Site icon Vistara News

Honey Bee attack | ಮಾಗಡಿ ಸರ್ಕಾರಿ ಸಂಕೀರ್ಣದಲ್ಲಿ 50ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನು ದಾಳಿ; ನಾಲ್ವರು ಆಸ್ಪತ್ರೆಗೆ ದಾಖಲು

honey bee attack ಮಾಗಡಿ ಸರ್ಕಾರಿ ಸಂಕೀರ್ಣ

ರಾಮನಗರ: ಮಾಗಡಿ ಪಟ್ಟಣದ ಸರ್ಕಾರಿ ಕಚೇರಿ ಸಂಕೀರ್ಣ ಬಳಿ ಸೋಮವಾರ (ಡಿ. ೫) ಹೆಜ್ಜೇನು ದಾಳಿ (Honey Bee attack) ನಡೆಸಿದ್ದು, 50ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ತೀವ್ರವಾಗಿ ಗಾಯಗೊಂಡ 4 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾಗಡಿ ತಾಲೂಕು ಸರ್ಕಾರಿ ಕಚೇರಿ ಸಂಕೀರ್ಣ ಬಳಿ ಘಟನೆ ನಡೆದಿದೆ. ಇಲ್ಲಿ ಕಳೆದ ಮೂರು ದಿನಗಳಿಂದ ಸಣ್ಣಮಟ್ಟದಲ್ಲಿ ಹೆಜ್ಜೇನು ದಾಳಿ ಆಗಿತ್ತು ಎನ್ನಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಸಂಕೀರ್ಣ ಬಳಿ ಹೆಜ್ಜೇನುಗಳು ದಾಳಿ ನಡೆಸಿವೆ. ಈ ಸಮಯದಲ್ಲಿ ೫೦ಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲರೂ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಕೆಲವರಿಗೆ ಜೇನು ಕಚ್ಚಿದೆ. ಆದರೆ, ನಾಲ್ಕು ಮಂದಿಗೆ ತೀವ್ರವಾಗಿ ಕಚ್ಚಿದೆ ಎಂದು ಹೇಳಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಚೇರಿ ಸಂಕೀರ್ಣ ಬಳಿಯೇ ಶಿಶುಪಾಲನಾ ಕೇಂದ್ರವಿದ್ದು, ಯಾವುದೇ ಅಪಾಯ ಆಗಿಲ್ಲ ಎಂದು ಹೇಳಲಾಗಿದೆ. ಸಂಕೀರ್ಣದಲ್ಲಿ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿದ್ದರೂ ಅದರ ತೆರವಿಗೆ ಯಾವುದೇ ಕ್ರಮ ಕೈಗೊಳ್ಳದ ಮಾಗಡಿ ತಾಲೂಕು ಇಒ ಚಂದ್ರ ಅವರ ಮೇಲೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Wastage problem | ರಸ್ತೆ ಬದಿ ಕಸ ಎಸೆದ ಹೋಟೆಲ್ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದ ಗ್ರಾಮ ಪಂಚಾಯತಿ

Exit mobile version