ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ (Honey trap) ಬಲೆಗೆ ಸಿಲುಕಿಸಲು ಪಾಪಿ ಪತಿಯೊಬ್ಬ ಪತ್ನಿಯನ್ನೇ ಬಳಸಿಕೊಂಡು ಇದೀಗ ಇಡೀ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿದ್ದ ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಭಾಳನ್ನು ಮದುವೆ ಆಗಿದ್ದ ಖಲೀಮ್ ಟ್ರ್ಯಾಪ್ ಕೆಲಸಕ್ಕೆಲ್ಲ ಹೆಂಡತಿಯನ್ನೇ ಮುಂದೆ ಬೀಡುತ್ತಿದ್ದ. ಇವರಿಬ್ಬರು ಸೇರಿ ಅತೀವುಲ್ಲಾ ಎಂಬ ಉದ್ಯಮಿಯನ್ನು ಟ್ರ್ಯಾಪ್ ಮಾಡಿದ್ದರು. ಉದ್ಯಮಿ ಅತೀವುಲ್ಲಾಗೆ ಈ ಖಲೀಮ್ ತನ್ನ ಪತ್ನಿ ಸಭಾಳನ್ನು ವಿಧವೆ ಎಂದು ಪರಿಚಯ ಮಾಡಿಸಿದ್ದ.
ಪರಿಚಯ ಮಾಡಿಕೊಟ್ಟು ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ಇತ್ತ ಸಭಾ ಟ್ರ್ಯಾಪ್‌ಗೆ ಬೀಳಿಸಿಕೊಳ್ಳುವ ಸಲುವಾಗಿ ಅತೀವುಲ್ಲಾ ಜತೆಗೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದಳು. ಇದು ಹಲವು ದಿನಗಳ ಕಾಲ ಮುಂದುವರೆದಿತ್ತು. ಕೆಲ ದಿನಗಳ ನಂತರ ಸಭಾ ಆರ್‌ಆರ್ ನಗರದಲ್ಲಿ ರೂಮ್ ಬುಕ್ ಮಾಡಿ ಉದ್ಯಮಿಯನ್ನು ಕರೆದಿದ್ದಳು.
ಇದನ್ನೂ ಓದಿ: Anekal News : ನೇಣು ಬಿಗಿದುಕೊಂಡ ಪತಿ; ತುಂಬು ಗರ್ಭಿಣಿ ಅನಾಥೆ
ಬರುವಾಗ ಆಧಾರ್ ಕಾರ್ಡ್ ಜತೆಗೆ ಬಾ ಎಂದು ಉದ್ಯಮಿ ಅತೀವುಲ್ಲಾಗೆ ಕರೆದಿದ್ದಳು. ಇತ್ತ ಖುಷಿ ಖುಷಿಯಾಗಿ ಅತೀವುಲ್ಲಾ ರೂಮ್‌ಗೆ ಬಂದ ಕೆಲ ಹೊತ್ತಲ್ಲೇ ಇತರೆ ಆರೋಪಿಗಳು ನುಗ್ಗಿದ್ದರು. ಏಕಾಏಕಿ ಎಂಟ್ರಿ ಕೊಟ್ಟು ಸೀನ್ ಕ್ರಿಯೇಟ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಆರು ಲಕ್ಷ ಹಣ ಕೊಡು, ಇಲ್ಲದಿದ್ದರೆ ಮನೆಯವರಿಗೆ ಹೇಳಿ, ನಿನ್ನ ಫೋಟೊ- ವಿಡಿಯೋವನ್ನು ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇತ್ತ ಹಣ ಕೊಡುವುದಾಗಿ ಹೇಳಿ ಉದ್ಯಮಿ ಅತೀವುಲ್ಲಾ ಕೂಡಲೇ ಪೊಲೀಸರಿಗೆ ಕಾಲ್ ಮಾಡಿದ್ದ. ಈ ವೇಳೆ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ, ಹನಿಟ್ರ್ಯಾಪ್ ಮಾಡುತ್ತಿದ್ದಾಗಲೇ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಸದ್ಯ ಈ ಆರೋಪಿಗಳ ಕುರಿತು ತನಿಖೆಯನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ. ಆರ್‌ಆರ್ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹನಿಟ್ರ್ಯಾಪ್ ಮೂಲಕ ನಿರ್ಮಾಪಕನಿಗೆ ನಿರ್ದೇಶಕ ಬ್ಲ್ಯಾಕ್‌ಮೇಲ್!
ಬೆಂಗಳೂರು: ಹನಿಟ್ರ್ಯಾಪ್ ಮಾಡಿ ಯುವತಿಯರ ಮೂಲಕ (Honeytrap Case) ನಿರ್ಮಾಪಕನಿಂದ ಹಣ ಕಿತ್ತ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದರು.. ರವೀಂದ್ರ ಎಂಬ ಚಲನಚಿತ್ರ ನಿರ್ದೇಶಕ ಈ ಕೃತ್ಯ ಎಸಗಿದ್ದ. ನಿರ್ಮಾಪಕ ಚಿಂಗಾರಿ ಮಹಾದೇವ್ ಅವರಿಗೆ ಹುಡುಗಿಯರ ಮುಖಾಂತರ ಹಣಕ್ಕಾಗಿ ರವೀಂದ್ರ ಬ್ಲ್ಯಾಕ್‌ಮೇಲ್ ಮಾಡಿದ್ದ. ಮಾತ್ರವಲ್ಲ ಹಲವು ನಿರ್ಮಾಪಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವುದಾಗಿಯೂ ತಿಳಿದು ಬಂದಿತ್ತು.
ನಿರ್ಮಾಪಕ ಚಿ೦ಗಾರಿ ಮಹಾದೇವ ಅನ್ನಪೂರ್ಣೇಶ್ಮರಿ ನಗರ ಠಾಣೆಯಲ್ಲಿ ನಿರ್ದೇಶಕ ರವೀ೦ದ್ರ ವಿರುದ್ಧ ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. “ಚಿ೦ಗಾರಿ’, “ಶ್ರೀಕ೦ಠ’, ‘ಶಿಶಿರ’ ಸಿನಿಮಾಗಳನ್ನು ಚಿ೦ಗಾರಿ ಮಹದೇವ ನಿರ್ಮಾಣ ಮಾಡಿದ್ದರು.
‘ಬಾರಬಾತ್’ ಸಿನಿಮಾ ನಿರ್ದೇಶಕ ರವೀಂದ್ರ ಯುವತಿಯರ ಮೂಲಕ ಹನಿಟ್ರ್ಯಾಪ್ ಮಾಡಿ ಬೆದರಿಸಿ ಹಣ ಪಡೆದ ಆರೋಪ ಕೇಳಿಬ೦ದಿದ್ದು, ಪೊಲೀಸರು ಕ್ರಮಕೈಗೊಂಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ