Site icon Vistara News

Puttur News: ದೌರ್ಜನ್ಯ ಮಾಡಿದ್ರೆ ಹಿಂದು ಕಾರ್ಯಕರ್ತರು‌ ಕುಗ್ಗಲ್ಲ: ಶಿವಮೊಗ್ಗ ಹರ್ಷನ ಸೋದರಿ ಅಶ್ವಿನಿ

Hindu worker Harsha's sister Ashwini visit to puttur

Hindu worker Harsha's sister Ashwini visit to puttur

ಮಂಗಳೂರು: ಪುತ್ತೂರಿನಲ್ಲಿ (Puttur News) ನಳಿನ್‌ ಕುಮಾರ್‌ ಕಟೀಲ್‌ ಮತ್ತು ಡಿ.ವಿ.ಸದಾನಂದ ಗೌಡ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದು ಕಾರ್ಯಕರ್ತರನ್ನು ಶಿವಮೊಗ್ಗದ ದಿ. ಹರ್ಷ ಸಹೋದರಿ ಅಶ್ವಿನಿ ಸೋಮವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದು ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಮಾತನಾಡಿದ ಅಶ್ವಿನಿ, ಹಿಂದು ಕಾರ್ಯಕರ್ತರ ಸ್ಥಿತಿ ನೋಡಿ ತುಂಬಾ ಬೇಸರಗೊಂಡಿದ್ದೇನೆ. ಇವತ್ತು ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನು ಜೀವಂತ ನೋಡುತ್ತಿರಲಿಲ್ಲ. ಕಾರ್ಯಕರ್ತರು ಹಿಂದು ಸಮಾಜ ಗಟ್ಟಿಗೊಳಿಸಲು ಹೋರಾಡುತ್ತಿದ್ದಾರೆ. ಇದನ್ನೂ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಹಿಂದು ಕಾರ್ಯಕರ್ತರ ಆರೋಗ್ಯವನ್ನು ಅಶ್ವಿನಿ ವಿಚಾರಿಸಿದರು.

ಹಿಂದು ಕಾರ್ಯಕರ್ತರು‌ ಸಮಾಜಕ್ಕೆ ದ್ರೋಹ ಮಾಡುತ್ತಿಲ್ಲ. ಈ ರೀತಿ ದೌರ್ಜನ್ಯ ಮಾಡಿದರೆ ಹಿಂದು ಕಾರ್ಯಕರ್ತರು‌ ಬೆಳೆಯುತ್ತಾರೆ ಹೊರತು ಕುಗ್ಗಲ್ಲ. ಅರುಣ್ ಕುಮಾರ್ ಪುತ್ತಿಲ ಇರೋವರೆಗೂ ಯಾವ ಕಾರ್ಯಕರ್ತನಿಗೂ ತೊಂದರೆ ಆಗಲ್ಲ. ಪ್ರತಿಯೊಬ್ಬರಿಗೂ ಒಂದು‌ ಜೀವ ಅಮೂಲ್ಯವಾದುದು. ಹಾಗಾಗಿ ದಯವಿಟ್ಟು ಈ ರೀತಿಯ ದೌರ್ಜನ್ಯ ಮಾಡುವುದು ಸರಿಯಲ್ಲ. ರಾಜ್ಯದಲ್ಲಿ ಸುಮಾರು 36 ಕಾರ್ಯಕರ್ತರು ಬಲಿಯಾಗಿದ್ದಾರೆ. ಈ ರೀತಿ ಒಬ್ಬ ಹೋದರೆ ಸಾವಿರಾರು ಜನ ಹುಟ್ಟಿ ಬರುತ್ತೇವೆ. ಹಿಂದುತ್ವವನ್ನು ಬೆಳೆಸಿಕೊಳ್ಳುತ್ತೇವೆ, ಆ ಮೂಲಕ‌ ಸಮಾಜ ಗಟ್ಟಿಗೊಳಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ | Arun kumar puthila : ಕರಾವಳಿಯಲ್ಲಿ ಹುಟ್ಟಿಕೊಂಡಿದೆ ಪುತ್ತಿಲ ಪರಿವಾರ; ಸಂಘ ಪರಿವಾರಕ್ಕೆ ಇಬ್ಭಾಗ ಆತಂಕ

ಪುತ್ತೂರಿನಲ್ಲಿ ನಡೆದ ದೌರ್ಜನ್ಯದಂತೆ ಯಾರೂ ನಡೆದುಕೊಳ್ಳಲ್ಲ. ಈ ರೀತಿ ಮಾಡಿದವರಿಗೂ ಮಕ್ಕಳು ಇರುತ್ತಾರೆ, ಮಾಡಿಸಲು‌ ಕುಮ್ಮಕ್ಕು ಕೊಟ್ಟವರಿಗೂ ಮಕ್ಕಳು ಇದ್ದಾರೆ. ಪ್ರತಿಯೊಬ್ಬರಿಗೂ ನೋವಾಗುತ್ತದೆ. ಇನ್ನು ಮುಂದೆಯಾದರೂ ಅರ್ಥಮಾಡಿಕೊಂಡು ಬದುಕುವ ಮೂಲಕ ಸಮಾಜಕ್ಕೆ ಮಾದರಿಯಾಗಿ, ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಹಿಂದುತ್ವಕ್ಕೆ ಕೆಲಸ ಮಾಡಬೇಕು ಎಂದು ತಿಳಿಸಿದರು.

Exit mobile version