Site icon Vistara News

Honey Bee attack: ಹೊಸನಗರ ಬಳಿ ಹೆಜ್ಜೇನು ದಾಳಿ; ಮೀನು ಹಿಡಿಯಲು ಹೋದ 6 ಜನರ ಸ್ಥಿತಿ ಗಂಭೀರ

Bee attack near Hosanagara Condition of 6 people who went fishing is critical

ಹೊಸನಗರ: ಹೆಜ್ಜೇನು ದಾಳಿಯಿಂದ (Honey Bee attack) 6 ಜನ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ಮಳಲಿ ಗ್ರಾಮದಲ್ಲಿಂದು ನಡೆದಿದೆ.

ಕೋಣಂದೂರು ಮೂಲದ ಒಂದೇ ಕುಟುಂಬದ 9 ಜನ ಮಳಲಿ ಗ್ರಾಮದಲ್ಲಿ ಫಿಶಿಂಗ್ ಮಾಡಲು ತೆರಳಿದ್ದಾರೆ. ಮಧ್ಯಾಹ್ನ ಕೆರೆಯ ಏರಿಯ ಮೇಲೆ ಊಟ ಮಾಡುತ್ತಿರುವಾಗ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿದ್ದು, ಆರು ಜನರಿಗೆ ಗಂಭೀರ ಗಾಯಗಳಾಗಿವೆ.

ಕೋಣಂದೂರಿನ ಫಯಾಜ್ ಮತ್ತು ಇಂತಿಯಾಜ್ ಕುಟುಂಬದವರು ಭಾನುವಾರ ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಮಳಲಿ ಗ್ರಾಮದಲ್ಲಿ ಫಿಶಿಂಗ್‌ಗೆ ತೆರಳಿದ್ದರು ಎನ್ನಲಾಗುತ್ತಿದೆ. ಈ ವೇಳೆ ಎಲ್ಲರೂ ಫಿಶಿಂಗ್‌ ಮುಗಿಸಿ ಊಟಕ್ಕೆ ಕುಳಿತುಕೊಂಡಿದ್ದರು. ಎಲ್ಲರೂ ಖುಷಿಯಿಂದ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಹೆಜ್ಜೇನುಗಳು ದಾಳಿ ನಡೆಸಿವೆ. ಇದರಿಂದ ಎಲ್ಲರೂ ಕಂಗೆಟ್ಟು ದಿಕ್ಕಾಪಾಲಾಗಿ ಓಡಿದ್ದಾರೆ.

ಇದನ್ನೂ ಓದಿ: ಸಮುದ್ರ ಮಟ್ಟದಿಂದ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಬರಿಗೈಯಲ್ಲಿ ಕೇವಲ 2 ಗಂಟೆಯಲ್ಲಿ ಹತ್ತಿದ ಕೋತಿ ರಾಜು!

ಆದರೆ, ಅಷ್ಟರಲ್ಲಾಗಲೇ ಹೆಜ್ಜೇನುಗಳು ಹಲವರ ಮೇಲೆ ದಾಳಿ ಮಾಡಿತ್ತು. ಇದರಿಂದ ೯ ಜನರಲ್ಲಿ ಆರು ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಹೊಸನಗರ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತಾದರೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

Exit mobile version