Site icon Vistara News

Honeybee attack : ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, 10 ಮಂದಿ ಅಸ್ವಸ್ಥ

honey bee attack

#image_title

ಕೊಪ್ಪಳ: ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹಿಂಡು ದಾಳಿ (Honeybee attack) ನಡೆಸಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಕೊಪ್ಪಳದಲ್ಲಿ ನಡೆಸಿದೆ. ಈ ವಿದ್ಯಾರ್ಥಿಗಳು ಆರ್‌ಎಂಎಸ್‌ ಪರೀಕ್ಷೆ ಬರೆಯಲು ಬಂದಿದ್ದರು.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ದಿ ಕ್ರೈಸ್ತ ಕಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ತಾಲೂಕಿನ ತಳುವಗೆರಿ, ನಿಡಶೇಸಿ, ಹಿರೇಮನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು. ಈ ವೇಳೆ ಕಾಲೇಜಿನ ಆವರಣದಲ್ಲಿದ್ದ ಹೆಜ್ಜೇನುಗಳು ಎದ್ದು ದಾಳಿ ನಡೆಸಿದವು ಎನ್ನಲಾಗಿದೆ.

ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬಂದಿದ್ದರು. ಅವರಲ್ಲಿ ಹೆಚ್ಚಿನವರಿಗೆ ಹೆಜ್ಜೇನು ಕಚ್ಚಿದೆ. ಅವರಲ್ಲಿ 10 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕುಷ್ಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳೊಂದಿಗೆ ಬಂದಿರುವ ಪಾಲಕರ ಮೇಲೆಯೂ ಜೇನುಹುಳಗಳ ದಾಳಿ ನಡೆದಿದೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ನಡೆದ ದಾಳಿಯಿಂದ ಅವರೆಲ್ಲ ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ Reservation : ಮೀಸಲಾತಿ ಒಪ್ಪಿಕೊಳ್ಳಲು ಸ್ವಾಮೀಜಿಗಳಿಗೆ 25 ಬಾರಿ ಫೋನ್‌ ಮಾಡಿ ಒತ್ತಡ: ಡಿಕೆಶಿ ಆರೋಪ, ಬಿಜೆಪಿ ತಿರುಗೇಟು

Exit mobile version