Site icon Vistara News

Sangh Shiksha Varg: ಹಿಂದು ಭಾವ ಜಾಗೃತಿಯು ಸಂಘದ ಕೊಡುಗೆ: ರವೀಂದ್ರ

RSS Karnataka Northern Province Executive Member Ravindra

#image_title

ಬೆಂಗಳೂರು: ನಾನೊಬ್ಬ ಹಿಂದು ಎಂದು ಹೇಳುವುದಕ್ಕೆ ಹಿಂಜರಿಯುತ್ತಿದ್ದ ವಾತಾವರಣದಿಂದ ಹೊರಬಂದು ಹಿಂದು ಎಂದು ಕರೆಸಿಕೊಳ್ಳುವುದು ನನ್ನ ಹೆಮ್ಮೆ ಎಂಬ ಭಾವ ನಿರ್ಮಾಣ ಕಾರ್ಯ ಸಂಘದ ಸಾಧನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Sangh Shiksha Varg) ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು.

ನಗರದ ಚನ್ನೇನಹಳ್ಳಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದುಗಳು ಸಾಮಾಜಿಕವಾಗಿ ಸಂಘಟಿತರಾಗಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಈಗ ಬದಲಾಗಿದೆ. ಒಂದೇ ಮತ, ಒಂದೇ ಭಾಷೆ, ಒಂದೇ ಆಚಾರ ವಿರುವ ರಾಷ್ಟ್ರಗಳೇ ಜಗಳವಾಡುತ್ತಿರುವಾಗ ಅಸಂಖ್ಯಾತ ಪಂಥಗಳು, ಭಾಷೆಗಳು, ಆಚಾರಗಳನ್ನೊಳಗೊಂಡ ನಮ್ಮ ರಾಷ್ಟ್ರದಲ್ಲಿ ಸಂಘಟಿತ ಮತ್ತು ಸಾಮರಸ್ಯದ ಜೀವನ ನಡೆಸುವ ಹಿಂದು ಸಮಾಜದ ನಿರ್ಮಾಣ ಸಂಘ ಕಾರ್ಯದ ಪರಿಣಾಮ ಎಂದು ನುಡಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಜಾರ್ಜ್ ಫರ್ನಾಂಡಿಸ್ ಮತ್ತು ಕೊಂಕಣ್ ರೈಲ್ವೆ

ಸಂಘ ಕಾರ್ಯ ಆಸಕ್ತಿ ಮತ್ತು ಅವಕಾಶದ ಕಾರಣಕ್ಕಾಗಿ ನಡೆಯುತ್ತಿರುವುದಲ್ಲ. ಬದಲಾಗಿ ಅಗತ್ಯತೆಯ ಕಾರಣಕ್ಕಾಗಿ ಸಂಘ ಕಾರ್ಯ ಮಾಡಬೇಕಾಗಿದೆ‌. ನನ್ನ ರಾಷ್ಟ್ರ ಎಂಬ ಭಾವಜಾಗೃತಿಯೊಂದಿಗೆ ಸಂಘದ ಹಿತೈಷಿಗಳೂ ಸ್ವಯಂಸೇವಕರು, ಕಾರ್ಯಕರ್ತರಾಗಿ ಜೊತೆಯಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನಿ ರಾಜೇಂದ್ರ ಹೆಗಡೆ ಅವರು ಮಾತನಾಡಿ ಅಪ್ರತಿಮ ರಾಷ್ಟ್ರಭಕ್ತರನ್ನು ನಿರ್ಮಿಸುವಲ್ಲಿ ಸಂಘ ಅಮೂಲ್ಯ ಕೊಡುಗೆ ನೀಡುತ್ತಿದೆ. ಸಮಾಜ ಸೇವೆಗಾಗಿ ಸದಾ ಮಿಡಿಯುವ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಸಂಘವನ್ನು ತಿಳಿಯಬೇಕಿದ್ದರೆ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅಭಿಪ್ರಾಯಪಟ್ಟರು. ವರ್ಗದ ಸರ್ವಾಧಿಕಾರಿ ಕೃಷ್ಣಮೂರ್ತಿ ವರ್ಗದ ವರದಿ ಪ್ರಸ್ತುತ ಪಡಿಸಿದರು.

ಇದನ್ನೂ ಓದಿ | BJP Karnataka: ʼಹಿಂದು ಕಾರ್ಯಕರ್ತರʼ ರಕ್ಷಣೆಗೆ ವಕೀಲರ ಭದ್ರಕೋಟೆ: ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಬಿಜೆಪಿ!

ಮೇ 14 ರಂದು ಪ್ರಾರಂಭವಾದ ಈ ವರ್ಗಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು ಭೇಟಿ ನೀಡಿದ್ದರು. ರಾಜ್ಯದ 77 ಸ್ಥಾನಗಳಿಂದ 89 ಶಿಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿತೈಷಿಗಳು, ಸಾರ್ವಜನಿಕರು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Exit mobile version