ಆನೇಕಲ್ (ಬೆಂಗಳೂರು): ಪ್ರಸ್ತುತ ಸಂದರ್ಭದಲ್ಲಿ ಮತಾಂತರ (Religious Conversion) ಪ್ರಮಾಣ ದೇಶದಲ್ಲಿ ಹೆಚ್ಚಾಗಿದ್ದು, ಈ ಪ್ರಕ್ರಿಯೆ ಆಸ್ಪತ್ರೆ ಮತ್ತು ಶಾಲೆಗಳ ಮೂಲಕವೂ ನಡೆಯುತ್ತಿದೆ. ಇದರಿಂದ ಹಿಂದುಗಳ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಅಜ್ಞಾನದಿಂದಾಗಿ ಮತಾಂತರ ನಡೆಯುತ್ತಿರುವುದರಿಂದ ಧರ್ಮ ಶಿಕ್ಷಣ ಅವಶ್ಯಕತೆಯಿದೆ. ಮತಾಂತರ ತಡೆಗೆ ಹಿಂದುಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು ಎಂದು ಹಿಂದು ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.
ತಾಲೂಕಿನ ಬನಹಳ್ಳಿಯ ಶ್ರೀ ದಕ್ಷಿಣಾಭಿಮುಖ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಹಿಂದು ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿ, ಮತಾಂತರದಿಂದ ಒಬ್ಬ ಹಿಂದು ಕಡಿಮೆಯಾದಂತೆ ಅಲ್ಲ, ಬದಲಾಗಿ ಒಬ್ಬ ಹಿಂದು ಧರ್ಮದ ಶತ್ರು ನಿರ್ಮಾಣವಾದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈಗ ಮತಾಂತರ ರಾಷ್ಟ್ರಾಂತರವಾಗಿದ್ದು, ಇದರ ತಡೆಗೆ ಹಿಂದುಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ | ಟಿಪ್ಪು ವಿವಾದ | ಗಿರೀಶ್ ಕಾರ್ನಾಡ್ ಬರೆದ ಪುಸ್ತಕದಲ್ಲೇನಿದೆ? ಅದರಲ್ಲಿ ಮಹಾರಾಜರ ಬಗ್ಗೆ ಏನು ಹೇಳಲಾಗಿದೆ?
ಸೋಮಶೇಖರ್ ರೆಡ್ಡಿ ಮಾತನಾಡಿ, ನಮ್ಮ ದೇಶದಲ್ಲಿ ಹಿಂದು ಧರ್ಮ ಉಳಿಯಬೇಕಾದರೆ ಮೊದಲಿಗೆ ಮನೆಗಳಲ್ಲಿ ತಂದೆ-ತಾಯಿ ಮಕ್ಕಳಿಗೆ ನಮ್ಮ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು. ಇದರಿಂದ ದೇಶದಲ್ಲಿ ಜಾಗೃತಿ ಮೂಡಲಿದೆ. ಇವತ್ತು ಕೇರಳದಲ್ಲಿ ಕೇವಲ ಶೇ.20ರಷ್ಟು ಹಿಂದುಗಳಿದ್ದಾರೆ. ತಮಿಳುನಾಡಿನಲ್ಲಿ 800ಕ್ಕೂ ಹೆಚ್ಚು ಹಿಂದು ಕೂಲಿ ಕಾರ್ಮಿಕರು ಮತಾಂತರಗೊಂಡಿದ್ದಾರೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಗಳ ಅವಧಿಯಲ್ಲಿ ನಾವೇ ಅಲ್ಪಸಂಖ್ಯಾತರಾಗಬೇಕಾಗುತ್ತದೆ. ಈ ಸ್ಥಿತಿ ಎದುರಾಗದಿರಲು ನಮ್ಮ ಧರ್ಮದ ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ಮುಡಿಸೋಣ, ನಾವೆಲ್ಲರೂ ಧರ್ಮಾಚರಣೆ ಮಾಡೋಣ ಎಂದು ಕರೆ ನೀಡಿದರು.
ಯೋಗ ಶಿಕ್ಷಕ ಶ್ರೀಧರ್ ಮಾತನಾಡಿ, ಜೀವನವೆಂದರೆ ಕೇವಲ ಹಣ ಮಾತ್ರವಲ್ಲ, ಆಚಾರ, ಸಂಸ್ಕೃತಿ, ಹಿಂದುತ್ವವಿರದ ಜೀವನ ಅದು ಜೀವನವೇ ಅಲ್ಲ. ಇಂದು ದೇಶದಲ್ಲಿ ನಾವೆಲ್ಲ ಆರಾಮವಾಗಿದ್ದೇವೆಂದು ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕಬೇಕು. ದೇಶದ ಕಿರೀಟವಾಗಿರುವ ಕಾಶ್ಮೀರದಲ್ಲಿ ನಾಲ್ಕೂವರೆ ಲಕ್ಷ ಹಿಂದುಗಳನ್ನು ರಾತ್ರೋರಾತ್ರಿ ಕಾಶ್ಮೀರದಿಂದ ಓಡಿಸಲಾಯಿತು. ಕೇರಳದಲ್ಲಿ ಈಗಾಗಲೇ ಮಲ್ಲಪುರಂ ಜಿಲ್ಲೆಯನ್ನು ಮುಸ್ಲಿಂ ಜಿಲ್ಲೆಯಾಗಿ ಕರೆಯಲಾಗುತ್ತಿದೆ. ಇದೇ ವರ್ಷದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದು ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಹೀಗಾಗಿ ನಾವೆಲ್ಲರೂ ನಮ್ಮ ರಾಷ್ಟ್ರ-ಧರ್ಮದ ರಕ್ಷಣೆಗಾಗಿ ನಾವೆಲ್ಲರೂ ಸಂಘಟಿತರಾಗೋಣ ಎಂದು ಕರೆ ನೀಡಿದರು.
ಬಿಬಿಐ ರಾಜು ಮಾತನಾಡಿ, ಈ ರೀತಿಯ ಹಿಂದು ರಾಷ್ಟ್ರ-ಜಾಗೃತಿಯ ಸಭೆಗಳು ಪ್ರತಿಯೊಂದು ಗ್ರಾಮದಲ್ಲಿ ನಡೆಯಬೇಕು. ಇದಕ್ಕಾಗಿ ಎಲ್ಲ ಯುವಕರು, ಗ್ರಾಮಸ್ಥರು ಯಾವುದೇ ಜಾತಿ-ಭೇದವಿಲ್ಲದೆ ಒಂದಾಗಬೇಕು ಎಂದರು. ಬನಹಳ್ಳಿ ಗ್ರಾಮದ ಭಾಜಪ ಅಧ್ಯಕ್ಷ ಬಿ.ಬಿ.ಐ ರಾಜು ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ | ವಿವೇಕ ಯೋಜನೆಗೆ ಚಾಲನೆ | ರಾಜ್ಯದಲ್ಲಿ 8000 ಶಾಲಾ ಕೊಠಡಿ, 4000 ಹೊಸ ಅಂಗನವಾಡಿ ನಿರ್ಮಾಣ ಎಂದ ಬೊಮ್ಮಾಯಿ