Site icon Vistara News

Honnavar News: ಕಳ್ಳಬಟ್ಟಿ ಸಾರಾಯಿ ಮಾರಾಟ; ಅಬಕಾರಿ ಅಧಿಕಾರಿಗಳ ದಾಳಿ, 650 ಲೀ. ಬೆಲ್ಲದ ಕೊಳೆ ವಶ

Toddy liquor honnavar Excise officials

#image_title

ಹೊನ್ನಾವರ: ಮನೆ ಮತ್ತು ತೋಟದಲ್ಲಿ ಅಕ್ರಮವಾಗಿ 650 ಲೀ. ಬೆಲ್ಲದ ಕೊಳೆಯನ್ನು ದಾಸ್ತಾನು ಮಾಡಿ ಕಳ್ಳಬಟ್ಟಿ ಸಾರಾಯಿ (Toddy liquor) ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಖರ್ವಾದಲ್ಲಿ ಮಂಗಳವಾರ (ಮಾ.28) ನಡೆದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಖರ್ವಾ ಗ್ರಾಮದಲ್ಲಿ ಗಸ್ತು ನಡೆಸುತ್ತಿರುವಾಗ, ಮಂಜು ಮರಿ ಗೌಡ ಎಂಬಾತ ಅಕ್ರಮವಾಗಿ ಬೆಲ್ಲದ ಕೊಳೆಯನ್ನು ದಾಸ್ತಾನಿಟ್ಟುಕೊಂಡು ಕಳ್ಳಬಟ್ಟಿ ಸಾರಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಿಷಯ ಗೊತ್ತಾಗಿದೆ.

ಈ ಮಾಹಿತಿ ಆಧಾರದ ಮೇರೆಗೆ ಕಾರವಾರ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಹೊನ್ನಾವರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಆರೋಪಿತನ ಮನೆ ಹಾಗೂ ತೋಟದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಬ್ಯಾರಲ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 650 ಲೀ. ಬೆಲ್ಲದ ಕೊಳೆಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Karnataka Elections 2023 : ಬಿಎಸ್‌ವೈ ಸರ್ವೋಚ್ಚ ನಾಯಕ, ಕಠಿಣ ಭಾಷೆ ಬಳಸಿದ್ದರೆ ಕ್ಷಮೆ ಇರಲಿ ಎಂದ ಸೋಮಣ್ಣ

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ದಾಮೋದರ್ ಎನ್. ನಾಯ್ಕ, ಅಬಕಾರಿ ಉಪ ನಿರೀಕ್ಷಕರಾದ ಕೆ.ಆರ್. ಪಾವಸ್ಕರ್, ಗಂಗಾಧರ್ ಅಂತರಗಟ್ಟಿ ಹಾಗೂ ಅಬಕಾರಿ ಪೇದೆಯವರಾದ ಶ್ರೀಕಾಂತ್ ಜಾಧವ್, ಮುತ್ತಪ್ಪ ಬುಗಡಿಕಟ್ಟೆ ಮತ್ತು ರಮೇಶ ರಾಮಚಂದ್ರ ರಾಥೋಡ ಪಾಲ್ಗೊಂಡಿದ್ದರು.

Exit mobile version