Site icon Vistara News

Honey Trapping | ಮಲೆನಾಡಲ್ಲಿ ಮೋಹಿನಿ ಬಲೆಗೆ ಬಿದ್ದ ಮದಗಜ; ಸಕ್ಸೆಸ್‌ ಆಯ್ತು ಹನಿ ಟ್ರ್ಯಾಪ್‌!

honey trapping

ಚಿಕ್ಕಮಗಳೂರು: ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗವು ಕೊಪ್ಪ ತಾಲೂಕಿನ ಜಯಪುರ ಸಮೀಪದ ಎಲೆಮಡಿಲು ಗ್ರಾಮದಲ್ಲಿ ಕೊನೆಗೂ ಸೆರೆಯಾಗಿದೆ. ಮೋಹಿನಿ ಭಾನುಮತಿಯ ಹನಿ ಟ್ರ್ಯಾಪ್‌ನಲ್ಲಿ (Honey Trapping) ಈ ಮದಗಜ ಸಿಕ್ಕಿಬಿದ್ದಿದೆ.

ಅರಣ್ಯಾಧಿಕಾರಿಗಳ ಯಶಸ್ವಿ ಕಾರ್ಯಾಚರಣೆ

ಹನಿಟ್ರ್ಯಾಪ್‌ ಮೂಲಕ ಅರಣ್ಯಾಧಿಕಾರಿಗಳು ಆನೆಯನ್ನು ಖೆಡ್ಡಾಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಒಂಟಿ ಸಲಗವು ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿತ್ತು. ಒಂಟಿ ಸಲಗವನ್ನು ಸೆರೆ ಹಿಡಿಯುವ ಸಂಬಂಧ ಐದು ಸಾಕಾನೆಯನ್ನು ಬಳಸಿಕೊಳ್ಳಲಾಗಿತ್ತು. 40ಕ್ಕೂ ಹೆಚ್ಚು ಸಿಬ್ಬಂದಿ 6 ದಿನದಿಂದ ಸತತ ಕಾರ್ಯಾಚರಣೆ ನಡೆಸುತ್ತಿದ್ದರು.

ಹಗಲಲ್ಲಿ ದಾಂದಲೆ ನಡೆಸುತ್ತಿದ್ದ ಈ ಸಲಗವು ಸಂಜೆ ಹೊತ್ತಿಗೆ ಪ್ರಪಾತದ ಸ್ಥಳಕ್ಕೆ ಹೋಗುತ್ತಿತ್ತು. ಗುರುವಾರ ಕೊನೆಗೂ ಈ ಒಂಟಿ ಸಲಗವು ಮೋಹಿನಿಯ ಪ್ರೇಮಪಾಶಕ್ಕೆ ಸಿಲುಕಿದೆ. ಹೀಗಾಗಿ ಆರಾಮವಾಗಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ | Operation Leopard | ಟ್ರ್ಯಾಪ್‌ ಕ್ಯಾಮೆರಾ ಕಣ್ಣಿಗೆ ಬಿದ್ದ ಚಿರತೆ; 190 ಸಿಬ್ಬಂದಿ, 9 ಬೋನು, 2 ಆನೆ, 12 ಬಲೆ ಬಳಕೆ!

Exit mobile version