ಬೆಂಗಳೂರು: ಉದ್ಯಮಿಯೊಬ್ಬ ಹನಿಟ್ರ್ಯಾಪ್ (Honeytrap Case) ಬಲೆಗೆ ಸಿಲುಕಿ ಹಣ ಕಳೆದುಕೊಂಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಟೆಲಿಗ್ರಾಂನಲ್ಲಿ ಕನೆಕ್ಟ್ ಆದ ಮಹಿಳೆಯೊಬ್ಬಳನ್ನು ನಂಬಿ ಹೋದ ಉದ್ಯಮಿಯೊಬ್ಬ ಹನಿ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಟೆಲಿಗ್ರಾಂ ಮೂಲಕ ಉದ್ಯಮಿಗೆ ಮೆಹರ್ ಎಂಬ ಮಹಿಳೆ ಪರಿಚಯವಾಗಿದ್ದಳು. ಈ ಪರಿಚಯ ನಿತ್ಯ ಪೋನ್ ಕಾಲ್, ಮೆಸೇಜ್‌ಗೆ ಮುಂದುವರಿದು, ಟೆಲಿಗ್ರಾಂನಿಂದ ಪರ್ಸನಲ್ ನಂಬರ್ ಶೇರ್ ಆಗುವವರೆಗೂ ತಲುಪಿದೆ. ಈ ನಡುವೆ ಟೆಲಿಗ್ರಾಂ ಚೆಲುವೆ ನನ್ನ ಗಂಡ ದುಬೈನಲ್ಲಿದ್ದಾನೆ ಲೈಂಗಿಕ ಸಂತೃಪ್ತಿಗೆ ಸಂಗಾತಿ ಆಗುತ್ತೀರಾ ಎಂದು ಕೇಳಿದ್ದಾಳೆ.
ಈಕೆಯ ಬಣ್ಣಬಣ್ಣದ ಮಾತುಗಳಿಗೆ ಮರುಳಾದ ಉದ್ಯಮಿ, ಆಕೆ ಇದ್ದ ಸ್ಥಳದ ಲೊಕೇಶನ್ ಹಾಕಿಸಿಕೊಂಡಿದ್ದಾರೆ. ಲೊಕೇಶನ್ ತಲುಪಿದ್ದ ಉದ್ಯಮಿಗೆ ಶಾಕ್‌ವೊಂದು ಕಾದಿತ್ತು. ಉದ್ಯಮಿ ರೂಮಿಗೆ ಬರುತ್ತಿದ್ದಂತೆ ನಾಲ್ವರು ಆತನ ಬಳಿಯಿದ್ದ 21 ಸಾವಿರ ರೂ. ಕಿತ್ತುಕೊಂಡಿದ್ದಾರೆ. ಮಾತ್ರವಲ್ಲದೆ ಎರಡು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: IT raid: ಶೋಭಾ ಡೆವಲಪರ್ಸ್ ಮೇಲೆ ಐಟಿ ದಾಳಿ; ಬೆಂಗಳೂರು- ಚೆನ್ನೈ ಅಧಿಕಾರಿಗಳ ಜಂಟಿ ಕಾರ್ಯಾಚರಣೆ
ನಂತರ ಕ್ರೆಡಿಟ್ ಕಾರ್ಡ್ ಇದ್ದರೆ ಕೊಡು ಇಲ್ಲವಾದರೆ ಮೆಹರ್ ಜತೆ ಮದುವೆ ಮಾಡಿಸಿ ಮುಂಜಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಉದ್ಯಮಿ ಕ್ರೆಡಿಟ್ ಕಾರ್ಡ್ ಮನೆಯಲ್ಲಿ ಇದೆ ತಂದು ಕೊಡುವುದಾಗಿ ಹೇಳಿ, ಅಲ್ಲಿಂದ ತಪ್ಪಿಸಿಕೊಂಡು ನೇರ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಓಡಿ ಬಂದಿದ್ದಾರೆ. ಸದ್ಯ ಉದ್ಯಮಿ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹನಿಟ್ರ್ಯಾಪ್ ಗ್ಯಾಂಗ್‌ಗೆ ಬಲೆ ಬೀಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ