ಯಾದಗಿರಿ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿದರೂ, ಬಲವಂತದ ಮತಾಂತರ ಕಾನೂನುಬಾಹಿರವಾಗಿದ್ದರೂ ಯಾದಗಿರಿಯಲ್ಲಿ ಬಲವಂತದ ಮತಾಂತರ ಹಾಗೂ ಲವ್ ಜಿಹಾದ್ (Love Jihad) ಆರೋಪಗಳು ಕೇಳಿಬಂದಿವೆ. ಅದರಲ್ಲೂ, ಮುಸ್ಲಿಂ ಮಹಿಳೆಯೊಬ್ಬರು ವಿವಾಹಿತ ಹಿಂದು ಪುರುಷನನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ವ್ಯಕ್ತಿಯ ಮೊದಲ ಪತ್ನಿಯೇ ಆರೋಪಿಸಿದ ಕಾರಣ ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.
ಕಲಬುರಗಿ ಮೂಲದ ವಿವಾಹಿತೆ ಸುಮೈರಾ ಅಫ್ರಿನ್ ಎಂಬುವವರು ತನ್ನ ಪತಿ ಶರಣಪ್ಪ ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಯಾದಗಿರಿ ನಿವಾಸಿ ಅಂಬಿಕಾ ಆರೋಪಿಸಿದ್ದಾರೆ. ಶರಣಪ್ಪನ ಹೆಸರು ಈಗ ಸುಮೇರ್ ಉಜೇನ್ ಎಂದು ಬದಲಾಗಿದೆ ಎಂದು ದೂರಿದ್ದಾರೆ. ಇದು ಲವ್ ಜಿಹಾದ್ ಇರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.
ಅಂಬಿಕಾ ಹಾಗೂ ಶರಣಪ್ಪ 2018ರಲ್ಲಿ ಮದುವೆಯಾಗಿದ್ದು, ಅವರಿಬ್ಬರಿಗೆ ಒಂದು ಮಗು ಇದೆ. ಆದರೆ, ಕೆಲಸಕ್ಕೆ ಹೋದಾಗ ಶರಣಪ್ಪನಿಗೆ ಸುಮೈರಾ ಅಫ್ರಿನ್ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. “ಸುಮೈರಾ ಅಫ್ರಿನ್‌ಗೆ ಮದುವೆಯಾಗಿದ್ದು, ಮೂವರು ಮಕ್ಕಳಿವೆ. ಗಂಡನನ್ನು ಬಿಟ್ಟಿರುವ ಆಕೆ ನನ್ನ ಪತಿಯನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆಯಾಗಿದ್ದಾಳೆ” ಎಂದು ಅಂಬಿಕಾ ಆರೋಪಿಸಿದ್ದಾರೆ.
ಇದನ್ನೂ ಓದಿ | Love Jihad | ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೂಗು; ಹಿಂದು ಯುವತಿಯ ಫೋಟೊ ಹರಿಬಿಟ್ಟ ಮುಸ್ಲಿಂ ಯುವಕ