Site icon Vistara News

Hit and Run case : ಕಾರು ಡಿಕ್ಕಿ ಹೊಡೆಸಿ ಇಬ್ಬರ ಸಾವಿಗೆ ಕಾರಣನಾದ ಮಂಗಳೂರಿನ ಯೂಟ್ಯೂಬರ್‌ ಅರೆಸ್ಟ್‌

Arpit Indravardhan

#image_title

ಮಂಗಳೂರು: ಜನವರಿ 31ರಂದು ಮಧ್ಯರಾತ್ರಿ ಮುಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹಳೆಯಂಗಡಿ ಬಳಿ ಪೆಟ್ರೋಲ್‌ ಪಂಪ್‌ ಎದುರು ಕಾರು ಅಪಘಾತದಲ್ಲಿ ಇಬ್ಬರನ್ನು ಬಲಿ ಪಡೆದ (Hit and Run case) ಆರೋಪದಲ್ಲಿ ಮಂಗಳೂರಿನ ಯೂಟ್ಯೂಬರ್‌ ಅರ್ಪಿತ್‌ ಇಂದ್ರವರ್ಧನ್‌ ಅವರನ್ನು ಮಂಗಳೂರು ಉತ್ತರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

೩೫ರ ಹರೆಯದ ಅರ್ಪಿತ್‌ ಇಂದ್ರವರ್ಧನ್‌ ಮ್ಯಾಡ್‌ ಇನ್‌ ಕುಡ್ಲ ಯೂಟ್ಯೂಬ್‌ ನಡೆಸುತ್ತಿದ್ದು ಹಳೆಯಂಗಡಿ ಸಮೀಪದ ಇಂದಿರಾ ನಗರ ನಿವಾಸಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಿ, ಸದ್ಯ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ಅರ್ಪಿತ್‌ ಇಂದ್ರವರ್ಧನ್

ಅಂದು ಏನಾಗಿತ್ತು?

ಮಧ್ಯ ಪ್ರದೇಶದಿಂದ ಕೇರಳಕ್ಕೆ ಹೋಗುತ್ತಿದ್ದ ಲಾರಿಯೊಂದು ಡಿಸೆಂಬರ್ ೩೧ರಂದು ರಾತ್ರಿ ಹಳೆಯಂಗಡಿ ಪೆಟ್ರೋಲ್‌ ಪಂಪ್‌ ಬಳಿ ಟಯರ್‌ ಪಂಕ್ಚರ್‌ ಆಗಿ ನಿಂತಿತ್ತು. ಚಾಲಕ ಮತ್ತು ಸಿಬ್ಬಂದಿ ಹೆದ್ದಾರಿ ಬಳಿ ಲಾರಿಯನ್ನು ನಿಲ್ಲಿಸಿ ದುರಸ್ತಿ ಮಾಡುತ್ತಿದ್ದರು. ಆಗ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಒಟ್ಟು ಮೂವರಿಗೆ ಲಾರಿ ಡಿಕ್ಕಿ ಹೊಡೆದು ಒಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಕೆಲವು ದಿನಗಳ ನಂತರ ಇನೊಬ್ಬ ವ್ಯಕ್ತಿ ಕೂಡಾ ಪ್ರಾಣ ಕಳೆದುಕೊಂಡಿದ್ದರು. ಮೃತಪಟ್ಟವರನ್ನು ಬಬುಲ್‌ (೨೩) ಮತ್ತು ಅಚಲ್‌ ಸಿಂಗ್‌ (೩೦) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕೇರಳ ನಿವಾಸಿ ಅನೀಶ್‌ (೪೨) ಗಂಭೀರ ಗಾಯಗೊಂಡಿದ್ದರು.

ಟಯರ್‌ ಪಂಕ್ಚರ್‌ ಹಾಕುತ್ತಿದ್ದವರ ಮೇಲೆ ಹರಿದ ಕಾರು ಅಲ್ಲಿ ನಿಲ್ಲಿಸದೆ ಪರಾರಿಯಾಗಿತ್ತು. ಆವತ್ತು ಅಪಘಾತ ಸಂಭವಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಯಕ್ಷಗಾನ ನಡೆಯುತ್ತಿತ್ತು. ಅಲ್ಲಿನ ಕೆಲವು ವ್ಯಕ್ತಿಗಳು ನೀಡಿದ ಹೇಳಿಕೆ ಮತ್ತು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಆಧಾರದಲ್ಲಿ ಆವತ್ತು ಅಪಘಾತ ಮಾಡಿದ್ದು ಅರ್ಪಿತ್‌ ಎಂದು ತಿಳಿದುಬಂದಿತ್ತು. ಅಂದು ಅರ್ಪಿತ್‌ ಉಡುಪಿಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಬರುತ್ತಿದ್ದರು.

ಇದನ್ನೂ ಓದಿ : Road accident : ಆಂಬ್ಯುಲೆನ್ಸ್‌-ಟ್ರ್ಯಾಕ್ಟರ್‌ ಮಧ್ಯೆ ಅಪಘಾತ; ಸ್ಟ್ರೆಚರ್‌ನಲ್ಲಿದ್ದ ಗಾಯಾಳು ಕೆಳಗೆ ಬಿದ್ದು ಮೃತ್ಯು

Exit mobile version