ಹಿಂದಿಯನ್ನು ದೇಶದ ಅಧಿಕೃತ ಭಾಷೆಯಾಗಿ ಅಳವಡಿಸಿಕೊಂಡಿತು. ಇದರ ಸ್ಮರಣಾರ್ಥವಾಗಿ ಪ್ರತಿ ವರ್ಷದ ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಅನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ 65 ಕೋಟಿಗೂ ಹೆಚ್ಚು ಮಾತನಾಡುವ ಜಾಗತಿಕವಾಗಿ ಹಿಂದಿ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.

ಆಡಳಿತ ಭಾಷೆಯಾಗಿರುವ ಹಿಂದಿ ಭಾಷೆಗೆ ನಾವು ಮಹತ್ವವನ್ನು ಕೊಡಲೇಬೇಕು. ಹಿಂದಿ ದೇಶವನ್ನು ಒಂದುಗೂಡಿಸುವುದು ಮಾತ್ರವಲ್ಲದೇ, ವಿದೇಶಗಳಲ್ಲಿ ಹಿಂದಿಯನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.

ಹಿಂದಿ ಕಲಿಕೆಗೆ ಆ್ಯಪ್
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದಿಯನ್ನು ಉತ್ತೇಜಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು LILA Hindi Pravah ಆ್ಯಪ್ ಅಭಿವೃದ್ಧಿಗೊಳಿಸುತ್ತಿದ್ದೇವೆ. ಜತೆಗೆ ಇ ಮಹಾಶಬ್ದಕೋಶ್ ಎಂಬ ಆ್ಯಪ್ ಕೂಡ ಲಭ್ಯವಿದೆ. ಸಮಗ್ರ ಹಿಂದಿ ಶಬ್ದಕೋಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲೂ ಇಲಾಖೆಯು ಕೆಲಸ ಮಾಡುತ್ತಿದೆ ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ.

ಭಾರತೀಯ ಭಾಷೆಗಳನ್ನು ಉತ್ತೇಜಿಸುವುದಕ್ಕಾಗಿ ಕೇಂದ್ರ ಸರ್ಕಾರವು ಟೌನ್ ಅಫೀಷಿಯಲ್ ಲ್ಯಾಂಗ್ವೇಜ್ ಇಂಪ್ಲಿಮೇಂಟೇಷನ್ ಕಮಿಟಿಯನ್ನು ಸ್ಥಾಪನೆ ಮಾಡುತ್ತಿದೆ. ಯಾವ ದೇಶದಲ್ಲಿ ಭಾರತವು ಏಳಕ್ಕಿಂತ ಹೆಚ್ಚು ಸರ್ಕಾರಿ ಕಚೇರಿಗಳನ್ನೋ ಅಥವಾ ಭಾರತೀಯ ಬ್ಯಾಂಕ್‌ ಶಾಖೆಗಳನ್ನು ಹೊಂದಿದೆಯೋ ಅಲ್ಲಿ ಈ ಕಮಿಟಿ ಇರಲಿದೆ ಎಂದು ಹೇಳಲಾಗುತ್ತಿದೆ.

ಹಿಂದಿ ದಿವಸ್ ಆಚರಣೆಗೆ ವಿರೋಧ
ದಕ್ಷಿಣ ಭಾರತದಲ್ಲಿ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರಿ ದುಡ್ಡಿನಲ್ಲಿ ಕನ್ನಡದ ಬದಲಿಗೆ ಹಿಂದಿ ದಿವಸ್ ಅನ್ನು ಆಚರಿಸುವುದು ಬೇಡ ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | ಹಿಂದಿ ಹೇರಿಕೆ ಮತ್ತು ನುಡಿ ಸಮಾನತೆ: ಒಂದು ಮಾತುಕತೆ

Exit mobile version