Site icon Vistara News

ಸಿನಿಮಾ ಚಿತ್ರೀಕರಣ ವೇಳೆ ಹೆಜ್ಜೇನು ದಾಳಿ, ಇಬ್ಬರು ಲೈಟಿಂಗ್‌ ಸಹಾಯಕರ ಸ್ಥಿತಿ ಗಂಭೀರ

Hejjenu

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಜಮಗೋಡ ರೈಲು ನಿಲ್ದಾಣ ರಸ್ತೆಯ ಕ್ರಾಸ್‌ ಬಳಿ ಸಿನಿಮಾವೊಂದರ ಚಿತ್ರೀಕರಣದ ವೇಳೆ ಹಜ್ಜೇನು ದಾಳಿ ನಡೆಸಿದ್ದು, ಇಬ್ಬರು ಲೈಟಿಂಗ್‌ ಸಹಾಯಕರ ಸ್ಥಿತಿ ಗಂಭೀರವಾಗಿದೆ.

ಜಮಗೋಡ ರೈಲು ನಿಲ್ದಾಣ ರಸ್ತೆಯ ಕ್ರಾಸ್‌ ಬಳಿ ‘ಭಾವಪೂರ್ಣ’ ಎಂಬ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಇದೇ ವೇಳೆ ಹೆಜ್ಜೇನು ದಾಳಿ ನಡೆಸಿದ ಕಾರಣ ಮಂಡ್ಯ ಮೂಲದ ರಮೇಶ್ ಮತ್ತು ರಾಮು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕುಸಿದಿದ್ದಾರೆ. ಕೂಡಲೇ ಅವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರಿಯುತ್ತಿದೆ.

ಇದನ್ನೂ ಓದಿ | Honey Bee Attack | ಶವಸಂಸ್ಕಾರಕ್ಕೆ ತೆರಳಿದವರ ಮೇಲೆ ಹೆಜ್ಜೇನು ದಾಳಿ; 40ಕ್ಕೂ ಹೆಚ್ಚು ಜನರಿಗೆ ಗಾಯ

Exit mobile version